newsics.com
ಬೆಂಗಳೂರು: ಕಾಲೇಜು ಪ್ರೊಫೆಸರ್ ಒಬ್ರು ವಿದ್ಯಾರ್ಥಿಗಳ ಮುಂದೆ ಡ್ಯಾನ್ಸ್ ಮಾಡಿದ್ದು, ಸದ್ಯ ಈ ವೀಡಿಯೋ ಸಖತ್ ವೈರಲ್ ಆಗುತ್ತಿದೆ. ಇವರ ಈ ನೃತ್ಯ ಮೋಡಿಗೆ ನೆಟ್ಟಿಗರು ಮನ ಸೋತಿದ್ದು ಅಂತೂ ಸತ್ಯ.ಬೆಂಗಳೂರಿನ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಸಂಸ್ಥೆಯ ಪ್ರೊಫೆಸರ್ ಪುಷ್ಪರಾಜ್. ವಿದ್ಯಾರ್ಥಿಗಳ ಮುಂದೆ ಬೀಟ್‌ಬಾಕ್ಸ್ ಲಯಕ್ಕೆ ತಕ್ಕಂತೆ ಹಿಪ್-ಹಾಪ್ ಡ್ಯಾನ್ಸ್ ಮಾಡಿ ಫುಲ್ ಶೈನ್ ಆಗಿದ್ದಾರೆ. ಇವರ ಈ ಟ್ಯಾಲೆಂಟ್‌ನ್ನು ಶಿಳ್ಳೆ, ಚಪ್ಪಾಳೆ ತಟ್ಟುವ ಮೂಲಕ ವಿದ್ಯಾರ್ಥಿಗಳು ಶ್ಲಾಘಿಸಿದ್ದಾರೆ.ಹರ್ಷ್ ಗೋಯೆಂಕಾ ಎಂಬವರು ಈ ವಿಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಬೆಂಗಳೂರಿನ ಕಾಲೇಜು ಪ್ರಾಧ್ಯಾಪಕರ ಮೈಕಲ್ ಜಾಕ್ಸನ್ ಮೂವ್ಸ್” ಎಂಬ ಶೀರ್ಷಿಕೆಯನ್ನು ಬರೆದು ಹಂಚಿಕೊಂಡಿದ್ದಾರೆ.