newsics.com
ನ್ಯೂಸಿಕ್ಸ್. ಕಾಮ್
ಶುಭೋದಯ
ಇಂದಿನ ಪಂಚಾಂಗ
ಆಶ್ವಯುಜ ಕೃಷ್ಣ ಪಕ್ಷ ದ್ವಾದಶೀ
29-10-2024, ಮಂಗಳವಾರ
* ಪ್ರದೋಷ, ಗುರುದ್ವಾದಶಿ, ಯಮದೀಪದಾನ, ಧನ್ವಂತರಿ ಜಯಂತಿ, ಧನತ್ರಯೋದಶಿ. ನೀರು ತುಂಬುವ ಹಬ್ಬ.
* ಶ್ರೀಪಾದ ಶ್ರೀವಲ್ಲಭ ಲುಪ್ತದಿನ
—
ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 29/10/2024
ತಿಂಗಳು – ಅಕ್ಟೋಬರ್
ಬಣ್ಣ – ಕೇಸರಿ
ವಾರ – ಮಂಗಳವಾರ
ತಿಥಿ – ದ್ವಾದಶಿ 10:31:06
ಪಕ್ಷ. – ಕೃಷ್ಣ
ನಕ್ಷತ್ರ – ಉತ್ತರ ಫಾಲ್ಗುಣಿ 18:32:50
ಯೋಗ – ಇಂದ್ರ 07:46:41
ಕರಣ – ತೈತುಲ 10:31:06
ಕರಣ – ಗರಜ 23:53:17
ತಿಂಗಳು (ಅಮಾವಾಸ್ಯಾಂತ್ಯ) ಆಶ್ವಯುಜ
ತಿಂಗಳು (ಹುಣ್ಣಿಮಾಂತ್ಯ) ಕಾರ್ತಿಕ
ಚಂದ್ರ ರಾಶಿ ಕನ್ಯಾ
ಸೂರ್ಯ ರಾಶಿ ತುಲಾ
ಋತು- ಶರದೃತು
ಸೂರ್ಯೋದಯ 06:13:36
ಸೂರ್ಯಾಸ್ತ 17:52:45
ಹಗಲಿನ ಅವಧಿ 11:39:09
ರಾತ್ರಿಯ ಅವಧಿ 12:21:06
ಚಂದ್ರಾಸ್ತ 15:57:06
ಚಂದ್ರೋದಯ 28:20:50*
ರಾಹು ಕಾಲ 14:58 – 16:25 ಅಶುಭ
ಯಮಘಂಡ ಕಾಲ 09:08 – 10:36 ಅಶುಭ
ಗುಳಿಕ ಕಾಲ 12:03 – 13:31
ಅಭಿಜಿತ್ 11:40 – 12:26 ಶುಭ
ದುರ್ಮುಹೂರ್ತ 08:33 – 09:20 ಅಶುಭ
ದುರ್ಮುಹೂರ್ತ 22:49 – 23:36 ಅಶುಭ
—–
ಇಂದಿನ ಮಾತು
ತನ್ನ ಬಗ್ಗೆ ಬೇರೆಯವರು ಏನು ಬೇಕಾದರೂ ಚಿಂತಿಸಲಿ; ಟೀಕಿಸಲಿ, ನಾನು ಆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಯಾರು ದೃಢವಾಗಿ ನಿಲ್ಲುತ್ತಾರೋ, ಅವರೇ ಈ ಜಗತ್ತಿನಲ್ಲಿ ಅಸಾಮಾನ್ಯವಾದುದನ್ನು ಸಾಧಿಸಿದವರು. ನಮ್ಮ ಕುರಿತು ಬೇರೆಯವರು ಏನೇ ಭಾವನೆಗಳನ್ನು ಹೊಂದಿದ್ದರೂ ನಾವು ಅಧೀರರಾಗಬಾರದು.
—
ಇಂದಿನ ಸುಭಾಷಿತ
ವಿಜ್ಞಾನಗುಣಮಹಾರ್ಘೇ ಪುರುಷೇ
ದ್ವೇಷ್ಯತ್ವಮಪಿ ರಮಣೀಯಮ್ |
*ಜನನಿಂದಿತೇ ಪುನರ್ಜನೇ*
ಪ್ರಿಯತ್ವೇನಾಪಿ ಲಜ್ಜಾಮಹೇ ||
(ಹಾಲನ ಸಪ್ತಶತೀ)
ಉತ್ತಮವಾದ ವಿದ್ಯೆ, ಗುಣ ಇವುಗಳಿಂದ ಶ್ರೇಷ್ಠನಾದವನೊಡನೆ ಹಗೆತನವೂ ಸುಂದರವಾಗಿರುತ್ತದೆ. ಆದರೆ ಎಲ್ಲರಿಂದಲೂ ನಿಂದಿತನಾದವನೊಡನೆ ಗೆಳೆತನವು ನಾಚಿಕೆಗೇಡು.