newsics.com
ಪುಣೆ: ಬರೋಬ್ಬರಿ 300ಕ್ಕೂ ಹೆಚ್ಚು ಬೆಕ್ಕುಗಳು ಪತ್ತೆಯಾಗಿರೋ ಘಟನೆ 3BHK ಅಪಾರ್ಟ್‌ಮೆಂಟ್ವೊಂದರಲ್ಲಿ ಪುಣೆಯ ಹಡಪ್ಸರ್ ಪ್ರದೇಶದಲ್ಲಿ ನಡೆದಿದೆ.
ಆರು ವರ್ಷಗಳಿಂದ ಬೆಕ್ಕುಗಳನ್ನು ಅಪಾರ್ಟ್‌ಮೆಂಟ್ನಲ್ಲಿ ಸಾಕುತ್ತಿರುವುದು ವರದಿಯಾಗಿದೆ. ಅಪಾರ್ಟ್‌ಮೆಂಟ್ನ ಅಕ್ಕಪಕ್ಕ ದುರ್ವಾಸನೆ ಮತ್ತು ನಿರಂತರ ಬೆಕ್ಕಿನ ಕೂಗಿನ ಶಬ್ದಗಳು ಕೇಳಿ ಬರುತ್ತಿದ್ದ ಕಾರಣಕ್ಕೆ ಸ್ಥಳೀಯ ನಿವಾಸಿಗಳು ದೂರು ನೀಡಿದ್ದರು.
ಹಡಪ್ಸರ್‌ನಲ್ಲಿರುವ ಮಾರ್ವೆಲ್ ಬೌಂಟಿ ಕೋಆಪರೇಟಿವ್ ಹೌಸಿಂಗ್ ಸೊಸೈಟಿಯ 9 ಮಹಡಿಯಲ್ಲಿರುವ ಅಪಾರ್ಟ್ಮೆಂಟ್‌ನಲ್ಲಿ 300 ಕ್ಕೂ ಹೆಚ್ಚು ಬೆಕ್ಕುಗಳು ಅನೈರ್ಮಲ್ಯ ಸ್ಥಿತಿಯಲ್ಲಿ ವಾಸಿಸುತ್ತಿರುವುದು ಪತ್ತೆಯಾಗಿದೆ.
ಪುಣೆ ಮುನ್ಸಿಪಲ್ ಕಾರ್ಪೊರೇಷನ್ (PMC) ಮತ್ತು ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದರು. ಇದೇ ವೇಳೆ ಮಲಗುವ ಕೋಣೆಯಲ್ಲಿ 300ಕ್ಕೂ ಹೆಚ್ಚು ಬೆಕ್ಕುಗಳನ್ನು ನೋಡಿದ ಅಧಿಕಾರಿಗಳು ಶಾಕ್ ಆಗಿದ್ದಾರೆ.