newsics.com
ಮುಂಬೈ: 200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಸುಕೇಶ್ ಚಂದ್ರಶೇಖರ್ ಜೈಲು ಸೇರಿದ್ದಾನೆ. ಆತನ ಜೊತೆ ನಂಟು ಹೊಂದಿದ್ದಕ್ಕಾಗಿ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.
ಶ್ರೀಲಂಕಾದ ಈ ಮುದ್ದಾದ ಬೆಡಗಿ ಭಾರತದಲ್ಲಿ ನಟಿಯಾಗಿ ಹೆಸರು ಮಾಡಿದ್ದಾರೆ. ರಿಯಾಲಿಟಿ ಶೋ ಮೂಲಕ ಭಾರತೀಯ ಪ್ರೇಕ್ಷಕರಿಗೆ ಹತ್ತಿರವಾದ ಈ ವಯ್ಯಾರಿ ಬಾಲಿವುಡ್ ನಲ್ಲಿ ಟಾಪ್ ಹೀರೋಯಿನ್ ಗಳಲ್ಲಿ ಒಬ್ಬರಾಗಿರುವುದು ವಿಶೇಷ.
ಮಾಡೆಲಿಂಗ್ ನಂತರ ಗ್ಲಾಮರ್ ಲೋಕಕ್ಕೆ ಕಾಲಿಟ್ಟ ಜಾಕ್ವೆಲಿನ್ 2006 ರಲ್ಲಿ ಮಿಸ್ ಯೂನಿವರ್ಸ್ ಶ್ರೀಲಂಕಾ ಪ್ರಶಸ್ತಿಯನ್ನು ಗೆದ್ದರು. ಅದರ ನಂತರ 2006 ರಲ್ಲಿ ಅವರು ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸಿದರು. ಮರ್ಡರ್ 2 ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟರು. ರೇಸ್ 2 ಸಿನಿಮಾದಲ್ಲಿ ನಟಿಸಿ ಮೆಚ್ಚಿಕೊಂಡಿದ್ದರು. ಅತಿ ಕಡಿಮೆ ಸಮಯದಲ್ಲಿ ಬಾಲಿವುಡ್ ನ ಟಾಪ್ ಹೀರೋಯಿನ್ ಗಳಲ್ಲಿ ಒಬ್ಬರಾದರು. ವಿಶೇಷ ಹಾಡುಗಳಲ್ಲಿ ತನ್ನದೇ ಆದ ಹೆಜ್ಜೆಗಳ ಮೂಲಕ ವಿಶೇಷ ಚಿತ್ರಣವನ್ನು ಸೃಷ್ಟಿಸಿದ್ದಾಳೆ. ಇತರ ರಿಯಾಲಿಟಿ ಶೋಗಳಲ್ಲಿಯೂ ನಟಿಸಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟಿವ್ ಆಗಿದ್ದಾರೆ.
ಗ್ಲಾಮರ್ ಫೋಟೋಗಳಿಂದ ಪಡ್ಡೆ ಹುಡುಗರ ನಿದ್ದೆ ಕದಿಯುವ ನಟಿ ಇತ್ತೀಚೆಗೆ ನೆಟೆಡ್ ಬ್ಲ್ಯಾಕ್ ಡ್ರೆಸ್ ನಲ್ಲಿ ತಲೆಕೆಳಗಾಗಿ ಪೋಸ್ ಕೊಟ್ಟಿದ್ದಾಳೆ. ಜಾಕ್ವೆಲಿನ್ ಫೋಟೋಗಳನ್ನು ನೋಡಿ ನೆಟ್ಟಿಗರು ಆಶ್ಚರ್ಯ ಪಡುತ್ತಿದ್ದಾರೆ.
https://www.instagram.com/p/DEHMELZS4bh/?utm_source=ig_web_copy_link