newsics.com
ನವದೆಹಲಿ : ಮಹಾಕುಂಭಮೇಳದಲ್ಲಿ ಭಾಗಿಯಾಗಲು ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಯಾಗ್ ರಾಜ್‌ಗೆ ಆಗಮಿಸಿದ್ದಾರೆ.
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಪುತ್ರ ಐಸಿಸಿ ಅಧ್ಯಕ್ಷ ಜಯ ಶಾ ಹಾಗೂ ಕುಟುಂಬಸ್ಥರ ಜೊತೆ ಆಗಮಿಸಿದ ಅಮಿತ್ ಶಾ ಅವರು ತ್ರಿವೇಣಿ ಸಂಗಮದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ ಅಮಿತ್ ಶಾ ಅವರು ಬಳಿಕ ಬಡೇ ಹನುಮಾನ್ ಮಂದಿರಕ್ಕೆ ಭೇಟಿ ಕೊಟ್ಟರು. ನಂತರ ಅಕ್ಷಯವಟ್ ಪಾಟಲಪುರಿ ಮಂದಿರದಲ್ಲಿ ಅಖಾಡದ ಮುಖ್ಯಸ್ಥರು, ಸಾಧುಗಳೊಂದಿಗೆ ಭೋಜನ ಸವಿದರು.
ಇದೇ ಸಂದರ್ಭದಲ್ಲಿ ಅಮಿತ್ ಶಾ ಪುತ್ರ ಐಸಿಸಿ ಅಧ್ಯಕ್ಷ ಜಯ್ ಶಾ ಅವರ ಮಗನಿಗೆ ಕುಂಭಮೇಳದಲ್ಲಿದ್ದ ಸ್ವಾಮೀಜಿಗಳು ವಿಶೇಷ ಆಶೀರ್ವಾದ ಮಾಡಿದರು.