newsics.com
ಮುಂಬೈ: ಉದ್ಯಮಿಯೊಬ್ಬರು ಬುಧವಾರ ಮುಂಜಾನೆ ಮುಂಬೈ ಟ್ರಾನ್ಸ್ ಹಾಬರ್ ಲಿಂಕ್ ನ ಭಾಗವಾದ ಅಟಲ್ ಸೇತುದಿಂದ ಜಿಗಿದು ಸಾವಿಗೀಡಾಗಿದ್ದಾರೆ.
ರಾಷ್ಟ್ರೀಕೃತ ಬ್ಯಾಂಕ್ನ ಡೆಪ್ಯುಟಿ ಮ್ಯಾನೇಜರ್ ಒಬ್ಬರು ಅಟಲ್ ಸೇತು ಮೇಲಿಂದ ಹಾರಿ ಪ್ರಾಣ ಬಿಟ್ಟ ಎರಡು ದಿನಗಳ ನಂತರ ಈ ಘಟನೆ ನಡೆದಿದೆ.
ಮಂಗಳವಾರ ನವಿ ಮುಂಬೈನ ಸಮುದ್ರ ತೀರದಲ್ಲಿ ಅವರ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಮೃತರನ್ನು ಫಿಲಿಪ್ ಹಿತೇಶ್ ಶಾ ಎಂದು ಗುರುತಿಸಲಾಗಿದೆ, ಅವರು ಮಾಟುಂಗಾದಲ್ಲಿ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದರು. ಕಳೆದ ಕೆಲವು ತಿಂಗಳುಗಳಿಂದ ಫಿಲಿಪ್ ಶಾ ಖಿನ್ನತೆಗೆ ಒಳಗಾಗಿದ್ದರು. ಇದರಿಂದಾಗಿ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಕುಟುಂಬದವರು ಶಂಕಿಸಿದ್ದಾರೆ.