ಸಾಲದ ಮೇಲಿನ ಬಡ್ಡಿದರ ಹೆಚ್ಚಿಸಿದ SBI: ಇಂದಿನಿಂದಲೇ ಜಾರಿ

newsics.com ಮುಂಬೈ: ಎಸ್‌ಬಿಐ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಆಧಾರಿತ ಸಾಲದ (ಎಂಸಿಎಲ್‌ಆರ್) ಮೇಲಿನ ಬಡ್ಡಿದರವನ್ನು ಶೇ. 0.05ರಷ್ಟು ಹೆಚ್ಚಿಸಿದೆ. ಇಂದಿನಿಂದಲೇ (ನ.15) ಈ ಆದೇಶ ಜಾರಿಗೆ ಬರಲಿದೆ ಎಂದು ಬ್ಯಾಂಕ್ ತಿಳಿಸಿದೆ. ಒಂದು ವರ್ಷದ ಎಂಸಿಎಲ್‌ಆರ್‌ ಬಡ್ಡಿದರವನ್ನು ಶೇ.9ಕ್ಕೆ ಹೆಚ್ಚಿಸಲಾಗಿದೆ. ಇದರಿಂದ ದೀರ್ಘಕಾಲದ ಗೃಹ ಸಾಲದ ಮೇಲಿನ ಇಎಂಐ ಏರಿಕೆಯಾಗಲಿದೆ. ಎಸ್‌ಬಿಐ ನೀಡಿರುವ ಸಾಲದ ಪೈಕಿ ಶೇ 42ರಷ್ಟು ಸಾಲಗಳು ಎಂಸಿಎಲ್‌ಆ‌ರ್ ಬಡ್ಡಿದರದೊಟ್ಟಿಗೆ ಸಂಯೋಜನೆಗೊಂಡಿವೆ.