Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Sunita Williams ಭೂಮಿಗೆ ಬಂದ ನಂತರ ಸುನೀತಾ ವಿಲಿಯಮ್ಸ್‌ಗೆ ಪೆನ್ಸಿಲ್ ಎತ್ತಲು ಸಾಧ್ಯವಾಗಲ್ಲ: ಕಾರಣ?
ಪ್ರಮುಖವಿದೇಶ

Sunita Williams ಭೂಮಿಗೆ ಬಂದ ನಂತರ ಸುನೀತಾ ವಿಲಿಯಮ್ಸ್‌ಗೆ ಪೆನ್ಸಿಲ್ ಎತ್ತಲು ಸಾಧ್ಯವಾಗಲ್ಲ: ಕಾರಣ?

Share
1 Min Read
SHARE

newsics.com

ಕಳೆದ ವರ್ಷದ ಜೂನ್‍ ನಿಂದ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಕ್ಕಿಬಿದ್ದಿರುವ ಅಮೆರಿಕದ ಇಬ್ಬರು ಗಗನಯಾತ್ರಿಗಳು ನಿರೀಕ್ಷೆಗಿಂತಲೂ ಮೊದಲೇ ಭೂಮಿಗೆ ವಾಪಸಾಗುವ ಸಾಧ್ಯತೆಯಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಹೇಳಿದೆ.

ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಮಾರ್ಚ್ ಪ್ರಥಮ ವಾರ ಅಥವಾ ಎರಡನೇ ವಾರದಲ್ಲಿ ಭೂಮಿಗೆ ವಾಪಸಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. 8 ತಿಂಗಳು ಅಂತರಿಕ್ಷದಲ್ಲಿ ಕಳೆದ ಸುನೀತಾ ವಿಲಿಯಮ್ಸ್ ಇದೀಗ ಭೂಮಿಗೆ ವಾಪಸ್ ಬರ್ತಿದ್ದಾರೆ. ಆದರೆ ಗುರುತ್ವಾಕರ್ಷಣೆ ಅವರಿಗೆ ದೊಡ್ಡ ಸವಾಲಾಗಲಿದೆ .

ಸದ್ಯ ಸುನೀತಾ ISS (ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ)ದಲ್ಲಿದ್ದಾರೆ. ಗುರುತ್ವಾಕರ್ಷಣೆ ಇಲ್ಲದೆ ಬಾಹ್ಯಾಕಾಶದಲ್ಲಿ ದೀರ್ಘಕಾಲ ಇದ್ದಿದ್ದರಿಂದ ಭೂಮಿಯ ಗುರುತ್ವಾಕರ್ಷಣೆಗೆ ಹೊಂದಿಕೊಳ್ಳುವುದು ಅವರಿಗೆ ದೊಡ್ಡ ಸವಾಲಾಗಲಿದೆ. ಹೀಗಾಗಿ ಅವರಿಗೆ ಪೆನ್ಸಿಲ್ ಎತ್ತುವುದೂ ಕೂಡ ಕಸರತ್ತಿನಂತೆ ಅನಿಸುತ್ತದೆ.

ಸುನೀತಾ ವಿಲಿಯಮ್ಸ್‌ಗೆ ಏಕೆ ತೊಂದರೆಗಳಾಗಬಹುದು

ಐಎಸ್‌ಎಸ್‌ನಲ್ಲಿ ದೀರ್ಘಾವಧಿ ಇದ್ದ ಗಗನಯಾತ್ರಿಗಳು ವಿವಿಧ ರೀತಿ ದೈಹಿಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಅವುಗಳ ಪೈಕಿ ಸ್ನಾಯು ದೌರ್ಬಲ್ಯ, ಮೂಳೆ ಸಾಂದ್ರತೆಯ ಕುಸಿತ, ಶರೀರ ದ್ರವಗಳ ಅಸಮತೋಲನ ಮುಂತಾದವು ಸೇರಿಕೊಂಡಿವೆ. ಗುರುತ್ವಾಕರ್ಷಣೆಯೊಳಗೆ ಇಲ್ಲದ ಮೂಳೆಗಳ ಸಾಂದ್ರತೆ ದಿನಕಳೆದಂತೆ, ತಿಂಗಳು ಕಳೆದಂತೆ ಕಡಿಮೆಯಾಗುತ್ತದೆ. ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿರುವಾಗ ಭೂಮಿಯ ಗುರುತ್ವಾಕರ್ಷಣೆಯ ವ್ಯಾಪ್ತಿಯಿಂದ ಹೊರಗಿರುತ್ತಾರೆ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು.

ಗುರುತ್ವಾಕರ್ಷಣೆ ಕಡಿಮೆ ಇರುವುದರಿಂದ ಬಾಹ್ಯಾಕಾಶದಲ್ಲಿ ದೇಹದ ದ್ರವಗಳ ಹಂಚಿಕೆ ಬದಲಾಗುತ್ತದೆ. ಇದರಿಂದ ಅಂತರಿಕ್ಷಯಾತ್ರಿಗಳ ಮುಖ ಊದಿಕೊಳ್ಳುತ್ತದೆ. ಭೂಮಿಗೆ ಬಂದಾಗ ಈ ದ್ರವಗಳು ಸಾಮಾನ್ಯ ಸ್ಥಿತಿಗೆ ಬರುತ್ತವೆ. ಇದರಿಂದ ತಾತ್ಕಾಲಿಕ ತೊಂದರೆಯಾಗಬಹುದು.

ಗಗನಯಾತ್ರೆ ಮುಗಿಸಿ ಬಂದ ನಂತರದಲ್ಲಿ ಸುನಿತಾ ವಿಲಿಯಮ್ಸ್ ತಮ್ಮ ಶರೀರವನ್ನು ಭೂಮಿಯ ಪರಿಸ್ಥಿತಿಗೆ ಹೊಂದಿಸಿಕೊಳ್ಳಬೇಕು. ಇದಕ್ಕಾಗಿ, ಮತ್ತೆ ಕಟ್ಟುನಿಟ್ಟಾದ ಪುನರ್ವಸತಿ ಕಾರ್ಯಕ್ರಮಕ್ಕೆ ಒಳಗಾಗಬೇಕಾಗುತ್ತದೆ. ಬಾಹ್ಯಾಕಾಶದಲ್ಲಿರುವಾಗ ಶರೀರದ ದ್ರವಗಳು ಮುಖ, ತಲೆಯ ಭಾಗಕ್ಕೆ ಹೋಗುತ್ತದೆ. ಹೀಗಾಗಿ, ಕೈ, ಕಾಲು ತೆಳ್ಳಗಾಗುತ್ತವೆ. ಭೂಮಿಗೆ ಮರಳಿದ ಬಳಿಕ ಶರೀರ ಮತ್ತೆ ಸಹಜ ಸ್ಥಿತಿಗೆ ಬರಬೇಕಾದರೆ ಸ್ವಲ್ಪ ದಿನಗಳು ಬೇಕಾಗಬಹುದು.

TAGGED:Sunita Williams Can't Lift a Pencil After Landing: Why?
Share This Article
Facebook Twitter Copy Link Print
Previous Article actor Darshan ಪ್ರೀತಿಯ ಸೆಲೆಬ್ರಿಟಿಸ್ ಗಳೇ ನಿಷ್ಕಲ್ಮಶ ಹೃದಯಗಳಿಗೆ ನಾನು ಸದಾ ಚಿರಋಣಿ : ಮತ್ತೊಂದು ಪೋಸ್ಟ್ ಮಾಡಿದ ನಟ ದರ್ಶನ್
Next Article Gold ATM ತಿರುಪತಿಯಲ್ಲಿ ಚಿನ್ನದ ಎಟಿಎಂ ಬಂದಾಯಿತು: ಈ ಗೋಲ್ಡ್ ಎಟಿಎಂ ಎಂದರೇನು?

Popular Posts

Fake PhD Certificates ಸರ್ಕಾರಿ ಪದವಿ ಕಾಲೇಜುಗಳಲ್ಲಿ 249 ಅತಿಥಿ ಉಪನ್ಯಾಸಕರಿಂದ ನಕಲಿ ಪಿಎಚ್‌.ಡಿ ಪ್ರಮಾಣಪತ್ರ ಸಲ್ಲಿಕೆ

1 Min Read

Lalabhag Flower Show | ಲಾಲ್‌ಬಾಗ್ ಪುಷ್ಪ ಪ್ರದರ್ಶನ 2026: ಗಂಗರ ವೈಭವ ಅನಾವರಣಗೊಳಿಸುವ 220ನೇ ಹೂವಿನ ಉತ್ಸವ

2 Min Read

Don’t Ignore These Wrist Symptoms ಮಣಿಕಟ್ಟಿನ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ: ಗಂಭೀರ ಆರೋಗ್ಯ ಸಮಸ್ಯೆಯ ಸೂಚನೆಯಾಗಿರಬಹುದು!

2 Min Read

These Zodiac Signs Should Avoid Wearing Silver ಈ ರಾಶಿಯವರು ಬೆಳ್ಳಿ ಧರಿಸಲೇ ಬಾರದು! ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ?

1 Min Read

You Might Also Like

ದೇಶಪ್ರಮುಖ

Sonum Wangchuk Hunger Protest | ಸೋನಂ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಅಂತ್ಯಕ್ಕೆ ಮೂರು ಷರತ್ತುಗಳು ?

2 Min Read
ಕರ್ನಾಟಕಪ್ರಮುಖ

Rain Rain ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ವ್ಯಾಪಕ ಮಳೆ: ಈ ಜಿಲ್ಲೆಯಲ್ಲಿಂದು ಶಾಲಾ ಕಾಲೇಜಿಗೆ ರಜೆ ಘೋಷಣೆ

2 Min Read
ಕರ್ನಾಟಕಕೃಷಿದೇಶಪ್ರಮುಖವೈರಲ್

AI and Agri ಹೊಲ- ಗದ್ದೆಗಳಲ್ಲೂ ರೋಬೋಟ್‌ಗಳದ್ದೇ ದರ್ಬಾರಾಗುತ್ತಾ? ಎಕ್ಸ್‌ನಲ್ಲಿ ಟ್ರೆಂಡ್ ಆಗ್ತಿದೆ ಎಐ ಕೃಷಿ ಯಂತ್ರ!

1 Min Read
ದೇಶಪ್ರಮುಖಮನರಂಜನೆವಿದೇಶ

Ind vs Zim ಟೀಮ್ ಇಂಡಿಯಾದಲ್ಲಿ ಭಾರೀ ಸರ್ಜರಿ! 6 ಮಂದಿ ಔಟ್‌, ಯಾರೆಲ್ಲ ಸೇರಿದ್ರು?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?