newsics.com
ಹೈದರಾಬಾದ್: ಪ್ರಯಾಣಿಸುತ್ತಿದ್ದ ರೈಲಿನ ಬೋಗಿಲ್ಲಿ ಅತ್ಯಾಚಾರಕ್ಕೆ ಮುಂದಾದ ಕಾಮುಕನೊಬ್ಬನಿಂದ ತಪ್ಪಿಸಿಕೊಂಡು ಯುವತಿ ಚಲಿಸುವ ರೈಲಿನಿಂದ ಹಾರಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.
ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 23 ವರ್ಷದ ಸಂತ್ರಸ್ತೆ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಕಳೆದ ಮಾರ್ಚ್ 22 ರಂದು ಸಂಜೆ ಸಿಕಂದರಾಬಾದ್ ರೈಲು ನಿಲ್ದಾಣದಿಂದ ಮೇಡ್ಚಲ್‍ಗೆ ಎಂಎಂಟಿಎಸ್ ರೈಲಿನ ಮಹಿಳಾ ಕೋಚ್‍ನಲ್ಲಿ ಏಕಾಂಗಿಯಾಗಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಅಲ್ವಾಲ್ ರೈಲ್ವೇ ನಿಲ್ದಾಣದಲ್ಲಿ ಸುಮಾರು 25 ವರ್ಷ ವಯಸ್ಸಿನ ಒಬ್ಬ ಅಪರಿಚಿತ ವ್ಯಕ್ತಿ ಪ್ರವೇಶಿಸಿದ್ದ ನಂತರ ತನ್ನ ಬಳಿಗೆ ಬಂದು ಅಸಭ್ಯವಾಗಿ ವರ್ತಿಸಿ, ಅತ್ಯಾಚಾರಕ್ಕೆ ಪ್ರಯತ್ನಿಸಿದ ನಂತರ ಚಲಿಸುವ ರೈಲಿನಿಂದ ಜಿಗಿದಿದ್ದಾಳೆ. ಕೆಲವು ದಾರಿಹೋಕರು ಅವಳನ್ನು ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಹಿಳೆಯ ದೂರಿನ ಆಧಾರದ ಮೇಲೆ ಪ್ರಕರಣವನ್ನು ದಾಖಲಿಸಲಾಗಿದೆ.