newsics.com
ಬಿಗ್ ಬಾಸ್ ಶೋನ ಸೂಪರ್ ಸಂಡೇ ಪ್ರೋಮೋ ರಿಲೀಸ್ ಆಗಿದೆ. ಮನೆಯಲ್ಲಿ ಎಲ್ಲರೂ ನಗುನಗುತ್ತ ಇದ್ದು ಉಡುಗೊರೆಗಳನ್ನು ತಮಗಿಷ್ಟ ಬಂದವರಿಗೆ ಕೊಟ್ಟು ಸಖತ್ ಖುಷಿಯಾಗಿದ್ದಾರೆ. ಇದರ ಜೊತೆಗೆ ಕಣ್ಣೀರು ಕೂಡ ಹಾಕಿದ್ದಾರೆ.
https://www.instagram.com/reel/DEJQ7StKj5j/?igsh=a2d1NHRzZ2hqZ3Rh
ಸದ್ಯ ರಿಲೀಸ್ ಆಗಿರುವ ಪ್ರೋಮೋದಲ್ಲಿ ಸುದೀಪ್ ಅವರು, ಹೊಸ ವರ್ಷಕ್ಕೆ ನಿಮ್ಮ ಪರ್ಸನಲ್ ವಸ್ತುವನ್ನು ಯಾರಿಗೆ ಕೊಡಲು ಇಷ್ಟ ಪಡುತ್ತೀರಾ ಎಂದು ಕೇಳಿದ್ದಾರೆ. ಇದಕ್ಕೆ ರಜತ್ ಅವರು ಧನರಾಜ್ಗೆ ವಸ್ತ್ರವೊಂದನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಮೋಕ್ಷಿತಾಗೆ ಐಶ್ವರ್ಯ ನೀಡಿದರೆ, ಮಂಜುಗೆ ಗೌತಮಿ ಗಿಫ್ಟ್ವೊಂದನ್ನು ನೀಡಿದ್ದಾರೆ. ಐಶ್ವರ್ಯಗೆ ಚೈತ್ರಾ ಉಡುಗೊರೆಯೊಂದನ್ನು ಕೊಟ್ಟಿದ್ದಕ್ಕೆ, ತಮ್ಮ ತಾಯಿಯನ್ನು ನೆನೆದು ಐಶ್ವರ್ಯ ಕಣ್ಣೀರು ಹಾಕಿದ್ದಾರೆ. ನನಗೆ ನೋಡಲು ಅಮ್ಮ ಇದಾರೆ, ಐಶ್ವರ್ಯ ಹೇಗೆ ಇರಬಹುದು ಎಂದು ಹೇಳಿ ಚೈತ್ರಾ ಅತ್ತಿದ್ದಾರೆ. ಗಿಫ್ಟ್ ಕೊಡುವಾಗ ಇಬ್ಬರು ಕಣ್ಣೀರು ಹಾಕಿದ್ದಾರೆ.
ಇನ್ನು ಭವ್ಯಗೌಡ ತ್ರಿವಿಕ್ರಮ್ ಗೆ ಉಡುಗೊರೆ ಕೊಟ್ಟು ನಾಚಿ ನೀರಾಗಿದ್ದಾರೆ. ಇದಕ್ಕೆ ಎಂಥಾ ಸರ್ಪ್ರೈಸ್ ಅಲ್ಲ ಎಂದು ಕಿಚ್ಚ ಹೇಳಿದ್ದಕ್ಕೆ ಇಡೀ ಮನೆ ಮಂದಿಯೆಲ್ಲ ನಕ್ಕಿದ್ದಾರೆ.