newsics.com
ಪ್ಯಾರಿಸ್: ಫ್ರಾನ್ಸ್ ನಲ್ಲಿ ನಡೆಯುತ್ತಿದ್ದ ಏರ್ ಶೋ ವೇಳೆ ಎರಡು ವಿಮಾನಗಳು ಡಿಕ್ಕಿಯಾಗಿ ಮೂರು ಮಂದಿ ಗಾಯಗೊಂಡಿರುವ ಘಟನೆ ಮಂಗಳವಾರ ಸಂಭವಿಸಿದೆ.
ಈಶಾನ್ಯ ಫ್ರಾನ್ಸ್‌ನ ವಾಯುನೆಲೆಯ ಬಳಿ ಫ್ರೆಂಚ್ ವಾಯುಪಡೆಯ ಚಮತ್ಕಾರಿಕ ತಂಡದ ಎರಡು ವಿಮಾನಗಳು ಡಿಕ್ಕಿಯಾಗಿದೆ. ಈ ಅಪಘಾತದಲ್ಲಿ ಮೂವರು ಪೈಲಟ್ ಗಳು ಗಾಯಗೊಂಡಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿ ಕೆಳಗೆ ಬಿದ್ದಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.