newsics.com
ಮಹಾರಾಷ್ಟ್ರ: ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಯ ಎಕ್ಸಿಟ್ ಪೋಲ್ ನ ಎರಡು ಸಮೀಕ್ಷೆಗಳ ಪ್ರಕಾರ ಒಂದು ಎನ್ಡಿಎಗೆ ಬಹುಮತ ಬರುತ್ತದೆ. ಮತ್ತೊಂದು ಸಮೀಕ್ಷೆ ಅಡ್ಡಗೋಡೆಯ ಮೇಲೆ ದೀಪ ಇಟ್ಟಿದೆ.
IANS MATRIZE ಸಮೀಕ್ಷ ನಡೆಸಿರುವ ಪ್ರಕಾರ ಬಿಜೆಪಿ+ 150 ರಿಂದ 170 ಸ್ಥಾನ ಗಳಿಸಲಿದೆ ಎಂದು ಹೇಳಲಾಗುತ್ತಿದೆ. ಅಂದ್ರೆ ಮ್ಯಾಜಿಕ್ ನಂಬರ್ 145 ನ್ನು ಎನ್ಡಿಎ ಮೈತ್ರಿಕೂಟ ಸರಳವಾಗಿ ದಾಟಲಿದೆ ಎಂದು ಹೇಳಲಾಗಿದೆ.
ಮಹಾವಿಕಾಸ್ ಅಘಡಿ 110 ರಿಂದ 130 ಸ್ಥಾನ ಪಡೆಯಲಿದೆ ಎಂದು ಈ ಸಮೀಕ್ಷೆಯಲ್ಲಿ ಹೇಳಲಾಗಿದ್ದರೆ, ಇತರರು 8 ರಿಂದ 10 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯನ್ನು ವ್ಯಕ್ತಪಡಿಸಿದೆ.
ಎರಡು ಮೈತ್ರಿಗಳಿಗೂ ಬಹುಮತ ಬರುವ ಚಾನ್ಸ್ ಇದೆ ಎಂದು ಹೇಳಲಾಗಿದೆ ಎನ್ಡಿಎ 137 ರಿಂದ 157 ಸ್ಥಾನಗಳನ್ನು ಗೆಲ್ಲುವ ಭರವಸೆಯನ್ನು ತೋರಿಸಿದರೆ. ಮಹಾ ವಿಕಾಸ್ ಅಘಡಿ 126 ರಿಂದ 146 ಸ್ಥಾನಗಳನ್ನು ಗೆಲ್ಲುವ ಊಹೆಯನ್ನು ಮಾಡಿದೆ. ಇತರರು 2 ರಿಂದ 8 ಸ್ಥಾನ ಪಡೆಯುವ ನಿರೀಕ್ಷೆಯನ್ನು ವ್ಯಕ್ತಪಡಿಸಿದದೆ.