newsics.com
ಚಿಕ್ಕಬಳ್ಳಾಪುರ: ಖಾಸಗಿ ಸಂಸ್ಥೆಯೊಂದು ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗಿರಿಧಾಮದ ಮೇಲೆ ಪ್ರವಾಸಿಗರಿಗೆ ಪ್ಯಾರಾಗ್ಲೈಡಿಂಗ್ ಆರಂಭಿಸಿದೆ. ಪ್ರವಾಸಿಗರು ಮುಗಿಬಿದ್ದು ಪ್ಯಾರಾಗ್ಲೈಂಡಿಂಗ್ ಮಾಡುತ್ತಿದ್ದಾರೆ. ಹೀಗಾಗಿ ಪ್ರತಿದಿನ ನಂದಿಗಿರಿಧಾಮದ ಮೇಲೆ ಪ್ಯಾರಾಗ್ಲೈಡಿಂಗ್ ಮಾಡಬಹುದಾಗಿದೆ.
ಪ್ರವಾಸಿಗರು ತಲಾ 3600 ರೂಪಾಯಿ ಫೀಸ್ ನೀಡಿ 10-15 ನಿಮಷಗಳ ಕಾಲ ಹಕ್ಕಿಯಂತೆ ಆಕಾಶದಲ್ಲಿ ಹಾರಾಡಬಹುದಾಗಿದೆ. ಆಕಾಶದಿಂದ ಆದಿಯೋಗಿ ಪ್ರತಿಮೆ, ನಂದಿ ಗಿರಿಧಾಮ ನೋಡಬಹುದು.
ಸಾಮಾಜಿಕ ಜಾಲತಾಣದಲ್ಲಿ ಪ್ಯಾರಾಗ್ಲೈಡಿಂಗ್ ದೃಶ್ಯಗಳನ್ನು ನೋಡಿ ಪ್ರವಾಸಿಗರು ಆಕರ್ಷಣೆಗೆ ಒಳಗಾಗುತ್ತಿದ್ದಾರೆ. ಪ್ರತಿದಿನ ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಯ ಜನರು ನಂದಿ ಗಿರಿಧಾಮಕ್ಕೆ ಆಗಮಿಸಿ ಪ್ಯಾರಾಗ್ಲೈಡಿಂಗ್ ಕ್ಷಣಗಳನ್ನು ಅನುಭವಿಸುತ್ತಿದ್ದಾರೆ.