newsics.com
ಐಟಿ ದಾಳಿ ಹೀಗ ಎಲ್ಲೇ ಕಡೆ ನಡೆಯುತ್ತಿರುವ ಬಗ್ಗೆ ಸುದ್ದಿಯಾಗುತ್ತಲೆ ಇರುತ್ತದೆ. ಹಾಗಾದ್ರೆ ಮನೆಯಲ್ಲಿ ಎಷ್ಟು ನಗದು ಇಟ್ಟುಕೊಳ್ಳಬಹುದು ಎಂಬ ಪ್ರಶ್ನೆ ಎಲ್ಲರೂ ಇದೆ. ಮನೆಯಲ್ಲಿ ಗರಿಷ್ಠ ಎಷ್ಟು ನಗದನ್ನು ಇಟ್ಟುಕೊಳ್ಳಬಹುದು ಎಂಬುದರ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ…
ಮನೆಯಲ್ಲಿ ನಗದು ಇಡುವುದಕ್ಕೆ ಆದಾಯ ತೆರಿಗೆ ಕಾಯ್ದೆಯಲ್ಲಿ ಯಾವುದೇ ನಿಯಮವಿಲ್ಲ. ಆದರೆ ಕಾನೂನುಬದ್ಧವಾಗಿ ಬಂದ ಹಣವನ್ನು ಯಾವುದೇ ವ್ಯಕ್ತಿಯು ಮನೆ ಅಥವಾ ಕಚೇರಿಯಲ್ಲಿ ಸರಿಯಾದ ದಾಖಲೆಯೊಂದಿಗೆ ಇಟ್ಟುಕೊಳ್ಳಬಹುದು. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಿಮ್ಮ ಮನೆ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಆ ಹಣದ ಬಗ್ಗೆ ನಿಮ್ಮ ಬಳಿ ಸರಿಯಾದ ದಾಖಲೆಗಳು ಇರಬೇಕು..
ನೀವು ನಿಮ್ಮ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಮತ್ತು ಇತರ ದಾಖಲೆಗಳ ಮೂಲಕ ಈ ಹಣ ನಿಮ್ಮ ಆದಾಯ ಅಥವಾ ಉಳಿತಾಯ ಎಂದು ಸಾಬೀತುಪಡಿಸಿದರೆ, ಯಾವುದೇ ಸಮಸ್ಯೆ ಇರುವುದಿಲ್ಲ. ಒಂದು ವೇಳೆ ಹಣ ಗಳಿಕೆಗೆ ಸರಿಯಾದ ಪುರಾವೆಗಳು ಇಲ್ಲದಿದ್ದಾರೆ ಆ ಹಣವನ್ನು ಕಪ್ಪು ಹಣವೆಂದು ಹೇಳಲಾಗುತ್ತದೆ.
ಹಾಗಾಗಿ ಹಣವನ್ನು ಮನೆಯಲ್ಲಿ ಅಥವಾ ಕಚೇರಿಯಲ್ಲಿ ಇಟ್ಟುಕೊಳ್ಳುವಾಗ ಸರಿಯಾದ ದಾಖಲೆಯನ್ನು ಹೊಂದಿರುವುದು ಅನಿವಾರ್ಯ.