newsics.com
ಭುವನೇಶ್ವರ: ಮಹಿಳಾ ನೌಕರರಿಗೆ ತಿಂಗಳಿಗೊಂದು ಮುಟ್ಟಿನ ರಜೆ ನೀಡುವುದಾಗಿ ಒಡಿಶಾ ಸರ್ಕಾರ ಘೋಷಿಸಿದೆ.
ಇದರನ್ವಯ, ವಾರ್ಷಿಕವಾಗಿ ಈಗಿರುವ 15 ಸಿಎಲ್ ಜೊತೆಗೆ ಹೆಚ್ಚುವರಿಯಾಗಿ 12 ರಜೆ ಸಿಗಲಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ಅಧಿಕೃತ ಪ್ರಕಟಣೆ ಹೊರಡಿಸಿದೆ.
ಮಹಿಳಾ ಉದ್ಯೋಗಿಗಳು ತಿಂಗಳಿಗೆ ಒಂದು ದಿನ ವೇತನ ಸಹಿತ ಮುಟ್ಟಿನ ರಜೆಗೆ ಅರ್ಹರಾಗಿರುತ್ತಾರೆ ಎಂಬುದಾಗಿ ಉಪ ಮುಖ್ಯಮಂತ್ರಿ ಪ್ರವತಿ ಪರಿದಾ ಅವರು ಸ್ವಾತಂತ್ರ್ಯ ದಿನದಂದು ಹೇಳಿಕೆ ನೀಡಿದ್ದರು. ಅದರನ್ವಯ ಸರ್ಕಾರ ಇದೀಗ ಜಾರಿಗೆ ತಂದಿದೆ. ಈಗ, ಮಹಿಳಾ ಉದ್ಯೋಗಿಗಳಿಗೆ ಸಿಎಲ್‌ಗಳ ಸಂಖ್ಯೆ 27ಕ್ಕೆ ಏರಿದ್ದು, ಪುರುಷರಿಗೆ 15 ಸಿಎಲ್ ಸಿಗುತ್ತಿದೆ.