newsics.com
ಕಲಬುರಗಿ: ಜಿಲ್ಲೆಯ ಕಮಲಾಪುರ ತಾಲೂಕಿನ ಮರಗುತ್ತಿ ಕ್ರಾಸ್ ಬಳಿ ಶನಿವಾರ ಬೆಳ್ಳಂಬೆಳಗ್ಗೆ ಭೀಕರ ಅಫಘಾತ ಸಂಭವಿಸಿ, ಸ್ಥಳದಲ್ಲೇ ನಾಲ್ವರು ಮೃತಪಟ್ಟ ಹೊಂದಿದ ಘಟನೆ ನಡೆದಿದೆ.
ಕಮಲಾಪುರ ತಾಲೂಕಿನ ಮರಗುತ್ತಿ ಕ್ರಾಸ್ ಬಳಿ ಮಹಿಂದ್ರಾ ಕಂಪನಿಯ ಬೊಲೆರೊ ಪಿಕಪ್ ವಾಹನ ಹಾಗೂ ಕಾರಿನ ಮಧ್ಯೆ ಡಿಕ್ಕಿಯಾಗಿ ಈ ಅವಘಡ ಸಂಭವಿಸಿದ್ದು, ಅಫಘಾತದಲ್ಲಿ ಭಾರ್ಗವ್ ಕೃಷ್ಣ (55), ಪತ್ನಿ ಸಂಗೀತಾ (45), ಪುತ್ರ ಉತ್ತಮ್ ರಾಘವನ್ (28) ಹಾಗೂ ಕಾರಿನ ಚಾಲಕ ಸೇರಿ ಸ್ಥಳದಲ್ಲೇ ನಾಲ್ವರು ಅಸುನೀಗಿದ್ದಾರೆ.
ಮೃತಪಟ್ಟವರೆಲ್ಲ ಹೈದರಾಬಾದ್ ನಗರದ ನಿವಾಸಿಗಳಾಗಿದ್ದು, ಹೈದರಾಬಾದ್ನಿಂದ ಜಿಲ್ಲೆಯ ಅಫಜಲಪುರ ತಾಲೂಕಿನ ಸುಕ್ಷೇತ್ರ ಗಾಣಗಾಪುರದ ದತ್ತಾತ್ರೇಯ ದೇಗುಲದ ದರ್ಶನ ಮಾಡಲು ತೆರಳುತ್ತಿದ್ದರು.
ಅಪಘಾತದಲ್ಲಿ ಮೃತಪಟ್ಟಿರುವ ಮೃತದೇಹಗಳನ್ನು ಕಲಬುರಗಿ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದ್ದು, ಕಮಲಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಡೀ ಸಚಿವ ಸಂಪುಟ ವಿರುದ್ಧವೇ ಲೋಕಾಗೆ ದೂರು, ಇದು ರಾಜ್ಯ ಇತಿಹಾಸದಲ್ಲೇ ಮೊದಲು!