newsics.com
ಮೈಸೂರು: ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಒಂದೇ ಕುಟುಂಬದ ನಾಲ್ವರು ಸಾವಿಗೀಡಾಗಿದ್ದಾರೆ.
ಹಣಕಾಸಿನ ನಷ್ಟದ ವಿಚಾರಕ್ಕೆ ಮನೆಯ ಯಜಮಾನನೇ ತನ್ನ ಕುಟುಂಬದ ಸದಸ್ಯರಾದ ತಾಯಿ, ಹೆಂಡತಿ ಹಾಗೂ ಮಗನನ್ನು ಕೊಲೆ ಮಾಡಿದ್ದಾನೆ. ನಂತರ ಆತನ ಸಹೋದರನಿಗೆ ಕರೆ ಮಾಡಿ ತಾನು ಸಾವಿಗೆ ಶರಣಾಗುವುದಾಗಿ ಕರೆ ಮಾಡಿ ತಿಳಿಸಿ ನೇಣು ಬಿಗಿದುಕೊಂಡಿದ್ದಾನೆ.
ಮೈಸೂರಿನ ವಿಶ್ವೇಶ್ವರಯ್ಯ ನಗರದ ಅಪಾರ್ಟ್‌ಮೆಂಟನಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಮನೆ ಮಾಲೀಕ ಚೇತನ (45), ಆತನ ಹೆಂಡತಿ ರೂಪಾಲಿ (43) ಆತನ ತಾಯಿ ಪ್ರಿಯಂವದಾ (62) ಹಾಗೂ ಆತನ ಮಗ ಕುಶಾಲ್ (15) ಸಾವಿಗೀಡಾದವರು. ಚೇತನ್ ನೇಣು ಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದರೆ, ಉಳಿದ ಮೂವರ ಶವಗಳು ಹಾಸಿಗೆ ಮೇಲೆ ಪತ್ತೆಯಾಗಿವೆ. ಸ್ವತಃ ಚೇತನ್ ತನ್ನ ತಾಯಿ, ಹೆಂಡತಿ ಹಾಗೂ ಮಗನಿಗೆ ವಿಷ ನೀಡಿ ಮನೆಯವರನ್ನು ಸಾಯಿಸಿ ತಾನು ನೇಣು ಬಿಗಿದುಕೊಂಡಿದ್ದಾನೆ.
ಮೃತ ಚೇತನ್ ಸೌದಿ ಅರೇಬಿಯಾಗೆ ಕಾರ್ಮಿಕರನ್ನು ಕಳುಹಿಸುವ ಕೆಲಸ ಮಾಡುತ್ತಿದ್ದರು. ಕಳೆದ 2019ರಲ್ಲಿ ಅಪಾರ್ಟ್ ಮೆಂಟ್ ಖರೀದಿಸಿದ್ದರು. ಮಗ 10ನೇ ತರಗತಿ ಓದುತ್ತಿದ್ದ. ಚೇತನ್ ಅಣ್ಣ ವಿದೇಶದಲ್ಲಿದ್ದಾರೆ ಎಂದು ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ತಿಳಿಸಿದರು.
ವಿದೇಶದಲ್ಲಿರುವ ಚೇತನ್ ಅಣ್ಣನೇ ಮೃತ ಚೇತನ್ ಹೆಂಡತಿಯ ಅಪ್ಪ ಅಮ್ಮನಿಗೆ ಬೆಳಗಿನ ಜಾವ ಕರೆ ಮಾಡಿ ಅಪಾರ್ಟ್‌ಮೆಂಟ್ ಬಳಿಗೆ ಹೋಗಲು ಹೇಳಿದ್ದಾರೆ. ಅವರು ಬಂದು ನೋಡಿದಾಗ ವಿಚಾರ ಗೊತ್ತಾಗಿದೆ. ನಿನ್ನೆ ಸಂಜೆ ಚೇತನ್ ಕುಟುಂಬ ದೇವಸ್ಥಾನಕ್ಕೆ ಹೋಗಿ ಮನೆಗೆ ಮರಳಿದ್ದನ್ನು ಕೆಲವರು ನೋಡಿದ್ದಾರೆ.
ಸಾವಿಗೂ ಮುನ್ನ ಚೇತನ್ ಡೆತ್ ನೋಟ್ ಬರೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ನಮ್ಮ ಸಾವಿಗೆ ನಾವೇ ಕಾರಣ. ಹಣಕಾಸಿನ ಸಮಸ್ಯೆಯಿಂದಾಗಿ ನಾವು ಸಾಯುತ್ತಿದ್ದೇವೆ. ನನ್ನ ಸ್ನೇಹಿತರಿಗೆ ಸಂಬಂಧಿಕರಿಗೆ ಯಾರೂ ತೊಂದರೆ ಕೊಡಬೇಡಿ. ನಮ್ಮನ್ನು ಕ್ಷಮಿಸಿಬಿಡಿ, I AM SORRY ಎಂದು ಚೇತನ್ ಬರೆದಿದ್ದಾರೆ.
ಚೇತನ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಅಮೆರಿಕದಲ್ಲಿ ವಾಸವಾಗಿರುವ ಸಹೋದರ ಭರತ್‌ಗೆ ಕರೆ ಮಾಡಿದ್ದಾನೆ. ಬೆಳಗಿನ ಜಾವ 4 ಗಂಟೆಗೆ ಕರೆ ಮಾಡಿ, ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿ ಫೋನ್ ಕಟ್ ಮಾಡಿದ್ದಾನೆ. ಆಗ ಚೇತನ್ ಪತ್ನಿಯ ತಂದೆ ತಾಯಿಗೆ ಕರೆ ಮಾಡಿದ ಭರತ್ ತುರ್ತಾಗಿ ಅಪಾರ್ಟ್‌ಮೆಂಟ್ ತೆರಳುವಂತೆ ಹೇಳಿದ್ದಾರೆ. ಚೇತನ್ ಅವರ ಅತ್ತೆ ಮನೆಗೆ ಬರುವಷ್ಟರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಮನೆಗೆ ಬಂದು ನೋಡಿದಾಗ ಸ್ವತಃ ಚೇತನ್ ತಾಯಿ, ಪತ್ನಿ, ಮಗನನ್ನು ಕೊಲೆ ಮಾಡಿದ್ದಾನೆಂಬುದು ತಿಳಿದುಬಂದಿದೆ. ಮೂವರಿಗೂ ವಿಷ ಉಣಿಸಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ನಂತರ ತಾನೂ ಸಾವಿಗೆ ಶರಣಾಗಿದ್ದಾನೆ.
ಪತಿಯ ಅನೈತಿಕ ಸಂಬಂಧ: 5 ವರ್ಷದ ಮಗಳನ್ನು ಕೊಂದು ಆತ್ಮ*ಹತ್ಯೆ ಮಾಡಿಕೊಂಡ ಗ್ರಾಪಂ ಅಧ್ಯಕ್ಷೆ