Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > Tatto ಜಾತ್ರೆಗಳಲ್ಲಿ ಟ್ಯಾಟೂ ಹಾಕಿಸಲೇಬೇಡಿ: ಟ್ರೆಂಡ್ ಗಳ ಹಿಂದೆ ಬಿದ್ದು ಗೋಳಾಡಬೇಡಿ
ಲೈಫ್‌ಸ್ಟೈಲ್

Tatto ಜಾತ್ರೆಗಳಲ್ಲಿ ಟ್ಯಾಟೂ ಹಾಕಿಸಲೇಬೇಡಿ: ಟ್ರೆಂಡ್ ಗಳ ಹಿಂದೆ ಬಿದ್ದು ಗೋಳಾಡಬೇಡಿ

Share
1 Min Read
SHARE

newsics.com

ಟ್ಯಾಟೂ ಈಗ ಟ್ರೆಂಡಿಂಗ್ನಲ್ಲಿರುವ ಒಂದು ಫ್ಯಾಶನ್. ಹಲವರು ಹಲವು ರೀತಿಯಲ್ಲಿ ಟ್ಯಾಟೂಗಳನ್ನು ಹಾಕಿಸಿಕೊಳ್ಳುತ್ತಿದ್ದಾರೆ. ಮೈಮೇಲೆ ಚರ್ಮಕ್ಕಿಂತ ಹೆಚ್ಚಾಗಿ ಟ್ಯಾಟೂಗಳೇ ಕಾಣುವ ಮಟ್ಟದಲ್ಲಿ ಹುಚ್ಚುತನವನ್ನು ಆವರಿಸಿಕೊಂಡವರು ಇದ್ದಾರೆ.

ಈ ಮಧ್ಯೆ ವಿದೇಶಿ ಸಂಸ್ಥೆಯೊಂದು ನಡೆಸಿದ ಸಮೀಕ್ಷಾ ವರದಿಯೊಂದು ಜಾಗತಿಕ ಮಟ್ಟದಲ್ಲಿ ಟ್ಯಾಟೂ ಪ್ರಿಯರನ್ನು ಆತಂಕಕ್ಕೀಡು ಮಾಡಿದೆ. ಶಿಕಾಗೋದ ಅಮೆರಿಕನ್‌ ಕೆಮಿಕಲ್‌ ಸೊಸೈಟಿ ಸಭೆಯಲ್ಲಿ, ಸಂಶೋಧಕರ ತಂಡವೊಂದು ನಡೆಸಿದ ಸಂಶೋಧನಾ ವರದಿಯಲ್ಲಿ, ಟ್ಯಾಟೂ ಹಾಕಿಸುವವರು ಎಚ್‌ಐವಿ ಹಾಗೂ ಹೆಪಟೈಟೀಸ್‌ ಬಿ, ಸಿಯಂತಹ ಸೋಂಕಿಗೆ ತುತ್ತಾಗುವ ಹಾಗೂ ಸ್ಕಿನ್‌ ಕ್ಯಾನ್ಸರ್‌ಗೆ ಒಳಗಾಗುವ ಸಾಧ್ಯತೆಗಳು ಹೆಚ್ಚು ಎಂಬ ಆತಂಕಕಾರಿ ವಿಷಯ ಕಂಡು ಬಂದಿದೆ.

ಇನ್ನು ಟ್ಯಾಟೂ ಹಾಕಿಸುವವರು ಈ ವರದಿಯಿಂದ ಹೆದರಬೇಕಾಗಿಲ್ಲ! ಹಾಕಿಸುವ ಮುನ್ನ ಒಂದಿಷ್ಟು ವಿಷಯಗಳನ್ನು ಅರಿತುಕೊಳ್ಳಬೇಕು. ದೇವಸ್ಥಾನಗಳ ಅಕ್ಕ-ಪಕ್ಕ, ಬಸ್‌ ಸ್ಟ್ಯಾಂಡ್‌ ಸುತ್ತಮುತ್ತಾ, ಜಾತ್ರೆಗಳಲ್ಲಿ, ರಸ್ತೆ ಬದಿಗಳಲ್ಲಿ, ಕಡಿಮೆ ಬೆಲೆಗೆ ಹಾಕುವ ಟ್ಯಾಟೂಗಳು, ಒಬ್ಬರಿಂದ ಒಬ್ಬರಿಗೆ ಹರಡುವ ನಾನಾ ರೀತಿಯ ಸೋಂಕಿನ ಕಾಯಿಲೆಗಳನ್ನು ಹರಡಿಸಬಹುದು. ಇದಕ್ಕೆ ಪ್ರಮುಖ ಕಾರಣ, ಒಬ್ಬರಿಗೆ ಟ್ಯಾಟೂ ಹಾಕಲು ಬಳಸಿದ ನೀಡಲ್‌. ಹೀಗೆ ಒಬ್ಬರದ್ದನ್ನು ಮತ್ತೊಬ್ಬರಿಗೆ ಬಳಸುವುದು ಕಾಯಿಲೆ ಹರಡಲು ಪ್ರಮುಖ ಕಾರಣವಾಗುತ್ತದೆ. ವಿಪರ್ಯಾಸವೆಂದರೆ ಸಾಕಷ್ಟು ಮಂದಿ ಈ ವಿಷಯ ಗೊತ್ತಿಲ್ಲದೇ, ಟ್ಯಾಟೂ ಹಾಕಿಸಿಕೊಳ್ಳುತ್ತಾರೆ.

ಟ್ಯಾಟೂ ಹಾಕಿಸಿದ ನಂತರ ಅದನ್ನು ಹೇಗೆ ಮೇಂಟೆನ್‌ ಮಾಡಬೇಕು ಎಂಬ ವಿಷಯವನ್ನು ಮಾತ್ರ ಗಮನದಲ್ಲಿಡುವುದಲ್ಲ! ಬದಲಿಗೆ ನೀವು ಎಲ್ಲಿ ಟ್ಯಾಟೂ ಹಾಕಿಸುತ್ತಿದ್ದೀರಾ? ಎಂಬ ಅಂಶವು ಮುಖ್ಯವಾಗುತ್ತದೆ.
ಸುರಕ್ಷತಾ ಕ್ರಮಗಳಿಗಾಗಿ ಹೀಗೆ ಮಾಡಿ
* ಆದಷ್ಟೂ ಗುಣಮಟ್ಟದ ಪರಿಕರಗಳನ್ನು ಬಳಸುವ ಟ್ಯಾಟೂ ಸ್ಟುಡಿಯೋ ಹಾಗೂ ಸೆಂಟರ್‌ಗಳಲ್ಲಿ ಹಾಕಿಸಿಕೊಳ್ಳಿ.
* ಯಾವುದೇ ಕಾಯಿಲೆ ಇದ್ದಲ್ಲಿ ಟ್ಯಾಟೂ ಹಾಕಿಸುವವರಿಗೆ ಮೊದಲೇ ತಿಳಿಸಿ. ಪ್ರತ್ಯೇಕ ನೀಡಲ್‌ ಬಳಸಲು ತಿಳಿಸಿ.
* ಗುಣಮಟ್ಟದ ಇಂಕ್‌ ಬಳಸಲು ಟ್ಯಾಟೂ ಆರ್ಟಿಸ್ಟ್‌ಗಳಿಗೆ ಸೂಚಿಸಿ.
* ಸ್ಕಿನ್‌ ಅಲರ್ಜಿ ಇದ್ದಲ್ಲಿ ಟ್ಯಾಟೂ ಬದಲು ಕೃತಕ ಟ್ಯಾಟೂ ಸ್ಟಿಕ್ಕರ್‌ ಬಳಸಿ, ಆಸೆ ಪೂರೈಸಿಕೊಳ್ಳಿ.
* ಟ್ಯಾಟೂ ಹಾಕಿಸಿದ ನಂತರ ಚರ್ಮದಲ್ಲಿ ತುರಿಕೆ ಉಂಟಾದಲ್ಲಿ ವೈದ್ಯರನ್ನು ಕಾಣಿರಿ.

TAGGED:Don't Get Tattooed at Tatto Fairs: Don't get caught up in trends
Share This Article
Facebook Twitter Copy Link Print
Previous Article Youtuber arrest ಪ್ರಚಾರಕ್ಕಾಗಿ ರೈಲು ಪ್ರಯಾಣಿಕನ ಕೆನ್ನೆಗೆ ಬಾರಿಸಿದ್ದ ಯೂಟ್ಯೂಬರ್ ಬಂಧನ, ವಿಡಿಯೋ ನೋಡಿ
Next Article Political view ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಆಯ್ಕೆ ಬಹುತೇಕ ಖಚಿತ

Popular Posts

ಗೃಹಲಕ್ಷ್ಮಿ ಹಣ ದುರುಪಯೋಗ ತಡೆಗೆ 11 ಸೂಚನೆಗಳ ಜಾರಿ!

3 Min Read

ಮನೆಯ ಈ ದಿಕ್ಕಿನಲ್ಲಿ ಗಡಿಯಾರ ಇಟ್ಟರೆ ಸಂಕಷ್ಟ ತಪ್ಪಿದ್ದಲ್ಲ

2 Min Read

Guarantee Schemes ಸುಳ್ಳು ಹೇಳಿ ಗ್ಯಾರಂಟಿ ತಗೊಂಡ್ರೆ ಇವ್ರು ಮನೆ ಮನೆಗೂ ಬರ್ತಾರಂತೆ!

2 Min Read

Free Bus ವೋಟರ್ ಐಡಿ ಇರುವ ಮಹಿಳೆಯರಿಗೆ ಮಾತ್ರ ಇನ್ನು ಉಚಿತ ಬಸ್ ಪ್ರಯಾಣ ಅವಕಾಶ

2 Min Read

You Might Also Like

ಲೈಫ್‌ಸ್ಟೈಲ್

ಗ್ಯಾಸ್ ಸಿಲಿಂಡರ್ ಲೀಕ್ ಆದಾಗ ಜೀವ ಉಳಿಸೋ ತಂತ್ರಗಳು ಯಾವುದು ಗೊತ್ತಾ?

1 Min Read
ಲೈಫ್‌ಸ್ಟೈಲ್

ಮೊಡವೆ, ತಲೆನೋವಿಗೆ ಇದೇ ರಾಮಬಾಣ!; ಇದನ್ನು ಬಳಸುವುದರಿಂದಾಗುವ ಪ್ರಯೋಜನಗಳೇನು?

2 Min Read
ಪ್ರಮುಖಆರೋಗ್ಯಕರ್ನಾಟಕದೇಶಲೈಫ್‌ಸ್ಟೈಲ್

Health – Insomnia ನಿದ್ರಾಹೀನತೆ ಸಮಸ್ಯೆ ಮಹಿಳೆಯರಲ್ಲೇ ಹೆಚ್ಚು! ಯಾಕೆ ಹೀಗೆ?

3 Min Read
ಕರ್ನಾಟಕದೇಶಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

Midnight Romantic ಪುರುಷರು ಮಧ್ಯರಾತ್ರಿ 12ರ ಬಳಿಕ ಹೆಚ್ಚು ರೊಮ್ಯಾಂಟಿಕ್ ಆಗೋದೇಕೆ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?