newsics.com
ಬೆಂಗಳೂರು : ಅರ್ಜುನ್ ಸರ್ಜಾ ಅವರ ಸಿನಿಮಾ ಕ್ಷೇತ್ರದಲ್ಲಿ ಕೆಲಸ, ಸಾಧನೆ, ಪರಿಶ್ರಮ ಪರಿಗಣಿಸಿ ಅರ್ಜುನ್ ಸರ್ಜಾ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿದೆ.
ಅರ್ಜುನ್ ಸರ್ಜಾ ಅವರಿಗೆ ಡಾ.ಎಂಜಿಆರ್ ಎಜುಕೇಶನಲ್ ಅಂಡ್ ರಿಸರ್ಚ್ ಇನ್ಸ್ಟಿಟ್ಯೂಟ್ ಸರ್ವೀಸ್ ಕಡೆಯಿಂದ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ. 50 ವರ್ಷಗಳ ಕಾಲ ಸಿನಿಮಾ ಕ್ಷೇತ್ರದಲ್ಲೇ ಅರ್ಜುನ್ ಸರ್ಜಾ ಅವರು ದುಡಿದಿದ್ದಾರೆ.
ಬಾಲಕರಾಗಿದ್ದಾಲೇ ನಟನೆ ಕಡೆಗೆ ಬಂದ ಅವರು ಹಲವಾರು ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ. ಕನ್ನಡಗಿಂತ ತಮಿಳು ಸಿನಿ ರಂಗದಿಂದ ಇವರಿಗೆ ಹೆಚ್ಚು ಅವಕಾಶಗಳು ಹುಡುಕಿಕೊಂಡು ಬಂದಿದ್ದರಿಂದ ಹೆಚ್ಚು ಸಮಯ ತಮಿಳು ಸಿನಿಮಾಗಳಲ್ಲೇ ಕಳೆದಿದ್ದಾರೆ