newsics.com
ಬೈರೂತ್: ಒಂದು ವರ್ಷ ಕಳೆದರೂ ಇಸ್ರೇಲ್-ಹಮಾಸ್-ಹಿಜ್ಬುಲ್ಲಾ ನಡುವೆ ಸೇಡು, ಪ್ರತೀಕಾರದ ದಾಳಿಗಳು ತೀವ್ರಗೊಳ್ಳುತ್ತಿವೆ. ಬೈರೂತ್ ನಗರದ ಮೇಲೆ ಇಸ್ರೇಲ್‌ನ ಪಡೆಗಳು ವೈಮಾನಿಕ ದಾಳಿ ಮುಂದುವರಿಸಿವೆ. ಇರಾನ್ ಸುಪ್ರೀಂ ಲೀಡರ್ ಇಸ್ರೇಲ್ ವಿರುದ್ಧ ಗುಡುಗಿದ ಬಳಿಕ ಇಸ್ರೇಲ್ ತನ್ನ ವಾಯುದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದೆ.
ಈ ಮಧ್ಯೆ ನಿನ್ನೆ ನಡೆಸಿದ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾದ ಲಾಜಿಸ್ಟಿಕ್ ಘಟಕದ ಮುಖ್ಯಸ್ಥ ಸುಹೇಲ್ ಹುಸೇನ್ ಹುಸೇನಿ ಅವರನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್ ರಕ್ಷಣಾ ಪಡೆ ಇಂದು ಹೇಳಿಕೊಂಡಿದೆ.
ಸೇನಾ ಕಾರ್ಯಾಚರಣೆಯ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಇಸ್ರೇಲ್, ಸೋಮವಾರ ಅಂದ್ರೆ ಅಕ್ಟೋಬರ್ 7ರಂದು ಯುದ್ಧದ ವರ್ಷಾಚರಣೆ ವೇಳೆ ಬೈರೂತ್‌ನಲ್ಲಿ ನಡೆಸಿದ ದಾಳಿಯಲ್ಲಿ ಹುಸೇನಿಯನ್ನು ಹತ್ಯೆಗೈಯಲಾಗಿದೆ ಎಂದು ಹೇಳಿದೆ. ಆದ್ರೆ ಹಿಜ್ಬುಲ್ಲಾ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.