newsics.com
ಬಿಗ್ ಬಾಸ್ ಕನ್ನಡ 11– ಅನಿವಾರ್ಯವಾಗಿ ಮನೆಯಿಂದ ಹೊರ ಹೋಗಿದ್ದ ಗೋಲ್ಡ್ ಸುರೇಶ್ ಮತ್ತೆ ಕಾಣಿಸಿಕೊಂಡಿದ್ದಾರೆ. ಮತ್ತೆ ಕರೆದರೆ ನಾನು ಮನೆಯೊಳಗೆ ಹೋಗುತ್ತೇನೆ ಎಂದು ಹಲವು ಸಂದರ್ಶನಗಳಲ್ಲಿ ಗೋಲ್ಡ್ ಸುರೇಶ್ ಹೇಳಿದ್ದರು. ಅದರಂತೆ ಸೂಪರ್ ಸಂಡೇ ವಿತ್ ಬಾದ್ಷಾ ಸುದೀಪ್ ಕಾರ್ಯಕ್ರಮದಲ್ಲಿ ಗೋಲ್ಡ್ ಸುರೇಶ್ ಕಾಣಿಸಿಕೊಂಡಿದ್ದಾರೆ.
ಕಳೆದ ವಾರ ಅವರು ವೈಯಕ್ತಿಕ ಸಮಸ್ಯೆಗಳ ಕಾರಣ, ಬಿಸಿನೆಸ್‌ನಲ್ಲಿ ಸಮಸ್ಯೆ ಆಗಿದೆ ಎಂಬ ಕಾರಣಕ್ಕೆ ಮನೆಯಿಂದ ಹೊರ ಬಂದಿದ್ದರು. ಹೀಗಾಗಿ ಕಿಚ್ಚನ ಬಳಿ ಮಾತನಾಡಲು ಆಗಿರಲಿಲ್ಲ. ಈ ಕಾರಣಕ್ಕೆ ಇಂದಿನ ಎಪಿಸೋಡ್‌ನಲ್ಲಿ ಅವರು ಬಿಗ್‌ಬಾಸ್ ಮನೆಯೊಳಗಿದ್ದ ಅನುಭವ ಮತ್ತು ವೇದಿಕೆಯಿಂದ ಗೌರವದಿಂದ ಬೀಳ್ಕೊಡಲು ಕರೆಯಲಾಗಿದೆ.
ಈ ಸಂಬಂಧ ಕಲರ್ಸ್ ಕನ್ನಡ ವಾಹಿನಿ ಪ್ರೋಮೋ ಬಿಡುಗಡೆ ಮಾಡಿದ್ದು, ಮನೆಯೊಳಗಡೆ ನೀವಿಲ್ಲದೆ ಒಂದು ಜಾಗ ಫುಲ್ ಖಾಲಿ ಹೊಡೆಯುತ್ತಿದೆ ಎಂದು ಕಿಚ್ಚ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಸುರೇಶ್, ಈ ಕ್ಷಣಕ್ಕೂ ಒಳಗಡೆ ಹೋಗು ಅಂದ್ರೆ ಖುಷಿಯಾಗಿ ಹೋಗ್ತೀನಿ ಸರ್ ಎಂದಿದ್ದಾರೆ.
ಈ ಮಧ್ಯೆ ಗೋಲ್ಡ್ ಸುರೇಶ್ ಧರಿಸಿದ್ದ ಚಿನ್ನ ನಕಲಿ ಎಂಬ ಮಾತುಗಳೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಇನ್ನು ಈ ವಾರ ಮನೆಯಿಂದ ಹೊರಹೋಗಲು ತ್ರಿವಿಕ್ರಮ್, ರಜತ್, ಹನುಮಂತ, ಐಶ್ವರ್ಯಾ ಮತ್ತು ಮೋಕ್ಷಿತಾ ನಾಮಿನೇಟ್ ಆಗಿದ್ದರು. ತ್ರಿವಿಕ್ರಮ್ ತಂಡಕ್ಕಾಗಿ ಔಟ್ ಆಗಿದ್ದನ್ನು ಶನಿವಾರದ ಎಪಿಸೋಡ್ ನಲ್ಲಿ ಪ್ರಶ್ನಿಸಿದ ಕಿಚ್ಚ, ತ್ರಿವಿಕ್ರಮ್ ಅವರೇ ನಿಮಗೆ ಅಷ್ಟೊಂದು ಕಾನ್ಫಿಡೆನ್ಸ್ ಇದೆಯಾ ಉಳಿದುಕೊಳ್ಳುತ್ತೇನೆಂದು ಎಂದರು.
ಸ್ಪರ್ಧಿಗಳಲ್ಲಿ ಹಲವರಿಗೆ ತ್ರಿವಿಕ್ರಮ್ ಸ್ವಯಂ ನಾಮಿನೇಟ್ ಆಗಿದ್ದು ಇಷ್ಟವಿರಲಿಲ್ಲ. ರಜತ್ ತ್ಯಾಗರಾಜ ಆಗಬೇಡ ಎಂದು ನೇರವಾಗಿಯೇ ವಿಕ್ರಂಗೆ ಹೇಳಿದ್ದರು. ಕಿಚ್ಚ ಕೂಡ ನಿನ್ನೆಯ ಎಪಿಸೋಡ್ ನಲ್ಲಿ ಈ ಸಂಬಂಧ ಕ್ಲಾಸ್ ತೆಗೆದುಕೊಂಡಿದ್ದರು.
ಇಂದಿನ ಎಪಿಸೋಡ್‌ನಲ್ಲಿ ಎಲ್ಲರನ್ನೂ ಸೇವ್ ಮಾಡಿದ ಕಿಚ್ಚ, ಕೊನೆಗೆ ತ್ರಿವಿಕ್ರಮ್ ಅವರನ್ನು ಎಲಿಮಿನೇಟ್ ಆಗಿದ್ದೀರಿ ಎಂದಿದ್ದಾರೆ. ಮನೆಮಂದಿ ಎಲ್ಲಾ ಶಾಕ್ ಆಗಿರುವುದಂತೂ ಸತ್ಯ. ಮನೆಯ ಮುಖ್ಯದ್ವಾರದವರೆಗೆ ತ್ರಿವಿಕ್ರಮ್ ಅವರನ್ನು ಕರೆದು ಫ್ರಾಂಕ್ ಮಾಡಿ ಈ ವಾರ ನೋ ಎಲಿಮಿನೇಶನ್ ವೀಕ್ ಎಂದು ಕಿಚ್ಚ ಬುದ್ಧಿ ಹೇಳಿದ್ದಾರೆ ಎಂದು ವರದಿಯಾಗಿದೆ.
ಇನ್ನು ನಾಲ್ಕು ವಾರದಲ್ಲಿ ಬಿಗ್‌ಬಾಸ್ ಫಿನಾಲೆ ನಡೆಯಲಿದೆ. ಯಾರು ಎಲಿಮಿನೇಟ್ ಆಗ್ತಾರೆ. ಯಾರು ಟಾಪ್ 5 ರಲ್ಲಿ ಇರುತ್ತಾರೆ. ಯಾರು 50 ಲಕ್ಷ ಗೆಲ್ಲುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.