newsics.com
ಮಡಿಕೇರಿ/ಬೆಳಗಾವಿ: ಗ್ರಾಮೀಣ ಭಾಗದಲ್ಲಿರುವ ಯುವಕರಿಗೆ ಹೆಣ್ಣು ಸಿಗುತ್ತಿಲ್ಲವೆಂಬ ದೂರುಗಳು ಹೆಚ್ಚಾಗುತ್ತಿವೆ.
ಕೊಡಗಿನ ಯುವಕ ತನಗೆ ಹೆಣ್ಣು ಸಿಕ್ಕಿಲ್ಲವೆಂದು ಗುಂಡು ಹಾರಿಸಿಕೊಂಡು ಸಾವಿಗೀಡಾದರೆ, ಬೆಳಗಾವಿಯ ಯುವಕ ನಿಶ್ಚಿತಾರ್ಥ ಮಾಡಿಕೊಂಡ ಮದುವೆ ಸಂಬಂಧ ಮುರಿದುಬಿತ್ತು ಎಂದು ಸಾವಿಗೆ ಶರಣಾದ ಘಟನೆ ನಡೆದಿದೆ.
ಮದುವೆ ಆಗಿಲ್ಲವೆಂದು ಇಬ್ಬರೂ ಆತ್ಮಹತ್ಯೆಗೆ ಶರಣಾಗಿರುವುದು ಇಡೀ ಸಮಾಜವೇ ಮರುಕಪಡುವಂತಾಗಿದೆ.
ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಕೆ.ಬೋಯಿಕೇರಿ ಗ್ರಾಮದ ಯುವಕ ಬಿ.ಪಿ. ಅನಿಲ್ ಕುಮಾರ್ @ ಸತೀಶ್ ತನ್ನ ಮನೆಯಲ್ಲೇ ಸಿಂಗಲ್ ಬ್ಯಾರಲ್ ಬಂದೂಕಿನಿಂದ ಶೂಟ್ ಮಾಡಿಕೊಂಡು ಸಾವಿಗೀಡಾಗಿದ್ದಾನೆ.
ಕುಡಿದ ಮತ್ತಿನಲ್ಲಿ ತನ್ನ ಗನ್‌ನಿಂದಲೇ ಶೂಟ್ ಮಾಡಿಕೊಂಡಿದ್ದಾನೆ. ಊರಿನಲ್ಲಿ ಆಚಾರಿ ಕೆಲಸ ಮಾಡಿಕೊಂಡಿದ್ದ ಅನಿಲ್‌ಗೆ ಯಾವಾಗ ಮದುವೆ ಮಾಡಿಕೊಳ್ತೀಯಾ ಎಂದು ಕೇಳುವವರ ಸಂಖ್ಯೆ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ತಾನು ಕುಡಿದಾಗಲೆಲ್ಲ ಮದುವೆ ಆಗುತ್ತಿಲ್ಲ, ಶೂಟ್ ಮಾಡಿಕೊಂಡು ಸಾಯುತ್ತೇನೆ ಎಂದು ಹೇಳುತ್ತಿದ್ದ. ಭಾನುವಾರ ತಡರಾತ್ರಿ ತನ್ನದೇ ಗನ್‌ನಿಂದ ಶೂಟ್ ಮಾಡಿಕೊಂಡಿದ್ದು, ಆತನ ಮುಖ ಛಿದ್ರ ಛಿದ್ರವಾಗಿದೆ. ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ನಡೆದಿದೆ.
ತನಗೆ ಮದುವೆ ಆಗಲಿಲ್ಲ ಎಂದೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸ್ಥಳೀಯರು ಹೇಳಿದ್ದಾರೆ. ಅನಿಲ್‌ಗೆ 43 ವರ್ಷ ವಯಸ್ಸಾಗಿದ್ದರೂ ಮದುವೆ ಆಗಿರಲಿಲ್ಲ. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ. ಆತನ ಸಹೋದರನಿಗೂ ಮದುವೆಯಾಗಿರಲಿಲ್ಲ. ಹೀಗಾಗಿ ಕೆಲವು ದಿನಗಳ ಹಿಂದಷ್ಟೇ ಸ್ನೇಹಿತರ ಬಳಿ ಜೀವನ ಬೇಸರವಾಗಿದೆ ಎಂದೆಲ್ಲಾ ಹೇಳಿಕೊಂಡಿದ್ದ. ಏಕೆ ಎಂದು ಕೇಳಿದ್ದಕ್ಕೆ ಮದುವೆ ಆಗಿಲ್ಲ ಎಂದು ಹೇಳಿದ್ದನಂತೆ.
ಅನಿಲ್ ತಂದೆ 2010ರಲ್ಲಿ ತೀರಿಕೊಂಡಿದ್ದರು. ಇದಾದ ನಂತರ ಒಂದು ವರ್ಷದಲ್ಲಿ ಮದುವೆ ಮಾಡಿಕೊಳ್ಳಬೇಕು ಎಂದು ಎಷ್ಟೇ ಹೆಣ್ಣು ಹುಡುಕಿದರೂ ಹೆಣ್ಣು ಸಿಗಲೇ ಇಲ್ಲ. ಇದಾದ ಬಳಿಕವೂ ಹೆಣ್ಣು ಮಕ್ಕಳು ಈತನನ್ನಾಗಲೀ, ಈತನ ಅಣ್ಣನನ್ನಾಗಲೀ ಮದುವೆ ಮಾಡಿಕೊಳ್ಳಲು ಒಪ್ಪಿರಲಿಲ್ಲ ಎಂದು ಮೃತ ಅನಿಲ್‌ನ ಅಣ್ಣ ಉಮೇಶ್ ಹೇಳಿದ್ದಾನೆ. ಆದರೆ, ನನ್ನ ತಮ್ಮನಿಗೆ ಮದುವೆ ಆಗದೇ ಇರುವುದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದೂರು ದಾಖಲಾಗಿದೆ. ಆದರೆ, ತನಿಖೆ ನಡೆಯದೆ ನಾವು ಯಾವ ನಿರ್ಧಾರವನ್ನು ಮಾಡಲಾಗಲ್ಲ. ತನಿಖೆ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಹೇಳಿದ್ದಾರೆ.
ಮದುವೆ ಮುರಿದಿದ್ದಕ್ಕೆ ಬಸವರಾಜ ಸಾವು:
ಬೆಳಗಾವಿ ತಾಲೂಕಿನ ಕೆ.ಕೆ. ಕೊಪ್ಪ ಗ್ರಾಮದಲ್ಲಿ ಬಸವರಾಜ ಸೋಮಪ್ಪ ಡೊಂಗರಗಾವಿ (28) ಎನ್ನುವ ಯುವಕ ತಾನು ಹೆಣ್ಣು ನೋಡಿ, ಮದುವೆ ಗೊತ್ತು ಮಾಡಿಕೊಂಡರೂ ಮುರಿದು ಬೀಳುತ್ತಿವೆ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಹಲವು ವರ್ಷಗಳಿಂದ ಮದುವೆ ಮಾಡಿಕೊಳ್ಳಲು ಹಲವಾರು ಸಂಬಂಧ ಹುಡುಕಿದ್ದರೂ, ಎಲ್ಲ ಸಂಬಂಧಗಳೂ ರದ್ದಾಗುತ್ತಿವೆ ಎಂದು ಮನನೊಂದಿದ್ದ. ಭಾನುವಾರ ಇದೇ ದುಃಖದಲ್ಲಿ ಹೊಲದ ಬಳಿ ಹೋದ ಬಸವರಾಜ ಮರಕ್ಕೆ ನೇಣು ಬಿಗಿದುಕ್ಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಹಿರೇಬಾಗೇವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪತಿಯ ಅನೈತಿಕ ಸಂಬಂಧ: 5 ವರ್ಷದ ಮಗಳನ್ನು ಕೊಂದು ಆತ್ಮ*ಹತ್ಯೆ ಮಾಡಿಕೊಂಡ ಗ್ರಾಪಂ ಅಧ್ಯಕ್ಷೆ
unemployed tekki cry ದಯವಿಟ್ಟು ನನಗೊಂದು ಕೆಲಸ ಕೊಡಿ, ಸಂಬಳ ಬೇಡ: ನಿರುದ್ಯೋಗಿ ಟೆಕ್ಕಿಯ ಅಳಲು