newsics.com
ಬೆಂಗಳೂರು: ನಟ ಶಿವರಾಜ್ಕುಮಾರ್ ಚಿಕಿತ್ಸೆಗಾಗಿ ಅಮೆರಿಕಗೆ ಪ್ರಯಾಣ ಬೆಳೆಸಿದ್ದಾರೆ.
ಏರ್ಪೋರ್ಟ್ ಪ್ರವೇಶಿಸುವ ಮುನ್ನ ಅಭಿಮಾನಿಗಳತ್ತ ಶಿವಣ್ಣ ಕೈ ಬೀಸುತ್ತಾ ಭಾವುಕರಾಗಿದ್ದಾರೆ. ಸರ್ಜರಿಯ ಬಳಿಕ ಮುಂದಿನ ತಿಂಗಳು ಜನವರಿ 26ರಂದು ಬೆಂಗಳೂರಿಗೆ ಹಿಂದಿರುಗಲಿದ್ದಾರೆ.
ಡಿ.24ರಂದು ಶಿವಣ್ಣಗೆ ಯುಎಸ್ನಲ್ಲಿ ಸರ್ಜರಿ ನಡೆಯಲಿದೆ. ಈ ಹಿನ್ನೆಲೆ ಪತ್ನಿ ಮತ್ತು ಮಗಳು ನಿವೇದಿತಾ ಜೊತೆ ಅಮೆರಿಕಗೆ ಪ್ರಯಾಣ ಬೆಳೆಸಿದ್ದಾರೆ. ಬೆಂಗಳೂರಿನ ಏರ್ಪೋರ್ಟ್ ಪ್ರವೇಶಿಸುವ ಮುನ್ನ ಭಾವುಕರಾಗಿ ಅಭಿಮಾನಿಗಳತ್ತ ನಟ ಕೈ ಬೀಸಿದ್ದಾರೆ.