newsics.com
ಉತ್ತರ ಪ್ರದೇಶ: ಉತ್ತರ ಪ್ರದೇಶದ ಬಸ್ತಿಯಲ್ಲಿ 10 ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗಿಯನ್ನು ಮದುವೆಯಾಗಲು ಮುಸ್ಲಿಂ ಯುವಕನೊಬ್ಬ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದಾನೆ.
34 ವರ್ಷದ ಸದ್ದಾಂ ಎಂಬಾತ ತನ್ನ ಹೆಸರನ್ನು ಶಿವಶಂಕರ ಸೋನಿ ಎಂದು ಬದಲಿಸಿಕೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ
ಮೂರು ದಿನದ ಹಿಂದೆ ಯುವತಿಯೊಬ್ಬಳು ಸದ್ದಾಂ ಕುಟುಂಬದವರ ವಿರುದ್ಧ ದೂರು ದಾಖಲಿಸಿ ಅತ್ಯಾಚಾರ, ಗರ್ಭಪಾತಕ್ಕೆ ಒತ್ತಾಯ, ವಿವಾಹ ಪೂರ್ವ ಅತ್ಯಾಚಾರ, ಬೆದರಿಕೆ ಕಾರಣ ನೀಡಿ ದೂರು ದಾಖಲಿಸಿದ್ದಳು. ಪೊಲೀಸರು ಪರಿಶೀಲನೆ ನಡೆಸಿದಾಗ ಅವರಿಬ್ಬರೂ ಮದುವೆಯಾಗಿರುವುದು ಗೊತ್ತಾಗಿದೆ ಎಂದು ಕೊತ್ವಾಲಿ ಠಾಣಾಧಿಕಾರಿ ದೇವೇಂದ್ರ ಸಿಂಗ್ ತಿಳಿಸಿದ್ದಾರೆ.
ಬಸ್ತಿ ನಗರದ ಬಜಾರ್ ನಿವಾಸಿ ಸದ್ದಾಂ ಅದೇ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದ. ಇಬ್ಬರೂ ಬೇರೆ ಧರ್ಮದವರಾಗಿದ್ದ ಕಾರಣ ಸದ್ದಾಂ ಮನೆಯಲ್ಲಿ ಮದುವೆಗೆ ಒಪ್ಪಿರಲಿಲ್ಲ. ಹೀಗಾಗಿ ಯುವತಿ ದೂರು ನೀಡಿದ್ದಳು. ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಭಾನುವಾರ ರಾತ್ರಿ ಸಿಟಿ ಮಾರ್ಕೆಟ್ ದೇವಾಲಯದಲ್ಲಿ ಇಬ್ಬರೂ ಸ್ವಂತ ಇಚ್ಛೆಯಿಂದ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.