newsics.com
ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್) ಅವರು 28 ವರ್ಷಗಳ ಕಾಲ ಚಿತ್ರರಂಗದಲ್ಲಿ ವೃತ್ತಿ ಜೀವನವನ್ನು ಅನುಭವಿಸಿದ್ದಾರೆ. ಇತ್ತೀಚೆಗೆ ಅವರ ಮ್ಯಾಕ್ಸ್ ಸಿನಿಮಾ ಕೂಡ ತೆರೆ ಕಂಟು ಬ್ಲಾಕ್ ಬಸ್ಟರ್ ಹಿಟ್ ಆಯ್ತು. ಈ ಮಧ್ಯೆ ಕಿಚ್ಚನ ನಟನಾ ನಿವೃತ್ತಿ ಟಾಕ್ ಸಖತ್ ಸೌಂಡ್ ಮಾಡ್ತಿದೆ.
ಹೌದು, ಕಿಚ್ಚ ಸುದೀಪ್ ಅವರು ಹಲವು ಬಾರಿ, ನಟನೆ, ಸಿನಿಮಾ ರಂಗದ ಕುರಿತಾಗಿ ಮಾತನಾಡಿದ್ದಾರೆ. ಇದೀಗ ಮತ್ತೆ ಸಂದರ್ಶನವೊಂದರಲ್ಲಿ ನಟನೆಯಿಂದ ನಿವೃತ್ತಿ ಪಡೆಯುವ ಕುರಿತು ಸುಳಿವನ್ನೂ ಕಿಚ್ಚ ನೀಡಿದ್ದಾರೆ.
ಪ್ರತಿಯೊಬ್ಬ ನಾಯಕನು ಕೊನೆಯಲ್ಲಿ ಬೋರ್ ಆಗುತ್ತಾನೆ. ಪ್ರತಿಯೊಬ್ಬರೂ ಪ್ರಮುಖ ವ್ಯಕ್ತಿಯಾಗಿ ಶೆಲ್ಫ್ ಜೀವನವನ್ನು ಹೊಂದಿದ್ದಾರೆ. ನಾಯಕನಾಗಿ ನಾನು ಯಾರನ್ನೂ ನನ್ನ ಸೆಟ್‌ನಲ್ಲಿ ಕಾಯುವಂತೆ ಮಾಡಿಲ್ಲ. ನಾಳೆ, ನಾನು ಪೋಷಕ ಪಾತ್ರವನ್ನು ಮಾಡಿದರೆ, ನಾನು ಬೇರೆಯವರಿಗಾಗಿ ಕಾಯುತ್ತಾ ಕುಳಿತುಕೊಳ್ಳಲು ಬಯಸುವುದಿಲ್ಲ. ಸಹೋದರ ಅಥವಾ ಚಿಕ್ಕಪ್ಪನ ಪಾತ್ರದಂತಹ ಪಾತ್ರಗಳಲ್ಲಿ ನನಗೆ ಆಸಕ್ತಿ ಇಲ್ಲ ಎಂದು ನಟ ಸ್ಪಷ್ಟಪಡಿಸಿದ್ದಾರೆ.
ಮುಂದೆ ಸಿನಿಮಾ ಇನ್ನೂ ಮಾಡಬಹುದು, ನಿರ್ದೇಶನ ಅಥವಾ ನಿರ್ಮಾಣ ಮಾಡಬಹುದು ಗೊತ್ತಿಲ್ಲ. ಸಿನಿಮಾ ನಮಗೆ ಬಹಳ ಹತ್ತಿರವಾಗಿರುವುದರಿಂದ, ಅದರಿಂದ ದೂರ ಆಗ್ತೀನಿ ಅಂತ ಹೇಳೋಕೆ ಆಗಲ್ಲ. ಒಬ್ಬ ನಾಯಕ ನಟನೆಯಿಂದ ದೂರ ಆಗಬಹುದು. ಅದನ್ನ ಇವತ್ತು ಅಟ್ಯಾಚ್‌ಮೆಂಟ್ ಮಾಡಿಕೊಂಡು ಕೂತಿಲ್ಲ. ಪೋಷಕ ನಟನಾಗಿ ಸೈರಾ ನರಸಿಂಹ ರೆಡ್ಡಿ, ‘ದಬಾಂಗ್’ನಲ್ಲಿ ಬೇರೆ ತರಹದ ಪಾತ್ರ ಮಾಡುತ್ತಾ ಇರಲಿಲ್ಲ. ನಾನು ಯಾವತ್ತೂ ಹೀರೋ ಇಮೇಜ್‌ಗೆ ಅಂಟಿಕೊಂಡಿಲ್ಲ. ಆ ಪಾತ್ರಗಳನ್ನ ಮಾಡೋಕೆ ಖುಷಿ ಇದೆ. ತೃಪ್ತಿ ಇದೆ ಎಂದು ಮಾತನಾಡಿರುವ ಸುದೀಪ್ ಮುಂದಿನ ಸಿನಿಮಾ ಕೆರಿಯರ್ ಪ್ಲ್ಯಾನ್ ಬಗ್ಗೆ ತಿಳಿಸಿದ್ದಾರೆ.
ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಕೆಲಸ ಮಾಡಿದ್ದಾರೆ.