Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ನಿಮ್ಮ ಫೋನ್ ಹ್ಯಾಕ್ ಆಗಿದ್ಯಾ? ಹಾಗಿದ್ರೆ ಈ ಟ್ರಿಕ್ಸ್ ಫಾಲೋ ಮಾಡಿ!
ಲೈಫ್‌ಸ್ಟೈಲ್

ನಿಮ್ಮ ಫೋನ್ ಹ್ಯಾಕ್ ಆಗಿದ್ಯಾ? ಹಾಗಿದ್ರೆ ಈ ಟ್ರಿಕ್ಸ್ ಫಾಲೋ ಮಾಡಿ!

Share
2 Min Read
SHARE

newsics.com

ಇತ್ತೀಚಿಗೆ ಸ್ಮಾರ್ಟ್ ಫೋನ್ ಹ್ಯಾಕ್ ಆಗುತ್ತೆ ಎನ್ನುವ ವಿಚಾರ ತುಂಬಾ ಕಾಮನ್ ಆಗಿಬಿಟ್ಟಿದೆ. ಆದರೆ ಫೋನ್ ಹ್ಯಾಕ್ ಆದರೆ ಅದರ ಪರಿಣಾಮ ಅಷ್ಟೇ ಕೆಟ್ಟದ್ದಾಗಿರುತ್ತದೆ. ಹಾಗಾಗಿ ಸ್ಮಾರ್ಟ್ ಫೋನ್ ಹ್ಯಾಕ್ ಆಗುವ ಬಗ್ಗೆ, ಫೋನ್ ಹ್ಯಾಕ್ ಆದರೆ ಏನು ಮಾಡಬೇಕು ಎನ್ನುವ ಬಗ್ಗೆ ತಿಳಿದುಕೊಳ್ಳುವುದು ಅತ್ಯವಶ್ಯಕ.

ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಮ್ ವಂಚನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇದೇ ಕಾರಣಕಲ್ಕೆ ಕೆಲವೊಮ್ಮೆ ನಿಮ್ಮ ಸ್ಮಾರ್ಟ್ಫೋನ್ಗಳು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ, ಮತ್ತು ಅಪ್ಲಿಕೇಶನ್ಗಳು ಆಟೋಮ್ಯಾಟಿಕ್ ಆಗಿ ಡೌನ್ ಲೋಡ್ ಆಗುತ್ತಿರುತ್ತದೆ. ಈ ಸಂದರ್ಭಲ್ಲಿ ನಿಮ್ಮ ಸ್ಮಾರ್ಟ್ಫೋನ್ ಅನ್ನು ಸರಿಯಾಗಿ ಚೆಕ್ ಮಾಡುವುದು ಉತ್ತಮ.

ಅಗತ್ಯವಿಲ್ಲದ ಅಪ್ಲಿಕೇಶನ್‌ಗಳು: ಬಳಕೆದಾರರು ಫೋನ್‌ನಲ್ಲಿ ಅಗತ್ಯವಿರುವ ಅಪ್ಲಿಕೇಶನ್‌ಗಳನ್ನು ಮಾತ್ರ ಡೌನ್‌ಲೋಡ್ ಮಾಡುತ್ತಾರೆ. ಆದರೆ ಕೆಲವೊಮ್ಮೆ ಫೋನ್‌ನಲ್ಲಿ ಅಪರಿಚಿತ ಅಪ್ಲಿಕೇಶನ್‌ಗಳು ಸಹ ಕಾಣಿಸಿಕೊಳ್ಳುತ್ತವೆ. ಇದು ಆಟೋಮ್ಯಾಟಿಕ್ ಆಗಿ ಡೌನ್ಲೋಡ್ ಆಗಿರುತ್ತದೆ. ಬಳಕೆದಾರರು ಡೌನ್‌ಲೋಡ್ ಮಾಡದ ಫೋನ್‌ನಲ್ಲಿ ಅಂತಹ ಅನಧಿಕೃತ ಅಪ್ಲಿಕೇಶನ್‌ಗಳಿದ್ದರೆ, ಅದನ್ನು ಅನುಮಾನಿಸಬೇಕು. ಸೈಬರ್ ಅಪರಾಧಿಗಳು ಸಾಧನದಲ್ಲಿ ಮಾಲ್‌ವೇರ್ ಅನ್ನು ಸ್ಥಾಪಿಸಲು ಮತ್ತು ಮಾಹಿತಿಯನ್ನು ಕದಿಯಲು ಈ ರೀತಿಯ ಅಪ್ಲಿಕೇಶನ್‌ಗಳನ್ನು ಬಳಸಬಹುದು.

ಬ್ಯಾಟರಿ ಸಾಮರ್ಥ್ಯ: ಫೋನ್ ಹಿಂದಿನದಕ್ಕಿಂತ ವೇಗವಾಗಿ ಚಾರ್ಜ್ ಆಗುತ್ತಿದೆ ಎಂದು ನೀವು ಭಾವಿಸಿದರೆ ಖಂಡಿತವಾಗಿಯೂ ಅನುಮಾನಾಸ್ಪದವಾಗಿರಬಹುದು. ಇದು ಸೈಬರ್ ದಾಳಿಯಿಂದ ಕೆಲವೊಮ್ಮೆ ಸಂಭವಿಸುತ್ತದೆ. ಫೋನ್ ಬಳಸುವಾಗ ಸರಿಯಾಗಿ ಬ್ಯಾಟರಿ ಬಾಳಿಕೆ ನೀಡದಿದ್ದರೆ ಅದು ಸೈಬರ್ ಬೆದರಿಕೆಯ ಸಂಕೇತವಾಗಿದೆ. ಆದ್ದರಿಂದ ಫೋನ್‌ನ ಬ್ಯಾಟರಿ ಬ್ಯಾಕಪ್ ಸಾಮರ್ಥ್ಯವನ್ನು ಆಗಾಗ ಚೆಕ್ ಮಾಡುತ್ತಿರಬೇಕು.

ಸ್ಮಾರ್ಟ್ಫೋನ್ ಸ್ಲೋ: ಯಾರಾದರೂ ನಿಮ್ಮ ಫೋನ್ ಹ್ಯಾಕ್ ಮಾಡಿದರೆ, ಡಿವೈಸ್ ನ ಕಾರ್ಯಕ್ಷಮತೆ ಹಾಳಾಗುತ್ತದೆ. ಇದರಿಂದ ಕೆಲವೊಮ್ಮೆ ಸ್ಮಾರ್ಟ್ಫೋನ್ಗಳು ಹ್ಯಾಂಗ್ ಆಗಲು ಪ್ರಾರಂಭವಾಗುತ್ತದೆ. ಈ ಸಂದರ್ಭದಲ್ಲಿ ನೀವು ಸ್ಮಾರ್ಟ್ಫೋನ್ ಏಕೆ ಹ್ಯಾಂಗ್ ಆಗುತ್ತಿದೆ ಎಂದು ಚೆಕ್ ಮಾಡ್ಬೇಕು ಅಥವಾ ಸರ್ವೀಸ್ ಸೆಂಟರ್ಗೆ ನೀಡ್ಬೇಕು.

ಡೇಟಾ ಖಾಲಿಯಾಗುತ್ತಿದೆ: ಇನ್ನು ದೈನಂದಿನ ಮೊಬೈಲ್ ಡೇಟಾವು ವೇಗವಾಗಿ ಖಾಲಿಯಾಗುತ್ತಿದೆ ಎಂದರೂ ಮೊಬೈಲ್ ಹ್ಯಾಕ್ ಆಗಿರಬಹುದು ಎಂದು ಸಂದೇಹ ಪಡಬಹುದು. ಏಕೆಂದರೆ ಸ್ಮಾರ್ಟ್ಫೋನ್ನಲ್ಲಿ ಕೆಲವೊಮ್ಮೆ ಇಂಟರ್ನೆಟ್ ಬಳಸೋದೆ ಇಲ್ಲ. ಆದರೂ ಈ ಸಂದರ್ಭದಲ್ಲಿ ಕೆಲವೊಮ್ಮೆ ತನ್ನಷ್ಟಕ್ಕೆ ಇಂಟರ್ನೆಟ್ ಮುಗಿಯುತ್ತದೆ. ಇದನ್ನು ಸರಿಯಾಗಿ ಚೆಕ್ ಮಾಡಬಹುದು. ಏಕೆಂದರೆ ಹ್ಯಾಕರ್ಸ್ಗಳು ನಮ್ಮ ಡೇಟಾವನ್ನು ಬಳಸುತ್ತಿರಬಹುದು. ಇದಕ್ಕಾಗಿ ನೀವು ಮೊಬೈಲ್ನಲ್ಲಿ ಡೇಟಾ ಸೆಟ್ಟಿಂಗ್ಸ್ಗೆ ಹೋಗಿ ಚೆಕ್ ಮಾಡಬಹುದು.

ಸ್ಮಾರ್ಟ್ಫೋನ್ ಹೀಟ್: ಸ್ಮಾರ್ಟ್ ಫೋನ್ ಅನ್ನು ಅತಿಯಾಗಿ ಬಳಸಿದಾಗ ಬಿಸಿಯಾಗೋದು ಸಾಮಾನ್ಯ. ಆದರೆ ಕೆಲವೊಮ್ಮೆ ಸ್ವಲ್ಪ ಬಳಸಿದ್ರೂ ಸ್ಮಾರ್ಟ್ಫೋನ್ಗಳು ಬಿಸಿಯಾಗುತ್ತದೆ. ಇದು ಮಾಲ್ವೇರ್ ಹಿನ್ನೆಲೆಯಲ್ಲಿ ಚಾಲನೆಯಲ್ಲಿರುವ ಕಾರಣ ಫೋನ್ ಬಳಕೆಯಲ್ಲಿಲ್ಲದಿದ್ದರೂ ಸಹ ಬಿಸಿಯಾಗುವ ಸೂಚನೆಗಳಾಗಿದೆ. ಆದ್ದರಿಂದ ಸ್ಮಾರ್ಟ್ಫೋನ್ ಬಿಸಿಯಾದಾಗ ಸುಮ್ಮನಿರುವುದು ಬಿಟ್ಟು ತಕ್ಷಣ ಚೆಕ್ ಮಾಡುವುದು ಉತ್ತಮ.

ಬ್ರೌಸರ್ ಹಿಸ್ಟರಿ: ನಿಮ್ಮ ಫೋನ್‌ನ ಬ್ರೌಸರ್ ಹಿಸ್ಟರಿಯನ್ನು ಆಗಾಗ ಚೆಕ್ ಮಾಡುತ್ತಿರಬೇಕು. ನೀವು ಹುಡುಕದ ವಿಷಯಗಳನ್ನು ಇದರಲ್ಲಿ ಕೆಲವೊಮ್ಮೆ ಇರಬಹುದು. ವಿಶೇಷವಾಗಿ ಫೋನ್ ಸ್ಪೈವೇರ್ ಡೌನ್‌ಲೋಡ್‌ಗಳ ಇತಿಹಾಸವನ್ನು ಹೊಂದಿದ್ದರೆ? ಆ ವೇಳೆ ಪರಿಶೀಲಿಸಿ. ಏಕೆಂದರೆ ಬ್ರೌಸರ್ ಮೂಲಕ ಫೋನ್‌ನಲ್ಲಿ ಮಾಲ್‌ವೇರ್ ಅನ್ನು ಸ್ಥಾಪಿಸುವ ಸಂದರ್ಭಗಳು ಹೆಚ್ಚಿವೆ.

ಸ್ವಿಚ್ ಆಫ್/ರೀಸ್ಟಾರ್ಟ್ ಸಮಸ್ಯೆಗಳು: ಫೋನ್ ಸ್ವಿಚ್ ಆಫ್ ಮತ್ತು ರೀಸ್ಟಾರ್ಟ್ ಮಾಡುವಾಗ ಸಮಸ್ಯೆಗಳು ಉಂಟಾದರೆ ಬಳಕೆದಾರರು ಈ ಸಮಸ್ಯೆಯ ಬಗ್ಗೆ ತಿಳಿದುಕೊಳ್ಳಬೇಕು. ಹ್ಯಾಕರ್ಗಳು ಸ್ಥಾಪಿಸಿದ ಅಪ್ಲಿಕೇಶನ್‌ಗಳು ಕಾರ್ಯನಿರ್ವಹಿಸಲು ಸಾಧನವು ಯಾವಾಗಲೂ ಆನ್ ಆಗಿರುವುದನ್ನು ಸೈಬರ್ ಅಪರಾಧಿಗಳು ಈ ರೀತಿಯ ಸೆಟ್ಟಿಂಗ್ ಮಾಡಿಕೊಳ್ಳುತ್ತಾರೆ. ಅದಕ್ಕಾಗಿ ನಿಮ್ಮ ಮೊಬೈಲ್ ಸ್ವಿಚ್‌ಆಫ್ ಅಥವಾ ರೀಸ್ಟಾರ್ಟ್ ಆಗವುದಿಲ್ಲ.

TAGGED:follow these tricks!Has your phone been hacked? If so
Share This Article
Facebook Twitter Copy Link Print
Previous Article ʼಚಿನ್ನದ ಬಾಂಡ್‌ʼ ಹೂಡಿಕೆದಾರರಿಗೆ ಭರ್ಜರಿ ಆದಾಯ ; ಮೂರು ಪಟ್ಟು ಲಾಭ ಸಾಧ್ಯತೆ !
Next Article Today’s almanac ಶುಭೋದಯ, ಫಾಲ್ಗುಣ ಮಾಸ ಕೃಷ್ಣ ಪಕ್ಷ ದ್ವಿತೀಯ, 16-03-2025, ಭಾನುವಾರ

Popular Posts

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read

You Might Also Like

ಪ್ರಮುಖಆರೋಗ್ಯಲೈಫ್‌ಸ್ಟೈಲ್

Cooking Oil Storage ನೀವು ಬಳಸುವ ಅಡುಗೆ ಎಣ್ಣೆ ಸುರಕ್ಷಿತವೇ? ಎಣ್ಣೆ ಹಾಳಾಗಿದೆಯೇ ಎಂದು ತಿಳಿಯಲು ಈ ಮುಖ್ಯ ಸಂಗತಿಗಳನ್ನು ಗಮನಿಸಿ

2 Min Read
ಆರೋಗ್ಯ

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read
ಆರೋಗ್ಯ

Are You Experiencing These Symptoms? ನಿಮಗೂ ಈ ಲಕ್ಷಣಗಳಿದೆಯಾ? ವಿಟಮಿನ್ D ಕೊರತೆಯಿರಬಹುದು!

2 Min Read
ಪ್ರಮುಖಆರೋಗ್ಯ

Health ಬೆಳ್ಳುಳ್ಳಿ ತಿಂದರೆ ಕೊಲೆಸ್ಟ್ರಾಲ್ ಕರಗುತ್ತೆ ಅನ್ನೋದು ನಿಜನಾ? ವೈದ್ಯರು ಹೇಳುವ ಅಸಲಿ ಸತ್ಯ ಇಲ್ಲಿದೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?