newsics.com
ಮುಂಬೈ : ಕಾಜೋಲ್- ಅಜೆಯ್ ದೇವಗನ್ ಪುತ್ರಿ ನೀಸಾ ದೇವಗನ್ ಹಳೆಯ ಫೋಟೋಗಳು ವೈರಲ್ ಆಗಿವೆ.
ನೀಸಾ ಅವರ ಮೊದಲಿನ ಫೋಟೋ ಹಾಗೂ ಈಗಿನ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಮೇಲೆ ಇರುವ ಫೋಟೋದಲ್ಲಿ ವ್ಯತ್ಯಾಸವನ್ನು ಸರಿಯಾಗಿ ಗುರುತಿಸಬಹುದು. ಬಹುತೇಕ ನಟಿಯರು ತಮ್ಮ ವಿವಿಧ ಅಂಗಗಳಿಗೆ ಪ್ಲಾಸ್ಟಿಕ್ ಸರ್ಜರಿ ಹಾಕಿಸಿಕೊಂಡು ಸುಂದರಿಯಾಗಿ ಕಾಣಿಸ್ತಿರೋರೇ. ಶ್ರೀದೇವಿ ಕಾಲದಿಂದಲೂ ಇದು ನಡೆದು ಬಂದಿದೆ.
ನೀಸಾ ಕೂಡ ಮುಖದ ಅಂದ ಹೆಚ್ಚಿಸಿಕೊಳ್ಳಲು ಕೆಲವು ಶಸ್ತ್ರಚಿಕಿತ್ಸೆಗಳ ಮೊರೆ ಹೋಗಿರುವುದು ಇದೆ. ಬಹುಶಃ ಇವರ ಮೊದಲಿನ ಫೋಟೋ ನೋಡಿದರೆ, ಅವರೇ ಇವರು ಹೌದಾ ಎನ್ನುವ ಹಾಗಿದೆ. ಒಟ್ಟಿನಲ್ಲಿ ಈಗ ಸೌಂದರ್ಯದಿಂದಲೇ ನೀಸಾ ಎಲ್ಲರ ಮನಸ್ಸನ್ನು ಸೂರೆಗೊಳ್ಳುತ್ತಿದ್ದಾರೆ.
ನ್ಯಾಸ ದೇವಗನ್ ಎಂದು ಕರೆಸಿಕೊಳ್ಳುವ ಈಕೆಯ ನಿಜವಾದ ಹೆಸರು ನೀಸಾ (Nysa) ಅಂತೆ. ಆದರೆ ನ್ಯಾಸ ಎನ್ನುವುದು ಜನಪ್ರಿಯ ಹೆಸರಾಗಿರುವ ಕಾರಣ ಎಲ್ಲರೂ ಹಾಗೆಯೇ ಕರೆಯುವುದುಂಟು. ಕೆಲವರು ನೈಸಾ, ನಿಶಾ, ನಿಶ್ಸಾ ಎಂದೂ ಕರೆಯುವುದು ಉಂಟು. ಇದೇ ರೀತಿ ಕರೆದಿರುವುದು ತಮಗೆ ಕಿರಿಕಿರಿ ಉಂಟು ಮಾಡುತ್ತದೆ ಎಂದು ಹಿಂದೊಮ್ಮೆ ನೀಸಾ ಹೇಳಿಕೊಂಡಿದ್ದರು. ಇದರ ವಿಡಿಯೋ ಒಂದು ವೈರಲ್ ಆಗಿತ್ತು. ವೈರಲ್ ವೀಡಿಯೊದಲ್ಲಿ, ನೀಸಾ, ತಮ್ಮ ಹೆಸರು ನ್ಯಾಸಾ ಅಲ್ಲ, ನೀಸಾ ಎನ್ನುವುದನ್ನು ಹೇಳುವುದನ್ನು ಕೇಳಬಹುದು. ಈಕೆ ಬರುತ್ತಿದ್ದಂತೆಯೇ ಪಾಪರಾಜಿಗಳು ನೈಸಾ, ನೈಶಾ ಎಂದೆಲ್ಲಾ ಕರೆಯಲು ಶುರು ಮಾಡಿದಾಗ ಕಾರಿನ ಒಳಗೆ ಕುಳಿತು ಸ್ವಲ್ಪ ಬೇಸರದಿಂದಲೇ ನನ್ನ ಹೆಸರು ನೀಸಾ ಎನ್ನುತ್ತಾರೆ ಈಕೆ.