newsics.com
ಬೆಂಗಳೂರು: 2025ರ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ರಾಕಿಂಗ್ ಸ್ಟಾರ್ ನಟಿಸುತ್ತಿರುವ ‘ಟಾಕ್ಸಿಕ್’. ಇದೇ ವರ್ಷ ಈ ಸಿನಿಮಾ ರಿಲೀಸ್ ಆಗುತ್ತೆ ಅನ್ನೋ ನಂಬಿಕೆಯಲ್ಲಿ ಸಿನಿಮಾ ಮಂದಿ ಇರುವಾಗಲೇ ಅವರ ಅಭಿಮಾನಿಗಳಿಗೆ ಸೂಪರ್ ಸುದ್ದಿಯೊಂದು ಸಿಕ್ಕಿದೆ.
ಅದೇನಂದ್ರೆ ಯಶ್ ಹುಡುಕಿಕೊಂಡು ನಯನತಾರಾ ಬೆಂಗಳೂರಿಗೆ ಆಗಮಿಸಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾಗೆ ಬೆಂಗಳೂರಿನಲ್ಲಿ ಅದ್ದೂರಿಯಾಗಿ ಚಿತ್ರೀಕರಣ ಮಾಡಲಾಗುತ್ತಿದೆ. ಈ ಸಿನಿಮಾದಲ್ಲಿ ಅನೇಕ ಕಲಾವಿದರು ಅಭಿನಯಿಸುತ್ತಿದ್ದಾರೆ. ಮುಖ್ಯವಾಗಿ ಪರಭಾಷೆಯ ಸ್ಟಾರ್ ನಟಿಯರು ಈ ಸಿನಿಮಾದಲ್ಲಿದ್ದಾರೆ. ಈಗಾಗಲೇ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಶೂಟಿಂಗ್ ಸೆಟ್ನಿಂದ ಒಂದಷ್ಟು ವಿಷಯಗಳು ಕೇಳಿಬರುತ್ತಿವೆ. ಈಗ ನಟಿ ನಯನತಾರಾ ಕೂಡ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ. ಅದ್ದೂರಿ ಸೆಟ್ನಲ್ಲಿ ಶೂಟಿಂಗ್ ಮಾಡಲಾಗುತ್ತಿದೆ.
ಟಾಕ್ಸಿಕ್’ ಸಿನಿಮಾಗೆ ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕಿ ಗೀತು ಮೋಹನ್ದಾಸ್ ಅವರು ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಬಾಲಿವುಡ್ ಬೆಡಗಿಯರಾದ ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ಹುಮಾ ಖುರೇಶಿ ಅವರು ಪಾತ್ರವರ್ಗದಲ್ಲಿ ಇದ್ದಾರೆ.
Entertainment ಬಾಯ್ಸ್ vs ಗರ್ಲ್ಸ್ ಶೋನಿಂದ ಭವ್ಯಾ ಗೌಡ ಹೊರನಡೆದಿದ್ದೇಕೆ? ಚೈತ್ರಾ ದಿಢೀರ್ ಎಂಟ್ರಿ ತಂದ ಅಚ್ಚರಿ
Urfi Javed ಮುಸ್ಲಿಂ ವ್ಯಕ್ತಿಯನ್ನು ಮಾತ್ರ ನಾನು ಮದುವೆ ಆಗಲ್ಲ! ಉರ್ಫಿ