newsics.com
ಬೆಂಗಳೂರು : ಡಾಲಿ ಧನಂಜಯ ಅವರ ಮದುವೆ ಆಮಂತ್ರಣ ಪತ್ರಿಕೆಗೆ ಭಾರತೀಯ ಅಂಚೆ ಇಲಾಖೆಯಿಂದ ಮೆಚ್ಚುಗೆ ಸೂಚಿಸಲಾಗಿದೆ.
ಇನ್ಲ್ಯಾಂಡ್ ಲೆಟರ್ ಶೈಲಿಯಲ್ಲಿ ಸಿದ್ಧವಾದ ಆಹ್ವಾನ ಪತ್ರಿಕೆಗೆ ಅಂಚೆ ಇಲಾಖೆ ಅಧಿಕಾರಿಗಳು ಭೇಷ್ ಎಂದಿದ್ದಾರೆ. ಹಾಗಾಗಿ ಧನಂಜಯ ಹಾಗೂ ಧನ್ಯತಾ ಜೋಡಿಯ ಫೋಟೋದೊಂದಿಗೆ ವಿಶೇಷ ಸ್ಟ್ಯಾಂಪ್ಗಳನ್ನು ಗಿಫ್ಟ್ ರೂಪದಲ್ಲಿ ನೀಡಲಾಗಿದೆ.
ಮೊಬೈಲ್ ಯುಗದಲ್ಲಿ ಇನ್ಲ್ಯಾಂಡ್ ಲೆಟರ್ ಬಳಸುವವರ ಸಂಖ್ಯೆ ತೀರಾ ವಿರಳ ಆಗಿದೆ. ಹಾಗಿದ್ದರೂ ಕೂಡ ಡಾಲಿ ಧನಂಜಯ ಅವರು ಇನ್ಲ್ಯಾಂಡ್ ಲೆಟರ್ ಶೈಲಿಯಲ್ಲಿ ಮದುವೆ ಆಮಂತ್ರಣ ಪತ್ರಿಕೆ ಸಿದ್ಧಪಡಿಸಿದ್ದರಿಂದ ಜನರು ಇನ್ಲ್ಯಾಂಡ್ ಲೆಟರ್ ಬಗ್ಗೆ ಆಸಕ್ತಿ ತೋರಿಸಲು ಆರಂಭಿಸಿದ್ದಾರೆ ಎಂಬುದು ವಿಶೇಷ.
ಇನ್ಲ್ಯಾಂಡ್ ಲೆಟರ್ ಮಾದರಿಯಲ್ಲಿ ಆಮಂತ್ರಣ ನೀಡಿ ಜನರಿಗೆ ಮಾದರಿಯಾಗಿದ್ದೀರಿ. ನಿಮ್ಮ ನಡೆಯಿಂದ ಮತ್ತೆ ಇನ್ಲ್ಯಾಂಡ್ ಲೆಟರ್‌ಗಳಿಗೆ ಬೇಡಿಕೆ ಬಂದಿದೆ. ಜನರು ಮತ್ತೆ ಅಂಚೆ ಕಚೇರಿಯಲ್ಲಿ ಇನ್ಲ್ಯಾಂಡ್ ಲೆಟರ್ ಕೇಳಿ ಪಡೆಯುತ್ತಿದ್ದಾರೆ. ಮದುವೆಯ ಮೂಲಕ ಮಾದರಿಯಾದ ನಿಮಗೆ ಅಭಿನಂದನೆಗಳು’ ಎಂದು ಅಂಚೆ ಇಲಾಖೆ ಅಧಿಕಾರಿಗಳು ಡಾಲಿ ಧನಂಜಯ ಅವರಿಗೆ ತಿಳಿಸಿದ್ದಾರೆ.