newsics.com
ಬೆಂಗಳೂರು: ಸಬಿಗ್ ಬಾಸ್ 11 ಸೀಸನ್ ಗಳನ್ನು ಮುಗಿಸಿದ ಬಳಿಕ ಕಿಚ್ಚ ಸುದೀಪ್ ಬಿಗ್ ಬಾಸ್ ಹೋಸ್ಟ್ ಗೆ ವಿದಾಯ ಹೇಳಿರುವುದು ಗೊತ್ತೇ ಇದೆ. ಆದ್ರೆ ಮುಂದಿನ ಸೀಸನ್ ಗೆ ಮತ್ತೆ ಬರ್ತಾರ ಎನ್ನುವ ಕುರಿತಾಗಿ ಮಾತನಾಡಿದ್ದಾರೆ.
ಮುಂದಿನ ಸೀಸನ್ ನಿಂದ ಸುದೀಪ್ ಇರುವುದಿಲ್ಲ ಎನ್ನುವುದನ್ನು ವೀಕ್ಷಕರು ಕಲ್ಪನೆ ಮಾಡಿಕೊಳ್ಳಲು ಆಗುತ್ತಿಲ್ಲ. ಅವರ ಜಾಗವನ್ನು ಯಾರು ತುಂಬುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಇದುವರೆಗೆ ಸಿಕ್ಕಿಲ್ಲ.
ಸುದೀಪ್ ಅವರು ನಿರೂಪಣೆ ಮಾಡುವುದಿಲ್ಲ ಎಂದಿದ್ದಾರೆ ಎನ್ನುವ ಬಗ್ಗೆ ಮಾಧ್ಯಮದವರು ಪ್ರಶ್ನೆ ಕೇಳಿದ್ದಾರೆ.
ಬಿಗ್ ಬಾಸ್’ ಶೋ ಕುರಿತಾದ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಪ್ರಕಾಶ್ ಗೋಪಾಲಕೃಷ್ಣ ಮಾತನಾಡಿದ್ದು, ಮುಂದಿನ ಸೀಸನ್ ನಲ್ಲೂ ಸುದೀಪ್ ಸರ್ ಅವರೇ ಇರುತ್ತಾರೆ. ಅವರು ಇಲ್ಲದೆ ಬಿಗ್ ಬಾಸ್ ನ್ನು ಕಲ್ಪನೆ ಯೋಚನೆ ಮಾಡೋಕೆ ಆಗುತ್ತಾ?. ಈ ಹಿಂದೆ 10 ಸೀಸನ್ ಅಂಥ ಹೇಳಿದ್ದರು. ಮುಂದಿನ ಸೀಸನ್ ಗೂ ಅವರನ್ನೇ ಕರೆತರುತ್ತೇವೆ ಎಂದಿದ್ದಾರೆ.
ಇದು ಅವರ ಕೊನೆಯ ಸೀಸನ್ ಅಲ್ಲ. ಕೊನೆ ಸೀಸನ್ ಅಂಥ ಅವರು ಸೋಶಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದ್ದಾರೆ. ನೆಕ್ಸ್ ಸೀಸನ್ ಬರುತ್ತದೆ. ಅದರ ಬಗ್ಗೆ ಮಾತುಕತೆ ನಡೆಯುತ್ತಿದೆ ಕಾದುನೋಡಿ ಎಂದಿದ್ದಾರೆ.