newsics.com
ಮುಂಬೈ: ಕಳೆದ ವಾರದಿಂದ ಬಂಗಾರದ ದರ ನಾಗಾಲೋಟದಲ್ಲಿ ಓಡುತ್ತಿದ್ದು, ದಾಖಲೆಯನ್ನೇ ನಿರ್ಮಿಸಿದೆ. 2 – 3 ಬಾರಿ ಚಿನ್ನ ಚಿನ್ನ ಕುಸಿತ ಕಂಡರೂ, ಬುಧವಾರ ಬಂಗಾರದ ದರದಲ್ಲಿ ತೀವ್ರ ಏರಿಕೆಯಾಗಿದೆ. ಬೆಂಗಳೂರಲ್ಲಿ ಬುಧವಾರ ಚಿನ್ನದ ದರ ಹೆಚ್ಚಾಗಿದ್ದು, ಬೆಳ್ಳಿ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದೆ.
ಜಾಗತಿಕ ವಿದ್ಯಮಾನ, ಡಾಲರ್ ಎದುರು ರೂಪಾಯಿ ಮೌಲ್ಯ, ಷೇರು ಮಾರುಕಟ್ಟೆಯಲ್ಲಿ ಏರಿಕೆ – ಇಳಿಕೆಯ ಆಧಾರದ ಮೇಲೂ ಆಭರಣ ದರದಲ್ಲಿ ವ್ಯತ್ಯಾಸವಾಗುತ್ತಿರುತ್ತದೆ.
ಒಂದು ಗ್ರಾಂ (1GM) 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 7,100, 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ರೂ. 7,745 ರೂ. ಇದೆ.
ಹತ್ತು ಗ್ರಾಂ (10GM) 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 71,000, 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ರೂ. 77,450 ರೂ. ಇದೆ.
ದೇಶದ ಪ್ರಮುಖ ಮೆಟ್ರೋಪಾಲಿಟನ್ ಆನಗರಗಳಾದ ಚೆನ್ನೈ, ಮುಂಬೈ ಹಾಗೂ ಕೋಲ್ಕತ್ತಾದಲ್ಲಿ ಕ್ರಮವಾಗಿ 10 ಗ್ರಾಂ ಚಿನ್ನದ ಬೆಲೆ ರೂ. 71,000, ರೂ. 71,000 ಹಾಗೂ 71,150 ರೂ. ಆಗಿದೆ. ಅದೇ ರೀತಿ, ರಾಷ್ಟ್ರ ರಾಜಧಾನಿ ಹೊಸ ದೆಹಲಿಯಲ್ಲಿ ಚಿನ್ನದ ಬೆಲೆ ಬುಧವಾರ 71,150 ರೂ. ಆಗಿದ್ದು, ಬೆಲೆಯಲ್ಲಿ ಇಳಿಕೆಯಾಗಿದೆ.
ದೇಶದಲ್ಲಿ ಬೆಳ್ಳಿ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಇಂದು, ಬೆಂಗಳೂರಿನಲ್ಲಿ 10 gm, 100 gm, 1000 gm (1ಕೆಜಿ) ಬೆಳ್ಳಿ ದರ ಕ್ರಮವಾಗಿ ರೂ. 900, ರೂ 9,000 ಹಾಗೂ ರೂ. 90,000 ಆಗಿದೆ. ದೇಶದ ಇತರೆ ಪ್ರಮುಖ ನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 1,01,000 ಆಗಿದ್ದು, ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ರೂ. 95,000 ಹಾಗೂ ಕೋಲ್ಕತ್ತದಲ್ಲಿ 1 ಕೆಜಿ ಬೆಳ್ಳಿ ದರ ರೂ. 95,000 ಆಗಿದೆ. ಅದೇ ರೀತಿ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 1 ಕೆಜಿ ಬೆಳ್ಳಿ ದರ 95,000 ರೂ. ಆಗಿದೆ.
ಬಿಗ್‌ಬಾಸ್‌ನಿಂದ ಚೈತ್ರಾ ಕುಂದಾಪುರ ಕೈಬಿಡುವಂತೆ ಚಾನಲ್‌ಗೆ ವಕೀಲರ ನೋಟಿಸ್
ಹಿಂದುಗಳ ಹೆಸರಲ್ಲಿ ಪಾಕಿಸ್ತಾನಿಯರ ವಾಸ: ದಾವಣಗೆರೆಯಲ್ಲಿ ನಾಲ್ವರ ಬಂಧನ
ಗಾಂಧಿ ಜಯಂತಿ ವೇಳೆ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಕಾರ್ಯಕರ್ತನಿಂದ ರಾಷ್ಟ್ರಧ್ವಜಕ್ಕೆ ಅವಮಾನ, ವೈರಲ್ ವಿಡಿಯೋ ನೋಡಿ
ಕನ್ನಡತಿ ಧಾರಾವಾಹಿ ನಟಿ ಜತೆ ಲಿವಿಂಗ್ ರಿಲೇಷನ್‌ಶಿಪ್: ಮದುವೆಗೆ ನಿರಾಕರಣೆ, ಯುವಕ ಆತ್ಮಹತ್ಯೆ