newsics.com
ನವದೆಹಲಿ :ಮದುವೆಯ ನಿಮಿತ್ತ ಪಶು ಆಸ್ಪತ್ರೆಯಲ್ಲಿ ಬಿಟ್ಟು ಹೋಗಿದ್ದ ಶ್ವಾನ ದಿಢೀರ್ ಆಗಿ ಕೊನೆಯುಸಿರೆಳೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಮನಕಲಕುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದ್ದು, ಇಲ್ಲಿನ ಗೌಂಡಂಪಳಯಂದಲ್ಲಿ ಶರತ್ ಎಂಬವರ ಮನೆಯ ಶ್ವಾನ ಪಶು ಅಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಆರೋಗ್ಯಕರವಾಗಿದ್ದ ಶ್ವಾನ ಹೀಗೆ ದೀಢೀರ್ ಆಗಿ ಹೇಗೆ ಸಾವನ್ನಪ್ಪಲು ಸಾಧ್ಯ ಎಂದು ಪಶು ಆಸ್ಪತ್ರೆಯ ವಿರುದ್ಧ ಕುಟುಂಬಸ್ಥರು ರೊಚ್ಚಿಗೆದ್ದಿದ್ದಾರೆ.
ಶರತ್ ತಂಗಿ ಶ್ರುತಿಯ ಆರತಕ್ಷತೆ ಇದ್ದ ಕಾರಣ, ಇವರು ತಮ್ಮ ಸಾಕು ನಾಯಿಯನ್ನು ಮೆಟ್ಟುಪಾಳ್ಯಂ ರಸ್ತೆಯಲ್ಲಿರುವ ಪಶು ಆಸ್ಪತ್ರೆಯಲ್ಲಿ ಒಂದು ದಿನದ ಮಟ್ಟಿಗೆ ಬಿಟ್ಟು ಬಂದಿದ್ದರು. ಮತ್ತು ನಾಯಿಯನ್ನು ಜೋಪಾನವಾಗಿ ನೋಡಿಕೊಳ್ಳುತ್ತೇವೆ ಎಂದು ವೈದ್ಯರಾದ ಸುರೇಂದರ್ ಮತ್ತು ಗೋಪಿಕಾ ಹೇಳಿದ್ದರು. ಜೊತೆಗೆ ಶರ್ 1200 ರೂಪಾಯಿ ಶುಲ್ಕವನ್ನು ಕೂಡಾ ಪಾವತಿಸಿದ್ದರು.
ನಾಯಿಗೆ ಹುಷಾರಿಲ್ಲ ಎಂದು ಆಸ್ಪತ್ರೆಯಿಂದ ಫೋನ್ ಬಂದಿದ್ದು, ಕುಟುಂಬಸ್ಥರೆಲ್ಲರೂ ಆಸ್ಪತ್ರೆಗೆ ಹೋದಾಗ 11 ವರ್ಷಗಳಿಂದ ಮುದ್ದಾಗಿ ಸಾಕಿದ್ದ ಸಾಕು ನಾಯಿ ಶವವಾಗಿ ಆಸ್ಪತ್ರೆಯ ಬೆಡ್ ಅಲ್ಲಿ ಪತ್ತೆಯಾಗಿದೆ.