newsics.com
ತೆಲುಗು ಮಾತನಾಡುವ ದ್ರಾವಿಡವಾದಿಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ನಟಿ ಕಸ್ತೂರಿ ಶಂಕರ್ ಅರೆಸ್ಟ್ ಆಗುವ ಸಾಧ್ಯತೆ ಹೆಚ್ಚಿದೆ.
ಪ್ರಕರಣ ಸಂಬಂಧ ಕಸ್ತೂರಿ ಶಂಕರ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದ್ದು, ಬಂಧನವಾಗುವ ಸಾಧ್ಯತೆ ದಟ್ಟವಾಗಿದೆ.
ಕಸ್ತೂರಿ ಶಂಕರ್ ಕನ್ನಡ, ತೆಲುಗು, ತಮಿಳು ಸೇರಿ ಅನೇಕ ಭಾಷೆಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ರವಿಚಂದ್ರನ್ ಜತೆ ಜಾಣ, ರಮೇಶ್ ಜತೆ ತುತ್ತಾ ಮುತ್ತಾ ಮತ್ತಿತರ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿನಿಮಾಗಳಿಂದ ದೂರಾದ ನಂತರವೂ ಕಸ್ತೂರಿ ಶಂಕರ್ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಿದ್ದಾರೆ.
ತೆಲುಗು ಮಾತನಾಡುವ ದ್ರಾವಿಡವಾದಿಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಹಿನ್ನೆಲೆ ಅಖಿಲ ಭಾರತ ತೆಲುಗು ಒಕ್ಕೂಟ ನಟಿ ಕಸ್ತೂರಿ ಶಂಕರ್ ವಿರುದ್ಧ ಚೆನೈನ ಎಗ್ಮೋರ್ ಪೊಲೀಸ್ ಠಾಣೆ ಸೇರಿ ಮಧುರೈನಲ್ಲಿಯೂ ದೂರು ದಾಖಲಿಸಲಾಗಿತ್ತು.
ನವೆಂಬರ್ 4ರಂದು ಬ್ರಾಹ್ಮಣರ ರಕ್ಷಣೆಗಾಗಿ ವಿಶೇಷ ಕಾನೂನಿಗೆ ಒತ್ತಾಯಿಸಿ ಚೆನ್ನೈನಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಕಸ್ತೂರಿ ಶಂಕರ್ ಭಾಗವಹಿಸಿದ್ದರು. “300 ವರ್ಷಗಳ ಹಿಂದೆ ರಾಜನ ಸಂಗಾತಿಯ ಸಹಾಯಕರಾಗಿ ತೆಲುಗು ಮಂದಿ ತಮಿಳುನಾಡಿಗೆ ಬಂದವರು ತಮಿಳಿಗರು ಎಂದು ತಮ್ಮ ಐಡೆಂಟಿಟಿಯನ್ನು ಬಲಪಡಿಸಿಕೊಂಡರು” ಎಂದು ಕಸ್ತೂರಿ ಹೇಳಿಕೆ ನೀಡಿದ್ದರು
ಈ ಹೇಳಿಕೆ ತೆಲುಗು ಮಂದಿಯನ್ನು ಕೆರಳಿಸಿತ್ತು, ನಟಿಯ ಮಾತುಗಳಿಗೆ ಎಲ್ಲೆಡೆ ಟೀಕೆ ವ್ಯಕ್ತವಾಗಿತ್ತು. ಇದನ್ನು ನೋಡಿ ಕಸ್ತೂರಿ ಶಂಕರ್, ನಾನು ಹೇಳಿದ್ದೇ ಬೇರೆ, ನನ್ನ ಮಾತುಗಳನ್ನು ಉದ್ದೇಶಪೂರ್ವಕವಾಗಿ ತಿರುಚಲಾಗಿದೆ, ನಾನು ತೆಲುಗು ಜನರ ಜೊತೆ ವಿಶೇಷ ಬಾಂಧವ್ಯ ಹೊಂದಿದ್ದೇನೆ. ನನ್ನ ಮಾತುಗಳಿಂದ ನಿಮಗೆ ನೋವಾಗಿದ್ದರೆ ಕ್ಷಮಿಸಿ ಎಂದಿದ್ದರು.
ಕಸ್ತೂರಿ ಶಂಕರ್ ವಿರುದ್ಧ ಕೇಸ್ ದಾಖಲಿಸಿಕೊಂಡ ಪೊಲೀಸರು ವಿಚಾರಣೆಗೆ ನೋಟೀಸ್ ಸಹ ನೀಡಲಾಗಿತ್ತು. ಆದರೆ ಕಸ್ತೂರಿ ಶಂಕರ್ ಅಜ್ಞಾತ ಸ್ಥಳದಲ್ಲಿದ್ದುಕೊಂಡು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಕೋರ್ಟ್ ಅರ್ಜಿ ವಜಾ ಮಾಡಿದ್ದು, ಕಸ್ತೂರಿ ಶಂಕರ್ ಬಂಧನವಾಗುವ ಸಾಧ್ಯತೆ ಬಲವಾಗಿದೆ.
ಉಚಿತ ವೀರ್ಯದ ಜತೆ ಫ್ರೀ ಐವಿಎಫ್: ಭಾರೀ ಸುದ್ದಿಯಲ್ಲಿ ಟೆಲಿಗ್ರಾಂ ಸಿಇಒ ಪಾವೆಲ್ ಡುರೊವ್! ಜಾಹೀರಾತು, ವಿಡಿಯೋ ವೈರಲ್