newsics.com
ಗುಜರಾತ್: ಒಂದೇ ಶಾಲೆಯ ಹಲವು ಮಕ್ಕಳು ಒಟ್ಟಿಗೆ ಕೈಕೊಯ್ದುಕೊಂಡಿರುವ ಘಟನೆ ಬನಸ್ಕಾಂತದಲ್ಲಿರುವ ರಾಜ್ಪುರ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಯಾವುದೋ ಗೇಮ್ ಆಡುವ ನೆಪದಲ್ಲಿ ಮಕ್ಕಳು ಕೈಗಳನ್ನು ಕೊಯ್ದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಮಕ್ಕಳು ಮೊಬೈಲ್ ಫೋನ್‌ಗಳು, ಆನ್‌ಲೈನ್ ಆಟಗಳು ಮತ್ತು ಹಿಂಸಾತ್ಮಕ ಚಟುವಟಿಕೆಗಳಿಂದ ದೂರವಿರಲು ಸೂಚಿಸಲಾಗಿದೆ ಎಂದು ಡಿಪಿಒ ತಿಳಿಸಿದ್ದಾರೆ. ಆನ್‌ಲೈನ್ ಗೇಮಿಂಗ್‌ನ ಅನುಮಾನದ ಮೇಲೆ ದಿಸಾ ರೂಲರ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಜಿಲ್ಲಾ ಶಿಕ್ಷಣ ಅಧಿಕಾರಿಯ ಸೂಚನೆಯ ಮೇರೆಗೆ, ಇಡೀ ವಿಷಯದ ಬಗ್ಗೆ ಸಮಗ್ರ ತನಿಖೆಯನ್ನು ಪ್ರಾರಂಭಿಸಲಾಗಿದೆ.