Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > NITISH KUMAR LOVE STORY ಪತ್ನಿ ನೆನಪಿಗಾಗಿ ಪ್ರತಿಮೆ ನಿರ್ಮಾಣ ಮಾಡಿದ್ದಾರೆ ಬಿಹಾರ ಸಿಎಂ
ದೇಶಪ್ರಮುಖ

NITISH KUMAR LOVE STORY ಪತ್ನಿ ನೆನಪಿಗಾಗಿ ಪ್ರತಿಮೆ ನಿರ್ಮಾಣ ಮಾಡಿದ್ದಾರೆ ಬಿಹಾರ ಸಿಎಂ

Share
2 Min Read
SHARE

newsics.com

ಪ್ರೇಮಿಗಳ ದಿನಾಚರಣೆ ಹಿನ್ನೆಲೆ ಬಿಹಾರದಲ್ಲೂ ರಾಜಕಾರಣಿಗಳ ಪ್ರೇಮಕಥೆಗಳು ಭರ್ಜರಿಯಾಗಿಯೇ ಚರ್ಚೆಯಾಗುತ್ತಿವೆ.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ರಾಜಕೀಯ ಜೀವನ ಅವರ ಪ್ರೇಮಕಥೆಯಷ್ಟೇ ಕುತೂಹಲಕಾರಿಯಾಗಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಎಲ್ಲರಂತೆ ತಂದೆ-ತಾಯಿಗಳು ನಿಶ್ಚಯಿಸಿದಂತೆಯೇ ವಿವಾಹ ಮಾಡಿಕೊಂಡಿದ್ದರು. ಕೃಷ್ಣಾನಂದ ಸಿನ್ಹಾ ಅವರ ಮಗಳು ಮಂಜು ಸಿನ್ಹಾ ಅವರನ್ನು ಶಾಸ್ತ್ರೋಕ್ತವಾಗಿ ವಿವಾಹವಾಗಿದ್ದರು. ಹೆಂಡತಿ ತಂದೆ ಸಿನ್ಹಾ ಸಿಯೋಡಾ ಗ್ರಾಮದ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದರು.

ಕಾಲೇಜಿನಲ್ಲಿ ಓದುತ್ತಿದ್ದ ಮಂಜು ಸಿನ್ಹಾ ಶಿಕ್ಷಕಿಯಾಗುವ ಕನಸನ್ನು ನನಸು ಮಾಡಿಕೊಂಡಿದ್ದರು. ಕೃಷ್ಣಾನಂದರು ತಮ್ಮ ಮಗಳನ್ನು ಇಂಜಿನಿಯರ್ ಹುಡುಗನೊಂದಿಗೆ ಮದುವೆ ಮಾಡಿಕೊಟ್ಟರು. ಅವರಿಬ್ಬರ ಮದುವೆ ಅತ್ಯಂತ ಸರಳವಾಗಿಯೇ ನೆರವೇರಿತು. ಮಂಜು ಸಿನ್ಹಾ ಮತ್ತು ನಿತೀಶ್ ಕುಮಾರ್ ಅವರು 1973ರಲ್ಲಿ ವಿವಾಹವಾದರು. ನಿತೀಶ್ ಕುಮಾರ್ ಅವರು ವಿದ್ಯಾರ್ಥಿ ದಿನಗಳಿಂದಲೂ ಸರಳತೆಯ ಪ್ರತಿಪಾದಕರಾಗಿದ್ದರು ಮತ್ತು ಅದರಂತೆಯೇ ನಡೆದುಕೊಂಡರು. ವರದಕ್ಷಿಣೆ ರಹಿತ ವಿವಾಹದ ಮೂಲಕ ಜನಮನ ಗೆದ್ದಿದ್ದರು.
ನಿತೀಶ್ ಕುಮಾರ್ ಅವರ ಮದುವೆ ಬಗ್ಗೆ ಮಾಜಿ ವಿಧಾನಪರಿಷತ್ ಸದಸ್ಯ ಪ್ರೇಮ್ ಕುಮಾರ್ ಮಣಿ ಮಾತನಾಡಿ, ಆ ಕಾಲದಲ್ಲಿ ಮದುವೆ ಸಂದರ್ಭದಲ್ಲಿ ವರದಕ್ಷಿಣೆ ಹೆಚ್ಚಾಗಿತ್ತು. ನಿತೀಶ್ ಕುಮಾರ್ ಅವರ ತಂದೆ, ಮಂಜು ಸಿಂಗ್ ಅವರ ತಂದೆಯಿಂದ ₹ 22000 ವರದಕ್ಷಿಣೆ ಪಡೆದಿದ್ದರಂತೆ. ಈ ವಿಷಯ ತಿಳಿದ ನಿತೀಶ್ ಕುಮಾರ್ ತೀವ್ರ ಕೋಪಗೊಂಡು ಹಣ ಹಿಂತಿರುಗಿಸುವಂತೆ ತಂದೆಗೆ ಸಂದೇಶ ಕಳುಹಿಸಿದ್ದರು. ಜೆಪಿ ಆಂದೋಲನದಿಂದ ಬಂದ ನಿತೀಶ್ ಕುಮಾರ್ ಅವರ ಮದುವೆಯಲ್ಲಿ ವರದಕ್ಷಿಣೆ ವ್ಯವಹಾರ ನಡೆದಿರುವುದು ಸ್ವಲ್ಪವೂ ಇಷ್ಟವಿರಲಿಲ್ಲ.
ನಿತೀಶ್ ಕುಮಾರ್ ಅವರು ತಮ್ಮ ಪತ್ನಿ ಮಂಜು ಸಿನ್ಹಾ ಅವರನ್ನು ತುಂಬಾ ಪ್ರೀತಿಸುತ್ತಿದ್ದರು ಅಂತಾರೆ ಹಿರಿಯ ಪತ್ರಕರ್ತ ಅರುಣ್ ಪಾಂಡೆ. 2007ರಲ್ಲಿ ಅವರ ಪತ್ನಿ ಮಂಜು ಸಿನ್ಹಾ ಅವರು ನಿಧನರಾಗಿದ್ದರು. ಪತ್ನಿ ಅಗಲಿಕೆ ನಿತೀಶ್ ಕುಮಾರ್ ಅವರನ್ನು ಕಂಗೆಡಿಸಿತ್ತು. ಅವರು ನಿಧನರಾದಾಗ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಕ್ಕಿ ಬಿಕ್ಕಿ ಅತ್ತಿದ್ದರು. ಮಂಜು ಸಿನ್ಹಾ ಮೇಲೆ ನಿತೀಶ್ ಕುಮಾರ್ ಪ್ರೀತಿ ಇಂದಿಗೂ ಹಾಗೆಯೇ ಹಚ್ಚ ಹಸಿರಾಗಿದೆ.
ಅವರ ಸ್ಮರಣಾರ್ಥ ರಾಜಧಾನಿ ಪಾಟ್ನಾದ ರಾಜೇಂದ್ರ ನಗರದಲ್ಲಿ ದೊಡ್ಡ ಗಾತ್ರದ ಪ್ರತಿಮೆ ನಿರ್ಮಿಸಲಾಗಿದೆ. ಪ್ರತಿ ಮರಣ ವಾರ್ಷಿಕೋತ್ಸವ ಮತ್ತು ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಿತೀಶ್ ಕುಮಾರ್ ತಪ್ಪದೇ ತಮ್ಮ ಪತ್ನಿ ನಮನ ಸಲ್ಲಿಸುತ್ತಾರೆ. ಪ್ರತಿಮೆಗೆ ಮಾಲಾರ್ಪಣೆ ಮಾಡಿ ನೆನಪಿನಾಳಕ್ಕೆ ಜಾರುತ್ತಾರೆ. ಕೆಲ ಸಮಯ ಮೌನಾಚರಣೆ ಮಾಡಿ, ಅಲ್ಲಿಂದ ತೆರಳುತ್ತಾರೆ.

TAGGED:NITISH KUMAR LOVE STORY Bihar CM has built a statue in memory of his wife
Share This Article
Facebook Twitter Copy Link Print
Previous Article SPECIAL OFFERS ಈರುಳ್ಳಿ ಕೊಳ್ಳಿ, ಬಂಗಾರ ಗೆಲ್ಲಿ: ಗ್ರಾಹಕರಿಗೆ ಸೂಪರ್ ಆಫರ್!
Next Article Beer Price Hike ಮದ್ಯ ಪ್ರಿಯರಿಗೆ ಬಿಗ್ ಶಾಕ್ : ಬಿಯರ್ ಬೆಲೆ ಮತ್ತೆ ಶೇ.15ರಷ್ಟು ಹೆಚ್ಚಳ

Popular Posts

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read

You Might Also Like

ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read
ಪ್ರಮುಖಕರ್ನಾಟಕ

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read
ಪ್ರಮುಖದೇಶಮನರಂಜನೆ

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?