newsics.com
ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಜಾಮೀನು ಅರ್ಜಿಯ ವಿಚಾರಣೆ ಅಕ್ಟೋವರ್ 8ಕ್ಕೆ ಮುಂದೂಡಿಕೆಯಾಗಿದೆ.
ಹೀಗಾಗಿ ಜಾಮೀನು ಪಡೆಯಲು ಹರಸಾಹಸಪಡುತ್ತಿರುವ ನಟ ದರ್ಶನ್ ಇನ್ನಷ್ಟು ದಿನ ಜೈಲಲ್ಲಿರುವುದು ಅನಿವಾರ್ಯವಾಗಿದೆ.
ಜಾಮೀನು ಅರ್ಜಿ ವಿಚಾರಣೆ ಕಳೆದೊಂದು ವಾರದಿಂದ ನಡೆಯುತ್ತಿದೆ. ನಿನ್ನೆ (ಅಕ್ಟೋಬರ್ 04) ದರ್ಶನ್ ಪರ ಖ್ಯಾತ ವಕೀಲ ಸಿವಿ ನಾಗೇಶ್ ಅವರು ಸುದೀರ್ಘವಾಗಿ ವಾದ ಮಂಡನೆ ಮಾಡಿದ್ದರು. ಸಮಯದ ಅಭಾವದಿಂದ ಇಂದಿಗೆ (ಅಕ್ಟೋಬರ್ 05) ಮುಂದೂಡಲಾಗಿತ್ತು. ಇಂದು 12:30ಗೆ ಆರಂಭವಾದ ಸಿವಿ ನಾಗೇಶ್ ಅವರ ವಾದ ಸಂಜೆವರೆಗೂ ನಡೆಯಿತು.
ವಾದವನ್ನೆಲ್ಲ ಆಲಿಸಿದ ನ್ಯಾಯಾಧೀಶರು, ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 8ಕ್ಕೆ ಮುಂದೂಡಿದರು.
ಸಿವಿ ನಾಗೇಶ್ ಆರೋಪ ಪಟ್ಟಿಯಲ್ಲಿರುವ ವೈರುಧ್ಯಗಳ ಬಗ್ಗೆ ನ್ಯಾಯಾಲಯದ ಗಮನ ಸೆಳೆದರು. ಪೊಲೀಸರು ತನಿಖೆಯನ್ನು ಸರಿಯಾಗಿ ನಡೆಸಿಲ್ಲ ಎಂದು ಹೇಳಿ ಕೆಲವು ಉದಾಹರಣೆ ನೀಡಿದರು. ಇಂದಿನ ವಾದದಲ್ಲಿ ಸಾಕ್ಷ್ಯಗಳು, ಸಾಕ್ಷಿಗಳ ಹೇಳಿಕೆ, ಮರಣೋತ್ತರ ಪರೀಕ್ಷಾ ವರದಿ, ಇತರೆ ಕೆಲವು ವರದಿಗಳನ್ನು ಗುರಿಯಾಗಿಸಿಕೊಂಡು ನಾಗೇಶ್ ವಾದ ಮಂಡಿಸಿದರು.
ಪಾಕಿಸ್ತಾನಕ್ಕೆ ಹೋಗುತ್ತಿರುವುದು ಬಹುಪಕ್ಷೀಯ ಕಾರ್ಯಕ್ರಮಕ್ಕೆ: ಜೈಶಂಕರ್
ರೈತರಿಗೆ ಗುಡ್ ನ್ಯೂಸ್; ಸರ್ಕಾರಿ ಭೂಮಿ ಸಕ್ರಮಗೊಳಿಸಲು ಮುಂದಾದ ಕಾಂಗ್ರೆಸ್
18ನೇ ಕಂತಿನ ಪಿಎಂ ಕಿಸಾನ್ ನಿಧಿ ಬಿಡುಗಡೆ; 9.4 ಕೋಟಿ ರೈತರಿಗೆ 20,000 ಕೋಟಿ ರೂ. ಜಮಾ