ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ಮಂದಣ್ಣ ಒಟ್ಟಿಗೆ ನಟಿಸಿರುವ ಬಹುನಿರೀಕ್ಷಿತ ‘ಸಿಕಂದರ್’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.
ಎ.ಆರ್. ಮುರುಗದಾಸ್ ನಿರ್ದೇಶನದ ಈ ಸಿನಿಮಾ ಮಾ.30ರಂದು ತೆರೆಮೇಲೆ ಬರಲಿದೆ.
ಸಿಕಂದರ್’ ಚಿತ್ರದ 3 ನಿಮಿಷ 8 ಸೆಕೆಂಡ್‌ಗಳ ಟ್ರೈಲರ್ ಬಿಡುಗಡೆಯಾಗಿದ್ದು, ಅನ್ಯಾಯದ ವಿರುದ್ಧ ಹೋರಾಡುವ ವ್ಯಕ್ತಿಯಾಗಿ ಸಲ್ಮಾನ್ ಖಾನ್ ಕಾಣಿಸಿಕೊಂಡಿದ್ದಾರೆ. ಭ್ರಷ್ಟ ರಾಜಕಾರಣಿಯ ಪಾತ್ರದಲ್ಲಿ ಸತ್ಯರಾಜ್ ನಟಿಸಿದ್ದಾರೆ.
ಈ ಚಿತ್ರದಲ್ಲಿ ಸಲ್ಮಾನ್, ರಶ್ಮಿಕಾ ಜೊತೆ ಕಾಜಲ್, ಸತ್ಯರಾಜ್, ಕಾಂತಾರ ಖ್ಯಾತಿಯ ಕಿಶೋರ್, ಶರ್ಮಾನ್ ಜೋಶಿ, ಜತಿನ್ ಸರ್ನಾ ಸೇರಿದಂತೆ ಅನೇಕರು ನಟಿಸಿದ್ದಾರೆ. ಸಿಕಂದರ್’ ಸಿನಿಮಾ ಟ್ರೈಲರ್ ಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.