ಬಾಲಿವುಡ್ ದಬಾಂಗ್ ಬಾಯ್ ಸಲ್ಮಾನ್ ಖಾನ್ ಹಾಗೂ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (National Crush Rashmika Mandanna) ಅಭಿನಯದ ಬಹು ನಿರೀಕ್ಷಿತ ಚಿತ್ರ ಸಿಕಂದರ್ ಇದೇ ಮಾರ್ಚ್ 30ರಂದು ತೆರೆಗೆ ಬರ್ತಿದೆ. ಭಾಯಿಜಾನ್ ಸಿನಿಮಾ ವೀಕ್ಷಣೆಗೆ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಸಿಕಂದರ್ ಸಿನಿಮಾ ಟ್ರೇಲರ್ ಬಿಡುಗಡೆ ನಂತ್ರ ಸಿನಿಮಾ ಹೆಚ್ಚು ಸುದ್ದಿ ಮಾಡಿದ್ದು, ಚಿತ್ರದ ಮುಂಗಡ ಬುಕಿಂಗ್ ಭಾರಿ ಸಂಖ್ಯೆಯಲ್ಲಿ ನಡೆಯುತ್ತಿದೆ. ಸಿನಿಮಾ ಕ್ರೇಜ್ ಹೆಚ್ಚಾಗ್ತಿದ್ದಂತೆ ಸಿನಿಮಾ ಟಿಕೆಟ್ ಬೆಲೆ ಗಗನಕ್ಕೇರಿದೆ. ದುಡ್ಡಿದ್ದೋರು ಮಾತ್ರ ಸಿನಿಮಾ ನೋಡ್ಬಹುದು ಎನ್ನುವ ಸ್ಥಿತಿ ನಿರ್ಮಾಣವಾಗಿದೆ.