Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Youtuber arrest ಪ್ರಚಾರಕ್ಕಾಗಿ ರೈಲು ಪ್ರಯಾಣಿಕನ ಕೆನ್ನೆಗೆ ಬಾರಿಸಿದ್ದ ಯೂಟ್ಯೂಬರ್ ಬಂಧನ, ವಿಡಿಯೋ ನೋಡಿ
ದೇಶಪ್ರಮುಖವೈರಲ್

Youtuber arrest ಪ್ರಚಾರಕ್ಕಾಗಿ ರೈಲು ಪ್ರಯಾಣಿಕನ ಕೆನ್ನೆಗೆ ಬಾರಿಸಿದ್ದ ಯೂಟ್ಯೂಬರ್ ಬಂಧನ, ವಿಡಿಯೋ ನೋಡಿ

Share
2 Min Read
SHARE

newsics.com

ಕೆಲವು ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳು ವೈರಲ್ ಆಗುವುದಕ್ಕಾಗಿ ಯಾವ ಮಟ್ಟಕ್ಕೂ ಇಳಿಯುತ್ತಾರೆ. ಇದರಿಂದ ಬೇರೆಯವರಿಗೆ ತೊಂದರೆಯಾಗುತ್ತದೆ ಎಂಬುದನ್ನೂ ಅವರು ಗಮನಕ್ಕೆ ತೆಗೆದುಕೊಳ್ಳುವುದಿಲ್ಲ.

ಸಾರ್ವಜನಿಕ ಸ್ಥಳಗಳಲ್ಲಿ ವೀಡಿಯೋ ಮಾಡುವುದರ ಜತೆ ಅಲ್ಲಿರುವ ಇತರರಿಗೂ ಕಿರಿಕಿರಿ ಉಂಟು ಮಾಡುತ್ತಾರೆ. ಇಲ್ಲೊಬ್ಬ ಯೂಟ್ಯೂಬರ್‌ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗುವುದಕ್ಕಾಗಿ ರೈಲಿನಲ್ಲಿ ಕಿಟಕಿ ಪಕ್ಕ ಕುಳಿತು ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರ ಕೆನ್ನೆಗೆ ಬಾರಿಸಿದ್ದಾನೆ. ಬಳಿಕ ಈ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾನೆ.

ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಕಾರ್ಯಾಚರಣೆಗಿಳಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಬಿಹಾರದ ರೈಲು ನಿಲ್ದಾಣವೊಂದರಲ್ಲಿ ಈ ಘಟನೆ ನಡೆದಿದೆ.

ವೈರಲ್ ಆದ ವೀಡಿಯೋದಲ್ಲಿ ಕಾಣಿಸುವಂತೆ ರೈಲು ನಿಲ್ದಾಣದ ಫ್ಲಾಟ್‌ಫಾರ್ಮ್‌ನಲ್ಲಿ ನಿಂತುಕೊಂಡ ಯೂಟ್ಯೂಬರ್‌, ನಿಧಾನವಾಗಿ ಚಲಿಸುತ್ತಿದ್ದ ರೈಲಿನ ಕಿಟಕಿ ಪಕ್ಕ ತನ್ನಷ್ಟಕ್ಕೆ ತಾನು ಕುಳಿತು ಹೊರಗೆ ನೋಡುತ್ತಿದ್ದ ಪ್ರಯಾಣಿಕನೋರ್ವನ ಕೆನ್ನೆಗೆ ಬಾರಿಸಿ ಏನೂ ಆಗೇ ಇಲ್ಲವೆಂಬಂತೆ ನಗುತ್ತಾ ಬರುತ್ತಿರುವುದು ಕಾಣುತ್ತಿದೆ. ಈತನ ಕೃತ್ಯವನ್ನು ಈತ ಸ್ನೇಹಿತನ ಕೈಯಲ್ಲಿ ಮೊಬೈಲ್ ನೀಡಿ ರೆಕಾರ್ಡ್ ಮಾಡಿಕೊಂಡಿದ್ದಾನೆ. ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಈ ಕಿಡಿಗೇಡಿ ಯೂಟ್ಯೂಬರ್‌ನನ್ನು ಬಂಧಿಸಿದ್ದಾರೆ.

ಬಂಧನದ ಬಳಿಕ ಆತ ತಾನು ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗುವುದಕ್ಕಾಗಿ ಈ ಕೃತ್ಯವೆಸಗಿರುವುದಾಗಿ ಹೇಳಿ ಕ್ಷಮೆಯಾಚಿಸಿದ್ದಾನೆ. ಹೀಗೆ ಬಂಧಿತನಾದ ಆರೋಪಿಯನ್ನು ರಿತೇಶ್ ಕುಮಾರ್ ಎಂದು ಗುರುತಿಸಲಾಗಿದೆ.

ಟ್ವಿಟ್ಟರ್‌ನಲ್ಲಿ ಈ ವಿಚಾರವನ್ನು ರೈಲ್ವೆ ಪೊಲೀಸ್ ಪೋರ್ಸ್‌(RPF) ಖಚಿತಪಡಿಸಿದೆ. ಪ್ರಯಾಣಿಕರ ಸುರಕ್ಷತೆಯಲ್ಲಿ ಯಾವುದೇ ರಾಜಿ ಇಲ್ಲ, ಸಾಮಾಜಿಕ ಮಾಧ್ಯಮದಲ್ಲಿ ಖ್ಯಾತಿಗಾಗಿ ಚಲಿಸುವ ರೈಲಿನಲ್ಲಿದ್ದ ಪ್ರಯಾಣಿಕನಿಗೆ ಕಪಾಳಮೋಕ್ಷ ಮಾಡಿದ ಯೂಟ್ಯೂಬರ್‌ನನ್ನು ಆರ್‌ಪಿಎಫ್‌ನ ಡೆಹ್ರಿ-ಆನ್-ಸೋನ್ ಕೂಡಲೇ ಪತ್ತೆಹಚ್ಚಿ ಬಂಧಿಸಿರುವುದಾಗಿ ಆರ್‌ಪಿಫ್‌ ತನ್ನ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದೆ.

ಜತೆಗೆ ಯೂಟ್ಯೂಬರ್ ರಿತೇಶ್‌ ಕುಮಾರ್ ಕ್ಷಮೆ ಕೇಳುತ್ತಿರುವ ದೃಶ್ಯವನ್ನು ವೀಡಿಯೋ ಮಾಡಿ ಪೋಸ್ಟ್ ಮಾಡಲಾಗಿದೆ.

ನಾನು ಯೂಟ್ಯೂಬರ್. ನನ್ನ ಫಾಲೋವರ್ಸ್‌ಗಳನ್ನು ಹೆಚ್ಚಿಸಲು ನಾನು ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊಗಳನ್ನು ತಯಾರಿಸುತ್ತೇನೆ ಮತ್ತು ಪೋಸ್ಟ್ ಮಾಡುತ್ತೇನೆ. ನಾನು ಅನುಗ್ರಹ ನಾರಾಯಣ್ ರಸ್ತೆಯ ರೈಲ್ವೆ ನಿಲ್ದಾಣಕ್ಕೆ ಬಂದು, ನನ್ನ ಫಾಲೋವರ್ಸ್‌ಗಳ ಸಂಖ್ಯೆಯನ್ನು ಹೆಚ್ಚಿಸಲು, ಚಲಿಸುವ ರೈಲಿನಲ್ಲಿ ಒಬ್ಬ ಪ್ರಯಾಣಿಕನಿಗೆ ಕಪಾಳಮೋಕ್ಷ ಮಾಡಿದೆ. ಇದು ನನ್ನ ತಪ್ಪು, ಮತ್ತು ನಾನು ಅದನ್ನು ಪುನರಾವರ್ತಿಸುವುದಿಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಆತ ವೀಡಿಯೋದಲ್ಲಿ ಕ್ಷಮೆ ಯಾಚಿಸಿದ್ದಾನೆ.

https://x.com/RPF_INDIA/status/1895051001079410731

Tiger- dog fight ಹುಲಿ ಜತೆ ಕಾದಾಡಿ ಮಾಲೀಕನ ಪ್ರಾಣ ಉಳಿಸಿದ ಶ್ವಾನ ಸಾವು

Kodihalli ಸಿಎಂ ಬದಲಾವಣೆ ವಿಚಾರ: ಸ್ಫೋಟಕ ಭವಿಷ್ಯ ನುಡಿದ ಕೋಡಿಹಳ್ಳಿ ಶ್ರ‍ಿಗಳು

Life style ಕಾಲ್ಬೆರಳುಗಳಿಂದ ತಿಳಿಯಬಹುದು ನಿಮ್ಮ ವ್ಯಕ್ತಿತ್ವ!

TAGGED:Watch VideoYouTuber arrested for slapping train passenger on cheek for publicity
Share This Article
Facebook Twitter Copy Link Print
Previous Article Tiger- dog fight ಹುಲಿ ಜತೆ ಕಾದಾಡಿ ಮಾಲೀಕನ ಪ್ರಾಣ ಉಳಿಸಿದ ಶ್ವಾನ ಸಾವು
Next Article Tatto ಜಾತ್ರೆಗಳಲ್ಲಿ ಟ್ಯಾಟೂ ಹಾಕಿಸಲೇಬೇಡಿ: ಟ್ರೆಂಡ್ ಗಳ ಹಿಂದೆ ಬಿದ್ದು ಗೋಳಾಡಬೇಡಿ

Popular Posts

Guarantee Schemes ಸುಳ್ಳು ಹೇಳಿ ಗ್ಯಾರಂಟಿ ತಗೊಂಡ್ರೆ ಇವ್ರು ಮನೆ ಮನೆಗೂ ಬರ್ತಾರಂತೆ!

2 Min Read

Free Bus ವೋಟರ್ ಐಡಿ ಇರುವ ಮಹಿಳೆಯರಿಗೆ ಮಾತ್ರ ಇನ್ನು ಉಚಿತ ಬಸ್ ಪ್ರಯಾಣ ಅವಕಾಶ

2 Min Read

BBK 13 ಬಿಗ್ ಬಾಸ್ ಕನ್ನಡ 13; ವೀಕ್ಷಕರ ಬಯಕೆಯ ಸ್ಪರ್ಧಿಗಳ ಪಟ್ಟಿಯಲ್ಲಿ ಯಾರೆಲ್ಲ ಇದ್ದಾರೆ?

2 Min Read

ಕೊಡಗಿನಲ್ಲಿರುವ ರಶ್ಮಿಕಾ ಕನಸಿನ ಮನೆ ಒಳಗೆ ಹೇಗಿದೆ?

2 Min Read

You Might Also Like

ಕರ್ನಾಟಕದೇಶಪ್ರಮುಖಮನರಂಜನೆ

Rukmini Vasanth ನಟಿ ರುಕ್ಮಿಣಿ ವಸಂತ್ ಎಐ ಬಿಕಿನಿ ಫೋಟೋ ಸೃಷ್ಟಿ: ಮೂವರ ಬಂಧನ

1 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ‌ ಭವಿಷ್ಯ, 20-06-2026, ಶನಿವಾರ, ಹೇಗಿದೆ ಇಂದು ನಿಮ್ಮ ಗ್ರಹಗತಿ?

5 Min Read
ಪ್ರಮುಖವಿದೇಶವೈರಲ್

Trump- Meloni ನನ್ನೊಂದಿಗೆ ಫೋಟೋ ಬೇಕೆಂದು ಮೆಲೋನಿ ಬೇಡಿದ್ದರು! ಟ್ರಂಪ್ ಹೇಳಿಕೆಗೆ ಸಿಡಿದೆದ್ದ ಇಟಲಿ ಪಿಎಂ ಹೇಳಿದ್ದೇನು? ವಿಡಿಯೋ ನೋಡಿ

2 Min Read
ಕರ್ನಾಟಕದೇಶಪ್ರಮುಖ

Attention ಗೃಹಲಕ್ಷ್ಮಿ ದುರ್ಬಳಕೆದಾರರಿಗೆ, ಅನರ್ಹ ಫಲಾನುಭವಿಗಳಿಗೆ ಕಾದಿದೆ ಕಂಟಕ: ಸಿಎಂ ಸೂಚನೆ ಏನು?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?