newsics.com
ಗೋವಾದಲ್ಲಿ ಪೆಟ್ರೋಲ್ ತುಂಬಿಸಲು ಬಂಕ್ ಗೆ ಹೋಗಬೇಕೆಂದೇನಿಲ್ಲ. ಹಲವು ಕಡೆಗಳಲ್ಲಿ ಹೀಗೆ ಬೀದಿ ಬದಿಯಲ್ಲಿ ಸಿಗುತ್ತದೆ. ಇದರಿಂದ ತುಂಬಾ ಟೈಮ್ ಸೇವ್ ಆಗುತ್ತದೆ ಎಂದು ಯೂಟ್ಯೂಬರ್ ಒಬ್ಬಾಕೆ ಮಾಡಿರುವ ವಿಡಿಯೋ ಇನ್ನಿಲ್ಲದಂತೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
https://www.instagram.com/reel/DFNZ_iSz_BR/?igsh=NHYzZjUxNmJzYWJu
ಕ್ಯಾತಿಶ್ರೀ ಎನ್ನುವ ಇನ್ಸ್ಟಾಗ್ರಾಮ್ನಲ್ಲಿ ಈ ವಿಡಿಯೋ ಶೇರ್ ಆಗಿದೆ. ಇವಳ ಹೆಸರು ಕ್ಯಾತಿಶ್ರೀನೋ ಅಥವಾ ಇದು ಬೇರೆಯ ಇನ್ಸ್ಟಾಗ್ರಾಮೋ ಗೊತ್ತಾಗಿಲ್ಲ. ಆದರೆ, ಬಿಕಿನಿ ಧರಿಸಿ, ಕೊರಳಲ್ಲಿ ಬೇರೆ ಕರಿಮಣಿ ಬೇರೆ ಧರಿಸಿ ‘ಕುಖ್ಯಾತಿ ಪಡೆಯುತ್ತಿದ್ದಾಳೆ!
ಆರಂಭದಲ್ಲಿ, ಸ್ಕೂಟಿಯನ್ನು ಓಡಿಸುತ್ತಾ ಬರುವ ಈಕೆ ಕೊನೆಗೆ ರಸ್ತೆ ಬದಿಯಲ್ಲಿ ನಿಂತಿದ್ದಾಳೆ. ಅಲ್ಲಿ ಅಜ್ಜನೊಬ್ಬ ಬಾಟಲಿಯಲ್ಲಿ ಇರುವ ಪೆಟ್ರೋಲ್ ಅನ್ನು ಆಕೆಯ ಗಾಡಿಗೆ ತುಂಬಿಸಿದ್ದಾನೆ. ಆಕೆ ವಿಡಿಯೋ ಮಾಡುತ್ತಿದ್ದಾಳೆ ಎಂದು ಅರಿತಿರುವ ಆ ಅಜ್ಜ, ಅಪ್ಪಿತಪ್ಪಿಯೂ ತಲೆ ಎತ್ತಿ ನೋಡಲಿಲ್ಲ. ಅಲ್ಲಿ ಅವಳು ಮಾಹಿತಿ ನೀಡುತ್ತಾ, ಗೋವಾದಲ್ಲಿ ಪೆಟ್ರೋಲ್ ಬಂಕ್ ಹುಡುಕಿ ಹೋಗುವ ಅಗತ್ಯವಿಲ್ಲ. ರಸ್ತೆಯ ಬದಿಯಲ್ಲಿಯೇ ಹೀಗೆ ಸಿಗುತ್ತದೆ. ಇದರಿಂದ ಸಾಕಷ್ಟು ಸಮಯ ಉಳಿತಾಯವಾಗುತ್ತದೆ ಎಂದಿದ್ದಾಳೆ. ಸದ್ಯ ಈ ವಿಡಿಯೋ ಸಖತ್ ವೈರಲ್ ಆಗ್ತಿದೆ.