newsics.com
ಇಂದು ಬೆಂಗಳೂರಿನಲ್ಲಿ ಬೆಳಗ್ಗೆಯಿಂದಲೇ ಸಾಧರಣ ಬಿಸಿಲಿದೆ. ಆದರೆ ಅಕ್ಟೋಬರ್ 21ರಿಂದ ಮಳೆ ಶುರುವಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಬಳ್ಳಾರಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ತುಮಕೂರು, ವಿಜಯನಗರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ದಾವಣಗೆರೆ, ಚಿತ್ರದುರ್ಗ, ಹಾವೇರಿ, ಕುಂದಾಪುರ, ಹಿರೇಕೆರೂರು, ಹುಣಸೂರು, ಶಿರಾಲಿ, ಕಿರವತ್ತಿ, ಶಿಗ್ಗಾಂವ್, ಮಂಕಿ, ಗೋಕರ್ಣ, ಶೋರಾಪುರ, ನರಗುಂದ, ನಾಯಕನಹಟ್ಟಿ, ಯಲ್ಲಾಪುರ, ನಂಜನಗೂಡು, ಕದ್ರಾ, ಮಂಕಿ, ಗಬ್ಬೂರು, ಬೈಲಹೊಂಗಲ, ಬಾದಾಮಿಯಲ್ಲಿ ಮಳೆಯಾಗಿದೆ.
ಇಂದು ಕರಾವಳಿ, ಉತ್ತರ, ದಕ್ಷಿಣ ಒಳನಾಡಿನಲ್ಲಿ ವ್ಯಾಪಕವಾಗಿ ಮಳೆಯಾಗುವ ಸಾಧ್ಯತೆ ಇದೆ, ಮಂಗಳೂರು, ಹಾವೇರಿ ಹಾಗೂ ತುಮಕೂರುತಲಾ 7 ಸೆಂ.ಮೀ, ದಾವಣಗೆರೆ 9 ಸೆಂ.ಮೀ ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ 21ರ ವರೆಗೆ ವ್ಯಾಪಕ ಮಳೆ ಸಾಧ್ಯತೆ ಇದೆ. ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಿಗೆ ಅಕ್ಟೋಬರ್ 19ರವರೆಗೆ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.