newsics.com
ಹಲವು ದೇಶಗಳಲ್ಲಿ ನಾಣ್ಯಗಳ ತಯಾರಿಕೆಯ ವೆಚ್ಚ ಹೆಚ್ಚುತ್ತಲೇ ಇದೆ. ಹೀಗಾಗಿ, ನಾಣ್ಯದ ತಯಾರಿಕೆ ವೆಚ್ಚವು ಅದರ ಮುಖಬೆಲೆಗಿಂತ ಹೆಚ್ಚೇ ಇದೆ. ಅಮೆರಿಕ ಸರ್ಕಾರಕ್ಕೆ ಇದು ತಲೆನೋವು ತರುತ್ತಿದೆ. ಹೀಗಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೆಂಟ್ ಅಥವಾ ಪೆನ್ನಿ ನಾಣ್ಯಗಳ ತಯಾರಿಕೆ ನಿಲ್ಲಿಸಲು ಸೂಚಿಸಿದ್ದಾರೆ.
ರೂಪಾಯಿಗೆ ಪೈಸೆ ಹೇಗೋ ಹಾಗೆ ಅಮೆರಿಕದಲ್ಲಿ ಡಾಲರ್‌ಗೆ ಸೆಂಟ್ ಇದೆ. ಒಂದು ಡಾಲರ್‌ಗೆ 100 ಸೆಂಟ್ ಅಥವಾ ಪೆನ್ನಿ ಇದೆ. ಅಮೆರಿಕದಲ್ಲಿ 1 ಸೆಂಟ್, 2 ಸೆಂಟ್, 5 ಸೆಂಟ್, 10 ಸೆಂಟ್, 25 ಸೆಂಟ್ ಮುಖಬೆಲೆಯ ನಾಣ್ಯಗಳಿವೆ. ಹಣಕಾಸು ನಿಯಮಗಳ ಪ್ರಕಾರ, ಈ ನಾಣ್ಯಗಳ ತಯಾರಿಕೆಯ ವೆಚ್ಚವು ಅದರ ಮುಖಬೆಲೆಗಿಂತ ಹೆಚ್ಚು ಇರಬಾರದು. ಆದರೆ, ಅಮೆರಿಕದಲ್ಲಿ ಇವುಗಳ ತಯಾರಿಕೆ ವೆಚ್ಚವು ಮುಖಬೆಲೆಗಿಂತ ಹಲವು ಪಟ್ಟು ಹೆಚ್ಚೇ ಇದೆ.
ಒಂದು ಸೆಂಟ್ ಮುಖಬೆಲೆಯ ಒಂದು ಪೆನ್ನಿ ನಾಣ್ಯ ತಯಾರಿಕೆಗೆ ಆಗುವ ವೆಚ್ಚವು ಅದರ ಮುಖಬೆಲೆಗಿಂತ ಶೇ. 370ರಷ್ಟಿದೆ. ಅಂದರೆ ಒಂದು ಪೆನ್ನಿ ತಯಾರಿಸಲು ಸರ್ಕಾರ 3.7 ಪೆನ್ನಿ ವ್ಯಯಿಸುತ್ತದೆ. ವರ್ಷಕ್ಕೆ 320 ಕೋಟಿ ಪೆನ್ನಿ ನಾಣ್ಯಗಳನ್ನು ತಯಾರಿಸಲಾಗುತ್ತಿದೆ. ಇದರಿಂದ ಅಮೆರಿಕದ ಖಜಾನೆಗೆ ವಾರ್ಷಿಕವಾಗಿ 85 ಮಿಲಿಯನ್ ಡಾಲರ್ ನಷ್ಟು ನಷ್ಟ ಆಗುತ್ತಿದೆ.
5 ಸೆಂಟ್ನ ಮುಖಬೆಲೆಯಾದ ನಿಕಲ್ ನಾಣ್ಯ ತಯಾರಿಸಲು 15 ಸೆಂಟ್ ವೆಚ್ಚವಾಗುತ್ತದೆ. ಇದರಿಂದಲೂ ಅಮೆರಿಕದ ಖಜಾನೆಗೆ 108 ಮಿಲಿಯನ್ ಡಾಲರ್ ನಷ್ಟವಾಗುತ್ತಿದೆ ಎಂದು ಅಲ್ಲಿಯ ಟ್ರೆಷರಿ ಇಲಾಖೆಯ ದತ್ತಾಂಶಗಳು ಹೇಳುತ್ತಿವೆ. ಹೀಗಾಗಿ ಒಂದು ಸೆಂಟ್ ಮುಖಬೆಲೆಯ ಪೆನ್ನಿ ನಾಣ್ಯದ ತಯಾರಿಕೆಯನ್ನು ನಿಲ್ಲಿಸುವಂತೆ ಟ್ರಂಪ್ ತಿಳಿಸಿದ್ದಾರೆ.
Monalisa ಮೊನಾಲಿಸಾ ಸಿನಿಮಾಕ್ಕೆ ವಿಘ್ನ: ನಿರ್ದೇಶಕರಿಂದ ಯೂಟ್ಯೂಬರ್ ಸೇರಿ ಐವರ ವಿರುದ್ಧ FIR