newsics.com
ಬೆಂಗಳೂರು : ವಾಸ್ತು ಶಾಸ್ತ್ರ ಪ್ರಕಾರ ಅಡುಗೆ ಮನೆಯಲ್ಲಿ ತಾಯಿ ಅನ್ನಪೂರ್ಣೇಶ್ವರಿ ಸದಾ ನೆಲೆಸಿರುತ್ತಾಳೆ ಎಂಬ ನಂಬಿಕೆಯಿದೆ. ಅಡುಗೆ ಸ್ವಚ್ಛವಾಗಿಟ್ಟುಕೊಳ್ಳುವುದರ ಜತೆ ಕೆಲವು ವಸ್ತುಗಳನ್ನು ಖಾಲಿಯಾಗದಂತೆ ನೋಡಿಕೊಳ್ಳುವುದು ಅವಶ್ಯಕ.
ಅರಶಿನ ಕೂಡ ಮನೆಯಲ್ಲಿ ಖಾಲಿಯಾಗಬಾರದು. ಇದನ್ನೂ ಕೂಡ ದಾರಿದ್ರ್ಯದ ಸಂಕೇತ ಎಂದು ನಂಬಲಾಗಿದೆ.
ಬೆಳಗ್ಗಿನ ತಿಂಡಿಯಿಂದ ಹಿಡಿದು ಮಧ್ಯಾಹ್ನ ಹಾಗೂ ರಾತ್ರಿಯ ಊಟದಲ್ಲೂ ಅಕ್ಕಿಯನ್ನು ಬಳಸಲಾಗುತ್ತದೆ. ಆದ್ದರಿಂದ ಅಕ್ಕಿ ಎಂದಿಗೂ ಖಾಲಿಯಾಗದಂತೆ ನೋಡಿಕೊಳ್ಳಿ. ಅಕ್ಕಿ ಖಾಲಿಯಾಗುವುದು ದಾರಿದ್ರ್ಯದ ಸಂಕೇತ ಎಂದು ನಂಬಲಾಗಿದೆ.
ಉಪ್ಪು ಎಂದಿಗೂ ಖಾಲಿಯಾಗದಂತೆ ನೋಡಿಕೊಳ್ಳಿ. ಅಡುಗೆ ಮನೆಯಲ್ಲಿ ಉಪ್ಪು ಯಾವಾಗಲೂ ಕಾಣುವಂತೆ ಇಡಬೇಕು ಎಂದು ಸಲಹೆ ನೀಡಲಾಗಿದೆ.