newsics.com
ಬೆಂಗಳೂರು : ಸ್ಯಾಂಡಲ್‌ವುಡ್‌ನ ಹಿರಿಯ ನಟಿ ಗಿರಿಜಾ ಲೋಕೇಶ್ ಅವರಿಗೆ ಗೌರವ ಡಾಕ್ಟರೇಟ್ ಅನೌನ್ಸ್ ಆಗಿದೆ.
ಮೈಸೂರಿನ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಈ ಡಾಕ್ಟರೇಟ್ ಕೊಡುತ್ತಿದೆ.
ಮೈಸೂರಿನ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಘೋಷಿಸಿದೆ. ಈ ಮೂಲಕ ಗಿರಿಜಾ ಲೋಕೇಶ್ ಅವರು ಡಾಕ್ಟರ್ ಗಿರಿಜಾ ಲೋಕೇಶ್ ಆಗುತ್ತಿದ್ದಾರೆ. ಹಾಗೆ ಇವರ ಸಿನಿಮಾ ಜರ್ನಿ ನಿಜಕ್ಕೂ ವಿಶೇಷವಾಗಿದೆ. ನೃತ್ಯ ಮತ್ತು ಅಭಿನಯ ಎರಡೂ ಗೊತ್ತಿರೊ ಗಿರಿಜಾ ಲೋಕೇಶ್ ಅವರು ಉರ್ದು ನಾಟಕದಲ್ಲೂ ಅಭಿನಯಿಸಿದ್ದಾರೆ. ತೆಲುಗು ಮತ್ತು ತಮಿಳು ನಾಟಕದಲ್ಲೂ ಅಭಿನಯಿಸಿದ್ದಾರೆ. ಸಿನಿಮಾದ ಜೊತೆ ಜೊತೆಗೆ ಸೀರಿಯಲ್ ನಲ್ಲೂ ಆ್ಯಕ್ಟೀವ್ ಆಗಿದ್ದಾರೆ.