newsics.com
ಮಧ್ಯಪ್ರದೇಶ: ಹುಲಿಯ ಜತೆ ಕಾದಾಡಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ತನ್ನ ಮಾಲೀಕನನ್ನು ಉಳಿಸಿದ ಜರ್ಮನ್ ಷೆಫರ್ಡ್ ನಾಯಿ ಪ್ರಾಣಬಿಟ್ಟ ಘಟನೆ ಮಧ್ಯ ಪ್ರದೇಶದ ಉಮರಿಯಾ ಜಿಲ್ಲೆಯ ಬಾಂಧವಗಢ ಹುಲಿ ಸಂರಕ್ಷಿತ ಪ್ರದೇಶದ ಪಕ್ಕದಲ್ಲಿರುವ ಭರ್ಹುತ್ ಎಂಬ ಗ್ರಾಮದಲ್ಲಿ ನಡೆದಿದೆ.
ಜರ್ಮನ್ ಶಫರ್ಡ್ ತಳಿಯ ಶ್ವಾನ ಧೈರ್ಯದಿಂದ ಹೋರಾಡಿ ಹಿಮ್ಮೆಟ್ಟಿಸಿದೆ. ಹುಲಿಯೊಂದಿಗಿನ ಭೀಕರ ಕದನದಲ್ಲಿ ಶ್ವಾನ ಗಂಭೀರವಾಗಿ ಗಾಯಗೊಂಡು ಪ್ರಾಣ ಕಳೆದುಕೊಂಡಿದೆ.
ಶಿವಂ ಎಂಬುವರು ತನ್ನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ನೆಚ್ಚಿನ ಜರ್ಮನ್ ಶಫರ್ಡ್ ಸಾಕುನಾಯಿಯೂ ಜತೆಗಿತ್ತು. ಈ ವೇಳೆ ಏನೋ ಸದ್ದಾಗಿರುವುದನ್ನು ಅವರು ಗಮನಿಸಿದ್ದಾರೆ. ಸಾವರಿಸಿಕೊಂಡು ನಿಂತು ನೋಡಿದರೆ ಕೆಲವೇ ಅಡಿ ದೂರದಲ್ಲಿ ಹುಲಿ ನಿಂತಿತ್ತು. ಇನ್ನೇನು ತನ್ನ ಮೈಮೇಲೆರಗಲು ಅದು ಸಿದ್ಧವಾಗಿತ್ತು. ಈ ವೇಳೆ ತನ್ನ ಮಾಲೀಕ ಅಪಾಯದಲ್ಲಿರುವುದನ್ನು ಶ್ವಾನ ಗಮನಿಸಿದೆ. ಓಡಿ ಬಂದು ಹುಲಿ ಮೇಲೆರಗಿದೆ. ಹಲವು ನಿಮಿಷಗಳ ಕಾಲ ಶ್ವಾನ ಮತ್ತು ಹುಲಿಯ ನಡುವೆ ಘನಘೋರ ಕದನ ನಡೆಯಿತು. ಕೋಪಗೊಂಡ ಹುಲಿ ನಾಯಿಯ ಕತ್ತಿಗೆ ಬಲವಾಗಿ ಕಚ್ಚಿ ಗಾಯಗೊಳಿಸಿದೆ. ಅದರೂ ದೃತಿಗೆಡದ ಶ್ವಾನ ಹುಲಿಯನ್ನು ಓಡಿಸುವಲ್ಲಿ ಯಶಸ್ವಿಯಾಗಿದೆ.
ಗಂಭೀರವಾಗಿ ಗಾಯಗೊಂಡ ನಾಯಿಯನ್ನು ನಾವು ತಕ್ಷಣವೇ ಪಶು ವೈದ್ಯಾಧಿಕಾರಿ ಡಾ.ಅಖಿಲೇಶ್ ಸಿಂಗ್ ಅವರ ಬಳಿಗೆ ಕರೆದೊಯ್ದೆವು. ಅಲ್ಲಿ ಅವರು ಅದನ್ನು ಉಳಿಸಲು ಸಾಕಷ್ಟು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ ಎಂದು ಶಿವಂ ಹೇಳಿದರು.
Vijayalakshmi Darshan: 24 ಜೋಡಿಗೆ ಮಾಂಗಲ್ಯ ಕರುಣಿಸಿದ ವಿಜಯಲಕ್ಷ್ಮಿ ದರ್ಶನ್
Poonam Pandey: ವಿಚ್ಛೇದನದ ಬಳಿಕ ಎರಡನೇ ಮದುವೆ ಆಗಲು ಭಯ ಆಗುತ್ತಿದೆ ಎಂದ ಪೂನಂ ಪಾಂಡೆ
Chaitra Vasudevan ಉದ್ಯಮಿ ಜಗದೀಪ್ ಜೊತೆ ʼಬಿಗ್ ಬಾಸ್ʼ ಖ್ಯಾತಿಯ ಚೈತ್ರಾ ವಾಸುದೇವನ್ ವಿವಾಹ