Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ವಯಾಗ್ರ ಸೇವಿಸಿ ಬಾಲಕಿ ಜತೆ ಲೈಂಗಿಕ ಸಂಪರ್ಕ: ಸೂರತ್ ಡೈಮಂಡ್ ಮ್ಯಾನೇಜರ್ ಸಾವು
ದೇಶಪ್ರಮುಖವೈರಲ್

ವಯಾಗ್ರ ಸೇವಿಸಿ ಬಾಲಕಿ ಜತೆ ಲೈಂಗಿಕ ಸಂಪರ್ಕ: ಸೂರತ್ ಡೈಮಂಡ್ ಮ್ಯಾನೇಜರ್ ಸಾವು

Share
2 Min Read
SHARE

newsics.com

ಮುಂಬೈ: 14 ವರ್ಷದ ಬಾಲಕಿಯ ಜತೆ ಲೈಂಗಿಕ ಚಟುವಟಿಕೆ ನಡೆಸುತ್ತಿರುವಾಗಲೇ ವಜ್ರ ಕಂಪನಿಯ ಮ್ಯಾನೇಜರ್ ಸಾವನ್ನಪ್ಪಿರುವ ವಿಲಕ್ಷಣ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಸೂರತ್‌ನ ಡೈಮಂಡ್ ಫ್ಯಾಕ್ಟರಿಯಲ್ಲಿ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ 14ರ ಹರೆಯದ ಬಾಲಕಿಯ ಜತೆ ಹೋಟೆಲ್‌ ರೂಮ್‌ನಲ್ಲಿ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿದ ನಂತರ ಹಠಾತ್‌ ಸಾವನ್ನಪ್ಪಿದ್ದು, ಈ ಸುದ್ದಿ ಇದೀಗ ಭಾರೀ ವೈರಲ್‌ ಆಗಿದೆ.

ಈ ವಿಚಿತ್ರ ಘಟನೆ ಮುಂಬೈನಲ್ಲಿ ನಡೆದಿದ್ದು, ಗುಜರಾತ್‌ ಮೂಲದ ವ್ಯಕ್ತಿಯೊಬ್ಬ 14 ವರ್ಷದ ಬಾಲಕಿಯನ್ನು ಮುಂಬೈಗೆ ಕರೆತಂದು ಹೋಟೆಲ್‌ ರೂಮಿನಲ್ಲಿ ಆಕೆಯ ಜತೆ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಈ ವೇಳೆ ಆತ ಹಠಾತ್‌ ಸಾವನ್ನಪ್ಪಿದ್ದು, ಆತನ ಸಾವಿಗೆ ಹೃದಯಾಘಾತ ಮತ್ತು ಅತಿಯಾದ ವಯಾಗ್ರ ಸೇವನೆ ಕಾರಣ ಎಂದು ಹೇಳಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, ಸೂರತ್‌ನ ಡೈಮಂಡ್‌ ಫ್ಯಾಕ್ಟರಿಯಲ್ಲಿ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದ 41 ವರ್ಷದ ಈ ವ್ಯಕ್ತಿ ಬಾಲಕಿಯ ಕುಟುಂಬಕ್ಕೆ ಆರ್ಥಿಕವಾಗಿ ಸಹಾಯ ಮಾಡುತ್ತಿದ್ದ. ಅಲ್ಲದೆ ಬಾಲಕಿಗೂ ವಜ್ರದ ಫ್ಯಾಕ್ಟರಿಯಲ್ಲಿಯೇ ಕೆಲಸ ಕೊಟ್ಟಿದ್ದ.

ಬಾಲಕಿಯ ಕುಟುಂಬದೊಂದಿಗೆ ಉತ್ತಮ ಸಂಬಂಧ ಹೊಂದಿದ್ದ ಮ್ಯಾನೇಜರ್‌ ಹಣದ ಸಹಾಯ ಕೂಡ ಮಾಡುತ್ತಿದ್ದ. ಅಷ್ಟೇ ಅಲ್ಲದೆ ಅವರು ಆತನ ಮೇಲಿನ ನಂಬಿಕೆಯಿಂದ ಮಗಳನ್ನು ಆತನೊಂದಿಗೆ ಕೆಲಸದ ನಿಮಿತ್ತ ಮುಂಬೈಗೆ ಕಳುಹಿಸಿದ್ದರು.

ನವೆಂಬರ್‌ 2 ರಂದು ಮ್ಯಾನೇಜರ್‌ ಕೆಲಸದ ನಿಮಿತ್ತ ಆ ಬಾಲಕಿಯನ್ನು ಮುಂಬೈಗೆ ಕರೆತಂದು ಇಲ್ಲಿನ ಗ್ರಾಂಟ್‌ ರಸ್ತೆಯಲ್ಲಿರುವ ಹೊಟೇಲ್‌ನಲ್ಲಿ ಬಾಲಕಿಯ ನಕಲಿ ಆಧಾರ್‌ ಕಾರ್ಡ್‌ ತೋರಿಸಿ ಆಕೆಯೊಂದಿಗೆ ಹೊಟೇಲ್‌ ರೂಮ್‌ನಲ್ಲಿ ತಂಗಿದ್ದ.

ನೀನು ದೈಹಿಕ ಸಂಪರ್ಕಕ್ಕೆ ಸಹಕರಿಸದಿದ್ದರೆ ನಿನ್ನ ಕುಟುಂಬಕ್ಕೆ ಹಣ ನೀಡುವುದನ್ನು ನಿಲ್ಲಿಸುತ್ತೇನೆ. ಇಲ್ಲಿಯವರೆಗೆ ಕೊಟ್ಟ ಹಣವನ್ನು ಸಹ ವಾಪಸ್‌ ಪಡೆಯುತ್ತೇನೆ ಎಂದು ಬ್ಲ್ಯಾಕ್‌ಮೇಲ್‌ ಮಾಡಿದ್ದಾನೆ. ಇದರಿಂದ ಆಘಾತಕ್ಕೊಳಗಾದ ಬಾಲಕಿ ಆತನಿಗೆ ಶರಣಾಗಿದ್ದಾಳೆ.

ಈ ವೇಳೆ ಆತ ಬಾಲಕಿಯ ಜತೆ ಬಲವಂತವಾಗಿ ಲೈಂಗಿಕ ಸಂಪರ್ಕ ಹೊಂದಿದ್ದಾನೆ. ಆದರೆ ಆತ ಮಿತಿಮೀರಿ ವಯಾಗ್ರ ಮಾತ್ರೆ ಸೇವಿಸಿದ್ದ ಕಾರಣ ಸಂಭೋಗದ ಬಳಿಕ ಹಠಾತ್‌ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.

ಮಾಹಿತಿ ಸಿಕ್ಕ ತಕ್ಷಣ ಮುಂಬೈಗೆ ಆಗಮಿಸಿದ ಬಾಲಕಿಯ ತಾಯಿ ಮೃತ ಮ್ಯಾನೇಜರ್‌ ವಿರುದ್ಧ ಪೊಲೀಸ್‌ ದೂರು ನೀಡಿದ್ದಾರೆ. ಪೊಲೀಸರು BNS ಮತ್ತು POCSO ಸೆಕ್ಷನ್‌ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಈ ಬಗ್ಗೆ ತನಿಖೆ ನಡೆಸಲಾಗುವುದು. ಆರೋಪಿ ಬದುಕಿಲ್ಲದ ಕಾರಣ ಸಾರಾಂಶ ವರದಿ ತಯಾರಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

40 ಸಾವಿರ ಕೋಟಿ ಸಾಲ ಪಡೆಯಲು ಮುಂದಾದ ರಾಜ್ಯ ಸರ್ಕಾರ

ಫ್ಯಾನ್‌ ನ ಈ ರೀತಿ ಕ್ಲೀನ್‌ ಮಾಡಿ ಕಷ್ಟನೇ ಅನ್ಸಲ್ಲ!

ಬೆಂಗಳೂರಿನ ಬಿಷಪ್ ಕಾಟನ್  ಶಾಲೆಗೆ ಬಾಂಬ್ ಬೆದರಿಕೆ ಇಮೇಲ್: ಬಾಂಬ್ ನಿಷ್ಕ್ರಿಯ ದಳ ದೌಡು! 

ಸೊಸೆ ಮೇಲೆ ಅತ್ಯಾಚಾರ: ಮಾವನ ಬಂಧನ

TAGGED:Surat diamond manager dies after taking Viagra and having s**x with a girl
Share This Article
Facebook Twitter Copy Link Print
Previous Article ಫ್ಯಾನ್‌ ನ ಈ ರೀತಿ ಕ್ಲೀನ್‌ ಮಾಡಿ ಕಷ್ಟನೇ ಅನ್ಸಲ್ಲ!
Next Article ಬೇಲೂರಲ್ಲಿ ಬೀಡುಬಿಟ್ಟ 50ಕ್ಕೂ ಹೆಚ್ಚು ಕಾಡಾನೆ, ಹೆಚ್ಚಿದ ಆತಂಕ

Popular Posts

US Iran War Updates | ಅಮೆರಿಕ–ಇರಾನ್ ಸಂಘರ್ಷ ಮತ್ತಷ್ಟು ತೀವ್ರ: 11ನೇ ರಾತ್ರಿ ಕೂಡ ವಾಯುದಾಳಿ, ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನಡೆ

2 Min Read

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read

You Might Also Like

ದೇಶಪ್ರಮುಖ

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read
ಕರ್ನಾಟಕಪ್ರಮುಖ

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read
ವೈರಲ್

Personality Traits Based on the Day You Were Born ನೀವು ಹುಟ್ಟಿದ ವಾರದ ದಿನದ ಪ್ರಕಾರ ನಿಮ್ಮ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read
ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?