newsics.com
ಉತ್ತರ ಪ್ರದೇಶ: ಉತ್ತರ ಪ್ರದೇಶದ ಬುಲಂದ್ಶಹರ್ ಮೂಲದ ಒಂದೂವರೆ ವರ್ಷದ ಪುಟ್ಟ ಮಗುವೊಂದು ಈಗ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಇದಕ್ಕೆ ಕಾರಣವಾಗಿದ್ದು, ಮಗುವಿನ ಕಣ್ಣಿನ ಬಣ್ಣ. ಮಗು ಬೆಕ್ಕಿನ ಕಣ್ಣನ್ನು ಹೊಂದಿದ್ದಾನೆ. ಆದರೆ ಮಗುವಿನ ಕಣ್ಣಿನ ಬಣ್ಣ ಆತ ಧರಿಸಿದ್ದ ಬಟ್ಟೆಗೆ ತಕ್ಕಂತೆ ಬದಲಾಗುತ್ತಿದೆ ಎಂದು ಭಾರಿ ಸುದ್ದಿಯಾಗುತ್ತಿದೆ. ಈ ಒಂದು ವರ್ಷ 4 ತಿಂಗಳ ಮಗು ಅರ್ಷ್ ಬೆಕ್ಕಿನಂತ ತಿಳಿ ನೀಲಿ ಬಣ್ಣದ ಕಣ್ಣುಗಳನ್ನು ಹೊಂದಿದ್ದಾನೆ. ಈತನ ಕಣ್ಣಿನ ಬಣ್ಣಗಳು ಈತ ಧರಿಸಿದ ಬಟ್ಟೆಗಳಿಗೆ ಮ್ಯಾಚ್ ಆಗುತ್ತಿವೆ ಎನ್ನಲಾಗುತ್ತಿದೆ.
ಮಗುವನ್ನು ನೋಡುವುದಕ್ಕೆ ಅಲ್ಲಿಗೆ ಸಮೀಪದ ಊರುಗಳಿಂದ ಕುತೂಹಲೀಗ ಜನ ಆಗಮಿಸುತ್ತಿದ್ದಾರೆ. ಹೀಗಾಗಿ ಈ ಪುಟ್ಟ ಬಾಲಕ ಈಗ ಆ ಊರಿನಲ್ಲಿ ಸೆಲೆಬ್ರಿಟಿಯಾಗಿದ್ದಾನೆ. ಅರ್ಷ್ನ ತಾಯಿ ನಜ್ರೀನ್ ಮಗುವಿಗೆ ವಿವಿಧ ಬಣ್ಣಗಳ ಬಟ್ಟೆಯನ್ನು ತೊಡಿಸುತ್ತಿದ್ದಂತೆ ಕಣ್ಣಿನ ಬಣ್ಣ ಬದಲಾಗುತ್ತದೆ. ಮಗು ಧರಿಸಿದ ಬಟ್ಟೆಯ ಬಣ್ಣದ ಶೇಡ್ ಕಣ್ಣಿಗೂ ಬರುತ್ತದೆ. ಈತನ ಕಣ್ಣು ಗಾಢ ನೀಲಿ ಬಣ್ಣದಿಂದ ಹಸಿರು ಹಾಗೂ ಬೂದು ಬಣ್ಣಕ್ಕೆ ತಿರುಗುತ್ತದೆ. ಕಣ್ಣಿನ ಬಣ್ಣಗಳು ಸುತ್ತಮುತ್ತಲಿನ ವಾತಾವರಣಕ್ಕೆ ಹೊಂದಿಕೊಂಡು, ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತಿದೆ. ಮಗುವಿನ ಸಂಬಂಧಿಕರು ಇದನ್ನು ಪ್ರಕೃತಿಯ ವಿಸ್ಮಯವೆಂದು ಕರೆಯುತ್ತಿದ್ದಾರೆ. ಜೊತೆಗೆ ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಅನೇಕರು ಈ ಮಗುವನ್ನು ನೋಡುವುದಕ್ಕಾಗಿ ಪ್ರತಿದಿನವೂ ಅವರ ಮನೆಗೆ ಜಮಾಯಿಸುತ್ತಿದ್ದಾರೆ.
https://www.instagram.com/reel/DGumX6KTBes/?igsh=MWt5amZkb3B6eGI4cg==