newsics.com
ಮೀರತ್ (ಉತ್ತರ ಪ್ರದೇಶ): ತನ್ನ ಪತ್ನಿಯ ತಂಗಿಯನ್ನೇ ಸಾಮೂಹಿಕ ಅ*ತ್ಯಾಚಾರ ಮತ್ತು ಕೊ*ಲೆ ಮಾಡಲು 40 ಸಾವಿರ ರೂ. ಸಾಲ ಮಾಡಿ ಇಬ್ಬರು ಗುತ್ತಿಗೆ ಹಂತಕರನ್ನು ನೇಮಿಸಿಕೊಂಡಿದ್ದ ವಿಚಾರ ಬಹಿರಂಗವಾಗಿದೆ.
ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಇಬ್ಬರು ಹಂತಕರು ತಲೆಮರೆಸಿಕೊಂಡಿದ್ದಾರೆ. ಜನವರಿ 21 ರಂದು ಮೀರತ್‌ನ ನಾನು ಕಾಲುವೆ ಬಳಿ ಈ ಘಟನೆ ನಡೆದಿದ್ದು, ಪೋಲೀಸರ ಪ್ರಕಾರ, ಸಂತ್ರಸ್ತೆಯನ್ನು ಕತ್ತು ಹಿಸುಕಿ ಸಾ*ಯಿಸುವ ಮೊದಲು ಆಕೆಯ ಅಕ್ಕನ ಗಂಡ (ಆರೋಪಿ) ಮತ್ತು ಇತರ ಇಬ್ಬರು ಸಾಮೂಹಿಕ ಅ*ತ್ಯಾಚಾರ ನಡೆಸಿದ್ದಾರೆ.
ಆಶಿಶ್ ಎಂಬಾತ ತನ್ನ ಪತ್ನಿಯ ತಂಗಿಯೊಂದಿಗೆ ಸಂಬಂಧ ಹೊಂದಿದ್ದ. ಆಕೆ ತನ್ನನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಳು ಎಂದು ಆರೋಪಿಸಿ ಕೊ*ಲೆಗೆ ಯೋಜನೆ ರೂಪಿಸಿದ್ದ. ಆಸ್ಪತ್ರೆಯಲ್ಲಿ ಕೆಲಸಗಾರರಾಗಿದ್ದ ಶುಭಂ ಮತ್ತು ಇನ್ನೊಬ್ಬ ಸಹವರ್ತಿ ದೀಪಕ್ ಎನ್ನುವ ಇಬ್ಬರ ಸಹಾಯ ಕೋರಿದ್ದ. 30,000 ರೂ.ಪಡೆದು ಆಕೆಯನ್ನು ಹ*ತ್ಯೆಗೈಯಲು ಒಪ್ಪಿಕೊಂಡಿದ್ದರು” ಎಂದು ಮುಜಾಫರ್‌ನಗರ ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಆದಿತ್ಯ ಬನ್ಸಾಲ್ ಹೇಳಿದ್ದಾರೆ.
ಪ್ರಮುಖ ಆರೋಪಿ ಆಶಿಶ್ 40 ಸಾವಿರ ರೂಪಾಯಿ ಸಾಲ ಮಾಡಿ, ಮುಂಗಡವಾಗಿ 10 ಸಾವಿರ ರೂ. ಮತ್ತು ಕೊಲೆಯ ನಂತರ 20 ಸಾವಿರ ರೂಪಾಯಿಗಳನ್ನು ಪಾವತಿಸಿದ್ದ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಆಶಿಶ್, ಶುಭಂ ಮತ್ತು ದೀಪಕ್ ಮಹಿಳೆಯನ್ನು ಸ್ಕೂಟರ್‌ನಲ್ಲಿ ಕಾಲುವೆ ಬಳಿ ಕರೆದೊಯ್ದು ಸಾಮೂಹಿಕ ಅ*ತ್ಯಾಚಾರ ಎಸಗಿ, ಸ್ಕಾರ್ಫ್‌ನಿಂದ ಕತ್ತು ಹಿಸುಕಿ ಹ*ತ್ಯೆ ಮಾಡಿ ಮೃತ ದೇಹವನ್ನು ಪೆಟ್ರೋಲ್ ಹಾಕಿ ಸು*ಟ್ಟು ಹಾಕಿದ್ದಾರೆ.
ಸಂತ್ರಸ್ತೆಯ ಕುಟುಂಬ ಜನವರಿ 23 ರಂದು ಪುತ್ರಿ ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದು, ತನಿಖೆಯ ಸಮಯದಲ್ಲಿ, ಆಶಿಶ್, ಶುಭಂ ಮತ್ತು ದೀಪಕ್ ಅವರೊಂದಿಗೆ ಆಕೆ ಕೊನೆಯದಾಗಿ ಕಾಣಿಸಿಕೊಂಡಿದ್ದು ತಿಳಿದುಬಂದಿದೆ. ಆಶಿಶ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ತಪ್ಪೊಪ್ಪಿಕೊಂಡಿದ್ದಾನೆ.
ಫೋರೆನ್ಸಿಕ್ ತಂಡಗಳು ಯುವತಿಯ ಅವಶೇಷಗಳು, ಸುಟ್ಟ ಬಟ್ಟೆಗಳು, ಉಂಗುರ ಮತ್ತು ಇತರ ವಸ್ತುಗಳನ್ನು ಸ್ಥಳದಿಂದ ವಶಪಡಿಸಿಕೊಂಡಿದ್ದು, ಸ್ಥಳದಲ್ಲಿ ಬಳಸಿದ ಮತ್ತು ಬಳಸದ ಕಾಂಡೋಮ್‌ಗಳೂ ಕಂಡುಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.
Free meals, medicine ಮಹಾಕುಂಭ ಮೇಳ ಭಕ್ತರಿಗೆ ರಿಲಯನ್ಸ್‌ನಿಂದ ಉಚಿತ ಊಟ, ಔಷಧ, ಪ್ರಯಾಣ ಘೋಷಣೆ