newsics.com
ನವದೆಹಲಿ :ಮಹಾಕುಂಭಮೇಳ ಅದ್ಧೂರಿಯಾಗಿ ನಡೆಯುತ್ತಿರುವಾಗಲೇ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಉತ್ತರ ಪ್ರದೇಶದ ಜೈಲುಗಳಲ್ಲಿರುವ ಕೈದಿಗಳಿಗೂ ಮಹಾಕುಂಭಮೇಳದ ಗಂಗಾಜಲದಲ್ಲಿ ತೀರ್ಥಸ್ನಾನ ಮಾಡುವ ಭಾಗ್ಯ ಕರುಣಿಸುತ್ತಿದೆ.
ಉತ್ತರ ಪ್ರದೇಶದ 75 ಜೈಲುಗಳಲ್ಲಿ ಸದ್ಯ 90 ಸಾವಿರಕ್ಕೂ ಅಧಿಕ ಖೈದಿಗಳಿದ್ದಾರೆ. ಇವರಿಗೆಲ್ಲಾ ನಾಳೆ ಬೆಳಗ್ಗೆ 9.30ರಿಂದ 10 ಗಂಟೆಯ ಒಳಗೆ ಗಂಗಾಜಲದಿಂದ ಸ್ನಾನ ಮಾಡುವ ವ್ಯವಸ್ಥೆ ಮಾಡಲಾಗುತ್ತಿದೆ.
ಮಹಾಕುಂಭಮೇಳದ ಹಿನ್ನೆಲೆಯಲ್ಲಿ ಖೈದಿಗಳಿಗೆಲ್ಲಾ ಗಂಗಾಸ್ನಾನ ಮಾಡಿಸಲು ಅವರನ್ನೆಲ್ಲಾ ಪ್ರಯಾಗರಾಜ್‌ಗೆ ಕರೆದುಕೊಂಡು ಹೋಗುತ್ತಿಲ್ಲ. ಪ್ರಯಾಗರಾಜ್‌ನಿಂದ ಗಂಗಾಜಲವನ್ನು ಎಲ್ಲಾ 75 ಜೈಲುಗಳಿಗೆ ತಂದು ತೀರ್ಥಸ್ನಾನ ಮಾಡಲು ಅವಕಾಶ ನೀಡಲಾಗುತ್ತಿದೆ.