newsics.com
ಹಾಸನ: ಆನೆಗಳ ಉಪಟಳದಿಂದ ಬೇಸತ್ತಿದ್ದ ಜನರಿಗಿದು ಖುಷಿ ಕೊಡುವ ಸುದ್ದಿ. ಮೂರು ಕಾಡಾನೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆಹಿಡಿದಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಹಾಸನ ಜಿಲ್ಲೆಯ ಸಕಲೇಶಪುರ ಮತ್ತು ಬೇಲೂರು ಸುತ್ತಮುತ್ತ ಅನೇಕ ಗ್ರಾಮಗಳಲ್ಲಿ ಆನೆಗಳ ಉಪಟಳ ನೀಡುತ್ತಿದ್ದ ಕಾಡಾನೆಗಳನ್ನು ಸೆರೆ ಹಿಡಿದು ಸ್ಥಳಾಂತರ ಮಾಡಲಾಗಿದೆ.
ಎಕ್ಸ್‌ನಲ್ಲಿ ಪೋಸ್ಟ್ ಮೂಲಕ ಮಾಹಿತಿ ಹಂಚಿಕೊಂಡಿರುವ ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ ಅವರು, ‘ಹಾಸನ ಜಿಲ್ಲೆಯ ಸಕಲೇಶಪುರ, ಬೇಲೂರು ಸುತ್ತಮುತ್ತ ಜನರಿಗೆ ತೀವ್ರ ಉಪಟಳ ನೀಡುತ್ತಿದ್ದ ಆನೆಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಯಶಸ್ವಿಯಾಗಿದೆ. ಸಕಲೇಶಪುರ ಮತ್ತು ಬೇಲೂರು ಸುತ್ತಮುತ್ತ ಅನೇಕ ಗ್ರಾಮಗಳಿಗೆ ಭೀಕರ ಸಮಸ್ಯೆಯಾಗಿದ್ದ ಆನೆಗಳ ಉಪಟಳ ತಡೆಯಲು ಅರಣ್ಯ ಇಲಾಖೆ ಮಾರ್ಚ್ 16ರಿಂದ ಕಾರ್ಯಾಚರಣೆ ಆರಂಭಿಸಿತ್ತು. ಭಾನುವಾರ ಹೆಬ್ಬನಹಳ್ಳಿ ಗ್ರಾಮದ ಬಳಿ 3ನೇ ಆನೆಯನ್ನೂ ಯಶಸ್ವಿಯಾಗಿ ಸೆರೆ ಹಿಡಿಯಲಾಗಿದೆ.
Car costly ಹೊಸ ಕಾರು ಖರೀದಿದಾರರಿಗೆ ಶಾಕ್: ಕಾರುಗಳ ಬೆಲೆ ಮತ್ತಷ್ಟು ದುಬಾರಿ